Posts

Showing posts from November, 2024
  ರೂ 100ಕ್ಕಿಂತ ಕಡಿಮೆ ಬೆಲೆಯ ಈ "ಸ್ಪ್ಲಿಟ್ " ಷೇರುಗಳ ಬಗ್ಗೆ ನಿಮ್ಮ ಗಮನವಿರಲಿ  ಸಾಮಾನ್ಯವಾಗಿ ಬೋನಸ್ ಷೇರು -ಷೇರು  ಸ್ಪ್ಲಿಟ್ ಸಂದರ್ಭದಲ್ಲಿ ಷೇರು  ಬೆಲೆ ಒಮ್ಮೆಗೆ ಏರಿಕೆಯಾಗುತ್ತದೆ. ಆ ಸಂದರ್ಭದಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ಹೆಚ್ಚು ಅನ್ನುವುದು ಮಾರುಕಟ್ಟೆ ಹೂಡಿಕೆದಾರರ ಗಾಢ ನಂಬಿಕೆ.  ಈ ವರ್ಷಾಂತ್ಯದ ವೇಳೆಗೆ ಹಲವಾರು ಕಂಪೆನಿಗಳು ತಮ್ಮ ಷೇರು ಮುಖಬೆಲೆಯನ್ನು ಸ್ಪ್ಲಿಟ್ ಮಾಡುತ್ತಿವೆ.  ಈ ಪೈಕಿ ಕೆಲವು ಷೇರುಗಳು ನಿಮ್ಮನ್ನು ಲಕ್ಷಾಧೀಶರನ್ನಾಗಿಸಬಲ್ಲವು.  ಡಿಸೆಂಬರ್ ನಲ್ಲಿ ಸ್ಪ್ಲಿಟ್ ಆಗುತ್ತಿರುವ ಷೇರುಗಳು  ಪಿ ಸಿ ಜ್ಯುವೆಲ್ಲರ್ಸ್  ಶ್ರದ್ದಾ ಎಐ ಟೆಕ್ನಾಲಾಜಿಸ್  ಅಚ್ಯುತ್ ಹೆಲ್ತ್ ಕೇರ್  ಎಸ್ಕ್ಸ್ರೋ  ಟೈಲ್ಸ್  ಈ ನಾಲ್ಕು ಕಂಪನಿಗಳ  ಬಗ್ಗೆ ಮಾರುಕಟ್ಟೆಯಲ್ಲಿ ಒಳ್ಳೆ ಮಾತಿದೆ. ಹಾಗಾಗಿ ನೀವು ಈ ಷೇರುಗಳ ಬಗ್ಗೆ ಯೋಚಿಸಬಹುದು. 
 ಆಸ್ಟರ್ ಡಿಎಂ, ಪಿ ಸಿ ಜ್ಯೂವೆಲ್ಲರ್  ಷೇರು ಏರಿಕೆ ಮೇಲೆ ನಿಮ್ಮ ಗಮನವಿರಲಿ  ಸದ್ಯಕ್ಕೆ ಸುದ್ದಿಯಲ್ಲಿರುವ ಎರಡು ಮಹತ್ವದ ಷೇರುಗಳೆಂದರೆ ಆಸ್ಟರ್ ಡಿಎಂ, ಹಾಗು  ಪಿ ಸಿ ಜ್ಯೂವೆಲ್ಲರ್. ಇವೆರಡು ಸದ್ಯಕ್ಕೆ ಅಗ್ಗವಾಗಿಯೇ ದೊರೆಯುತ್ತಿವೆ. ಆದರೆ  ಇನ್ನೆರಡು ತಿಂಗಳಲ್ಲಿ ಅವುಗಳು ಆಗಸದೆತ್ತರಕ್ಕೆ ನೆಗೆಯುವ ಸಾಧ್ಯತೆ ಇದೆ.  ಆಸ್ಟರ್ ಡಿಎಂ ಷೇರು ಸದ್ಯಕ್ಕೆ ಆ ಸಮೂಹದ ವಿಸ್ತರಣೆ ಕಾರಣಕ್ಕೆ ಸುದ್ದಿಯಲ್ಲಿದೆ. ಹೈದರಾಬಾದ ಮೂಲದ ಕ್ವಾಲಿಟಿ ಕೇರ್ ಸಂಸ್ಥೆಯ ಜೊತೆಗಿನ ಕೈಜೋಡಿಸುವಿಕೆ  ಷೇರುದಾರರಿಗೆ ಭರಪೂರ ಲಾಭ ತಂದುಕೊಡಬಲ್ಲದು.  ಇನ್ನು   ಪಿ ಸಿ ಜ್ಯೂವೆಲ್ಲರ್  ಷೇರು ಮುಖಬೆಲೆಯನ್ನು ೧೦ ರೂಪಾಯಿಯಿಂದ ೧ ರುಪಾಯಿಗೆ ಇಳಿಸಲು ಸಂಸ್ಥೆ ನಿರ್ಧರಿಸಿದೆ. ಡಿಸೆಂಬರ್ ೧೬ ಇದಕ್ಕಾಗಿ ರೆಕಾರ್ಡ್  ಡೇಟ್ ಎಂದು ನಿಗದಿಪಡಿಸಲಾಗಿದೆ.  ಈ ಷೇರು ಕೂಡಾ ಅತಿ ಅಗ್ಗಕ್ಕೆ ಸದ್ಯಕ್ಕೆ ಲಭ್ಯವಿದೆ. 
 ಈ ಕೆಲವು ಅಗ್ಗದ ಷೇರುಗಳು ನಿಮಗೆ ಲಾಭ ತಂದುಕೊಡಬಲ್ಲವು  ಬಹುತೇಕ ಒಳ್ಳೆ ಕಂಪನಿಗಳ ಷೇರುಗಳು ಈಗ ಐನೂರರ ಗಡಿ ದಾಟಿವೆ. ಹಾಗಾದರೆ ಕಡಿಮೆ ಹೂಡಿಕೆ- ಗರಿಷ್ಠ ಲಾಭ ಪಡೆಯಲು ನೀವು ಯೋಚಿಸುತ್ತಿದ್ದರೆ, ನೀವು ಈ ಕೆಳಗಿನ ಷೇರುಗಳ ಬಗ್ಗೆ ಯೋಚಿಸಬಹುದು.  ಎಂಟಿಪಿಸಿ ಗ್ರೀನ್  ಭಾರತ್ ಗೆರ್ಸ್ ಲಿಮಿಟೆಡ್  ಬಿಸಿಎಲ್ ಇಂಡಸ್ಟ್ರೀಸ್  ಸರ್ವೇಶ್ವರ್ ಫುಡ್  ಅಪೋಲೋ ಮೈಕ್ರೋ ಸಿಸ್ಟಮ್ಸ್ ಆಂಧ್ರ ಸಿಮೆಂಟ್ಸ್  ಡಿಸಿಎಂ  ಜೆನುಸ್ ಪೇಪರ್ಸ್  ಸೌತ್  ಇಂಡಿಯನ್ ಬ್ಯಾಂಕ್  ಯಸ್ ಬ್ಯಾಂಕ್  (ಸೂಚನೆ:  ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ.  ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.) 
 ಮತ್ತೆ ನಿಜವಾದ ವಿಶ್ಲೇಷಣೆ : ಬಿ ಇ ಎಲ್ - ಎಚ್ ಎ ಎಲ್ ಷೇರು ಖರೀದಿಗೆ JPMorgan ಶಿಫಾರಸು ವಿಶ್ವ ವಿಖ್ಯಾತ ಜೆಪಿ ಮಾರ್ಗನ್ ಸಂಸ್ಥೆ ಎರಡು ರಕ್ಷಣಾ ಕ್ಷೇತ್ರದ ಷೇರುಗಳ ಖರೀದಿಗೆ ಶಿಫಾರಸು ಮಾಡಿದೆ. ಸಂಸ್ಥೆ ಪ್ರಕಾರ  ಬಿ ಇ ಎಲ್ ಷೇರು  340 ರೂಪಾಯಿ ತಲುಪುವ ಸಾಧ್ಯತೆ ಇದ್ದು, ಎಚ್ ಎ ಎಲ್ ಷೇರು ಬೆಲೆ 5,135  ರೂಪಾಯಿ ತಲುಪುವ ಸಾಧ್ಯತೆ ಇದೆ.  ಸದ್ಯಕ್ಕೆ ಎರಡು ಕಂಪನಿಗಳ ಷೇರು ಬೆಳೆಗಳು ಅತ್ಯಂತ ಕಡಿಮೆಗೆ ದೊರೆಯುತ್ತಿದೆ.  ನಾವು ದೀಪಾವಳಿ ಸಮಯದಿಂದ ಈ ಎರಡು ಷೇರುಗಳ ಖರೀದಿಗೆ ಶಿಫಾರಸು ಮಾಡುತ್ತಿದ್ದೇವೆ. 
 ಇಂದು ಮಾರುಕಟ್ಟೆ ಯಲ್ಲಿ ಸಣ್ಣ ಮಟ್ಟದ ರಕ್ತದೋಕುಳಿ ಸಾಧ್ಯತೆ  ಎರಡು ದಿನಗಳ  ರ್‍ಯಾಲಿ. ಬಳಿಕ ಇಂದು ಷೇರು ಮಾರುಕಟ್ಟೆಯಲ್ಲಿ ಸಣ್ಣ ಮಟ್ಟದ ರಕ್ತದೋಕುಳಿ ಸಾಧ್ಯತೆ ಇದೆ. ಪ್ರಾಫಿಟ್ ಬುಕ್ಕಿಂಗ್ ದೊಡ್ಡ ಮಟ್ಟದಲ್ಲಿ ನಡೆಯುವ ಸಾಧ್ಯತೆ ಇದೆ. ಹಾಗಾಗಿ ಇಂದು ಮಾರಾಟಕ್ಕಿಂತ ಖರೀದಿ ಬಗ್ಗೆ ಹೂಡಿಕೆದಾರರು ಯೋಚಿಸಬಹುದು.  ಯುರೋಪ್ ಹಾಗು ಅಮೇರಿಕ ಮಾರುಕಟ್ಟೆಗಳಲ್ಲಿ  ಸೂಚ್ಯಂಕ ಏರಿಕೆ ಕಂಡಿದ್ದರೂ, ಏಷ್ಯಾ ಮಾರುಕಟ್ಟೆಗಳು ಇಂದು ದುರ್ಬಲವಾಗಿದ್ದು, ಸೂಚ್ಯಂಕ ಕೆಳಗಿಳಿದಿದೆ. ಈ ಇದು ಕೂಡಾ ಭಾರತೀಯ ಮಾರುಕಟ್ಟೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.   ಆದರೆ, ಮಹಾರಾಷ್ಟ್ರ ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿಕೂಟ ಭರ್ಜರಿ ಜಯ ಗಳಿಸಿರುವುದರಿಂದ, ಸೂಚ್ಯಂಕ 82,000 ಗಡಿ ದಾಟುವವರೆಗೆ  ಯಾವುದೇ ಮಹಾಪತನ ಕಾಣಲಾರದು ಎನ್ನುತ್ತಾರೆ ತಜ್ಞರು.  ಈ ನಡುವೆ ನೀವು ಈ ಸಂದರ್ಭದಲ್ಲಿ ಖರೀದಿಸಬಹುದಾದ ಅತ್ಯುತ್ತಮ ಷೇರುಗಳ ಬಗ್ಗೆ ನಮ್ಮ ವಿಶ್ಲೇಷಣೆಗಾಗಿ ನಿರಂತರವಾಗಿ ಈ ಬ್ಲಾಗ್ ಓದುತ್ತೀರಿ 
 ತಜ್ಞರು ಈ ಷೇರುಗಳ ಖರೀದಿಗೆ ತಜ್ಞರ ಶಿಫಾರಸು  ನೀವು ದೀರ್ಘಾವಧಿಯ ಹೂಡಿಕೆದಾರರಾಗಿದ್ದರೆ, ನಿಮಗೆ ಈ ಷೇರುಗಳನ್ನು ಇಂದು ಖರೀದಿಸಬಹುದು ಎಂದು ತಜ್ಞರು ಶಿಫಾರಸು ಮಾಡುತ್ತಾರೆ. ಈ ಷೇರುಗಳ ಪಟ್ಟಿ ಈ ಕೆಳಗಿನಂತಿದೆ.  ಐಟಿಸಿ ಷೇರು: ರೂ  45 ಲಾಭ  ಎಸ್  ಬಿ ಐ:  ರೂ  80 ಲಾಭ  ಎಲ್ ಟಿ  ಐ ಮೈಂಡ್ ಟ್ರೀ: ರೂ  1,100 ಲಾಭ.  ಟಾಟಾ  ಮೋಟಾರ್ಸ್: ರೂ 50 ಲಾಭ.  ಜೂಬಿಲಿಯೆಂಟ್ ಫುಡ್ಸ್: ರೂ 55 ಲಾಭ.  ಇನ್ನು ವೇದಾಂತ, ಬಿಎಎಲ್, ಐಡಿಬಿಐ, ಎ ಟಿ ಜಿ ಎಲ್, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಹೀಗೆ ಹಲವಾರು ಷೇರುಗಳು ಈಗ ಅಗ್ಗದ ಬೆಲೆಯಲ್ಲಿ ಲಭ್ಯವಿದ್ದು, ಹೂಡಿಕೆದಾರರು ಎಚ್ಚರಿಕೆಯಿಂದ ಹೂಡಿಕೆ ಮಾಡಬಹುದು.   
 ನಮ್ಮ ಹಿಂದಿನ ವಿಶ್ಲೇಷಣೆ ಮತ್ತೆ ಸತ್ಯವಾಗಲಿದೆ: ಇಂದು ಕೂಡಾ ಏರಲಿದೆ ಷೇರು ಮಾರುಕಟ್ಟೆ  ಕಳೆದ ವಾರ ರಕ್ತದೋಕುಳಿ ಕಂಡಿದ್ದ ಷೇರು ಮಾರುಕಟ್ಟೆ ಈ ವಾರ ಮಹಾರಾಷ್ಟ್ರ ಚುನಾವಣಾ ಫಲಿತಾಂಶದ ಮೇಲೆ  ಅವಲಂಬಿತವಾಗಿರಲಿದೆ ಎಂದು ನಾವು ವಿಶ್ಲೇಷಿಸಿದ್ದೆವು. ಮಹಾರಾಷ್ಟ್ರ ಚುನಾವಣೆಯ  ಎಕ್ಸಿಟ್ ಪೋಲ್ ಆಧಾರದ ಮೇಲೆ ಸುಮಾರು ಎರಡು ಸಾವಿರ ಏರಿಕೆ ಕಂಡಿದ್ದ ಸೂಚ್ಯಂಕ ಇಂದು ಮತ್ತೆಆಗಸದೆತ್ತರಕ್ಕೆ ಚಿಮ್ಮಲಿದೆ.  ಒಂದೊಮ್ಮೆ ಹೊಸ ಆರೋಪಗಳು ಇಲ್ಲವಾಗುತ್ತಿದ್ದರೆ, ಆದಾನಿ ಗುಂಪಿನ ಷೇರುಗಳು ಇಂದು ಹೂಡಿಕೆದಾರರಿಗೆ ಭಾರಿ ಲಾಭ ತಂದುಕೊಡುವ ಸಾಧ್ಯತೆ ಇತ್ತು. ಆದರೆ ಇಂದು ಆದಾನಿ ಷೇರುಗಳನ್ನು ಹೊರತು ಪಡಿಸಿ ಉಳಿದ ಷೇರುಗಳು ಮೇಲಕ್ಕೇರುವ ಸಾಧ್ಯತೆ ಇದೆ.   ಮಹಾರಾಷ್ಟ್ರ ವಿಧಾನ ಸಭಾ ಚುನಾವಣಾ ಫಲಿತಾಂಶ  ಕೇಂದ್ರ  ಸರಕಾರ ಸುಧಾರಣಾ ನೀತಿಗಳನ್ನು ಮುಂದುವರಿಸಲು ನೀಡಿದ ಗ್ರೀನ್ ಲೈಟ್  ಎಂದು ತಜ್ಞರ ಅಭಿಪ್ರಾಯ. ಈಗ ಸರಕಾರ ತನ್ನ ಹಳೆಯ ಸುಧಾರಣಾ ಪ್ರಕ್ರಿಯೆ ಮುಂದುವರಿಸಿದರೆ,  ಬಹುತೇಕ ಮಾರುಕಟ್ಟೆ ಸೂಚ್ಯಂಕ ಹಿಂದಿನ ಸ್ಥಿತಿಗೆ ಮರಳಬಹುದು. 
ಇಂದು ಕೂಡಾ ಮಾರುಕಟ್ಟೆ ನೀರಸವಾಗಿರಲಿದೆ: ನಿಮ್ಮ ಸ್ಟ್ರಾಟೆಜಿ ಹೇಗಿರಬೇಕು? .  ಅದಾನಿ ವಿವಾದ ಇನ್ನು ಕೆಲ ದಿನ ಷೇರು ಮಾರುಕಟ್ಟೆಗೆ ಗ್ರಹಣದಂತೆ ಕಾಡಲಿದೆ. ಇಂದು ಕೂಡಾ ಮಾರುಕಟ್ಟೆಯಲ್ಲಿ ಇಳಿತ ಕಾಣಲಿದೆ. ಹೆಚ್ಚೆಂದರೆ ಸೂಚ್ಯಂಕ ಒಂದು ನೂರು ಅಂಕ ಮೇಲೆ ಏರಬಹುದು  ಈಗ ನೀವು ಷೇರು ಮಾರಾಟ ಮಾಡಲು ಸುಸಂದರ್ಭವಲ್ಲ. ಬದಲಿಗೆ ನೀವು ಹೂಡಿಕೆಗೆ ಇದು ಪ್ರಾಶಸ್ತ್ಯ ಕಾಲ. ನೀವು ನಮ್ಮ ಬ್ಲಾಗ್ ನ ಈ ಹಿಂದಿನ ಲೇಖನಗಳನ್ನು ನಿಮ್ಮಿಷ್ಟದ ಷೇರು ಖರೀದಿಗೆ ಓದಬಹುದು.  ಸದ್ಯದ ಮಟ್ಟಿಗೆ ನೀವು ಸುರಕ್ಷಿತ ಹೂಡಿಕೆಗೆ ಪಿಎಸ್ ಯು ಡಿಫೆನ್ಸ್ ಷೇರುಗಳನ್ನು ಖರೀದಿಸಬಹುದು. ಅಥವಾ ವೆಲ್ ರೆಪ್ಯೂಟೆಡ್ ಸಂಸ್ಥೆಯ ಷೇರುಗಳನ್ನು ಖರೀದಿಸಬಹುದಾಗಿದೆ. 
 ಈ ಷೇರುಗಳು ನಿಮ್ಮ ಗಮನದಲ್ಲಿರಲಿ ಇಂದಿನ ಮಾರುಕಟ್ಟೆ ವಾತಾವರಣ ನೋಡಿದರೆ, ಬಹುತೇಕ ನವಂಬರ್ ತಿಂಗಳಿನಲ್ಲಿ ಮಾರುಕಟ್ಟೆ ದೊಡ್ಡ ಮಟ್ಟದ ಏರಿಕೆ ದಾಖಲಿಸುವುದು ಅಸಂಭವ ಎನಿಸುತ್ತದೆ. ನೀವು ದೀರ್ಘಾವಧಿಯ ಹೂಡಿಕೆದಾರಗಿದ್ದರೆ ಈ ಕೆಳಗಿನ ಷೇರುಗಳು ನಿಮ್ಮ ಗಮನದಲ್ಲಿರಲಿ.  ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ & ಇಂಜಿನಿಯರ್ಸ್  ಕಂಪನಿಯು 13 ಹೈಬ್ರಿಡ್ ದೋಣಿಗಳ ವಿತರಣೆಗಾಗಿ ಪಶ್ಚಿಮ ಬಂಗಾಳ ಸರ್ಕಾರದ ಸಾರಿಗೆ ಇಲಾಖೆಯೊಂದಿಗೆ 226.2 ಕೋಟಿ ರೂಪಾಯಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ. ಈ ದೋಣಿಗಳು ಪಶ್ಚಿಮ ಬಂಗಾಳ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಡಿಯಲ್ಲಿ ಹೂಗ್ಲಿ ನದಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಟಾಟಾ ಪವರ್ : ಕಂಪನಿಯು ಭೂತಾನ್‌ನಲ್ಲಿ ಕನಿಷ್ಠ 5,000 MW   ವಿದ್ಯುತ್ ಉತ್ಪಾದನೆ ಸಂಬಂಧ  ಡ್ರಕ್ ಗ್ರೀನ್ ಪವರ್ ಕಾರ್ಪೊರೇಷನ್  ಜೊತೆಗೆ ಕೈ ಜೋಡಿಸಿದೆ. ಇದು ಸೌರ ವಿದ್ಯುತ್ ಹಾಗು ಜಲ ವಿದ್ಯುತ್ ಯೋಜನೆಗಳಾಗಿವೆ.  ಇನ್ನು ಈ ಸ್ಟಾಕ್ ಗಳಬಗ್ಗೆ ನಿಮ್ಮ ಗಮನವಿರಲಿ  ಕಳೆದ ಐದು ತಿಂಗಳಲ್ಲಿ ಅತಿ ಹೆಚ್ಚು ಮೌಲ್ಯ ಕಳೆದುಕೊಂಡ ಕಂಪೆನಿಗಳಲ್ಲಿ ಸೇರಿರುವ ಸಂಸ್ಥೆಗಳು  HAL  BEL SCI IDBI ವೇದಾಂತ ನೀವು ಈ ಸ್ಟಾಕ್ ಬಗ್ಗೆ ಯೋಚಿಸಬಹುದು.   
ಇಂದು ಅದಾನಿ ಷೇರುಗಳು ಪಾತಾಳಕ್ಕೆ ಇಳಿಯುವುದು ಖಚಿತ  ಭಾರತೀಯ ಷೇರು  ಹೂಡಿಕೆದಾರರ ಸಂಕಷ್ಟಕ್ಕೆ ಕೊನೆ ಇಲ್ಲ ಅನ್ನುವಂತಾಗಿದೆ. ಜೂನ್ ನಲ್ಲಿ ಆರಂಭವಾದ ಈ ಸಂಕಷ್ಟದ ಸರಮಾಲೆಗೆ ಹೊಸ ಸೇರ್ಪಡೆ ಈಗ ಅಮೆರಿಕದಲ್ಲಾಗಿದೆ.  ಅಮೇರಿಕಾದಲ್ಲಿ ಈಗ ಅದಾನಿ ವಿರುದ್ಧ ಹೊಸ ಆರೋಪ ಮಾಡಲಾಗಿದೆ. ಮೇಲ್ನೋಟಕ್ಕೆ ಈ ಆರೋಪ ಬಹಳ ಗಂಭೀರ ಸ್ವರೂಪದ್ದು ಅನ್ನುವಂತಿದೆ. ಪರಿಣಾಮ ಅದಾನಿ ಬಾಂಡ್ ಗಳು ಏಷ್ಯಾದಲ್ಲಿ ಕುಸಿದಿವೆ. ಈ ಆರೋಪದ ಪರಿಣಾಮ ಭಾರತೀಯ ಮಾರುಕಟ್ಟೆಯಲ್ಲೂ ಇಂದು ಪ್ರತಿಫಲಿಸಲಿದೆ.  ಅದಾನಿ ಷೇರುಗಳು ಕುಸಿದರೆ, ಅದು ಮಾರುಕಟ್ಟೆಯ ಮೇಲೆ ಫಲಿತಾಂಶ ಬೀರಲಿದೆ. ಒಟ್ಟಾರೆ ಇಂದು ಷೇರು ಮಾರುಕಟ್ಟೆಗೆ ಒಳ್ಳೆಯ ದಿನವಲ್ಲ.  ಆದರೆ ನೀವು ದೀರ್ಘಾವಧಿಯ ಹೂಡಿಕೆದಾರರಾಗಿದ್ದರೆ ಒಳ್ಳೆಯ ಷೇರು ಖರೀದಿಗೆ ಇದು ಸಕಾಲ 
 ಇಂದು ಸೂಚ್ಯಂಕ ಮೇಲೇರುವುದು ಖಚಿತ  ಕಳೆದ ವಾರದ ಮಾರುಕಟ್ಟೆ ರಕ್ತದೋಕುಳಿಯಿಂದ ಕಂಗೆಟ್ಟಿರುವ ಹೂಡಿಕೆದಾರರಿಗೆ ಇಂದು ಸೋಮವಾರ ಶುಭದಿನವಾಗುವ ಸೂಚನೆ ಇದೆ. ಬಹುತೇಕ ಇಂದು ಮಾರುಕಟ್ಟೆಯಲ್ಲಿ ಸೂಚ್ಯಂಕ ಮೇಲೇರುವ ಸಾಧ್ಯತೆ ಇದೆ.  ಶುಕ್ರವಾರ ಜಾಗತಿಕವಾಗಿ  ಬಹುತೇಕ ಷೇರು ಮಾರುಕಟ್ಟೆಗಳಲ್ಲಿ ಸೂಚ್ಯಂಕ ಇಳಿಕೆ ಕಂಡಿತ್ತು.  ಅಂದು ಭಾರತೀಯ ಮಾರುಕಟ್ಟೆಗಳು ಮುಚ್ಚಿದ್ದವು. ಈಗ ಮೂರೂ ದಿನಗಳ ಬಳಿಕ ಈಗಾಗಬಹುದು ಎಂಬುದು ಎಲ್ಲರ ಕುತೂಹಲ.  ಸೋಮವಾರ  ಭಾರತೀಯ ಮಾರುಕಟ್ಟೆ ಆರಂಭಕ್ಕೆ ಸುಮಾರು ಒಂದು ಗಂಟೆಗಳ ಮುನ್ನ ಏಷ್ಯನ್ ಮಾರುಕಟ್ಟೆಗಳಲ್ಲಿ ಮಿಶ್ರ  ಟ್ರೆಂಡ್ ಕಂಡು ಬರುತ್ತಿದೆ. ಆದರೆ ಸದ್ಯಕ್ಕೆ ಕಂಡು ಬರುತ್ತಿರುವ ಟ್ರೆಂಡ್ ಪ್ರಕಾರ ಭಾರತದಲ್ಲಿ ಸೂಚ್ಯಂಕ ಏರಿಕೆ ಕಾಣುವ ಸಾಧ್ಯತೆ ಇದೆ.  ವಿದೇಶಿ ಹೂಡಿಕೆ ಹೊರ ಹರಿವು ಇಂದು ಅಷ್ಟಾಗಿ ಕಂಡುಬರಲಿಕ್ಕಿಲ್ಲ ಅನ್ನುವುದು ತಜ್ಞರ ನಿರೀಕ್ಷೆ. ಅಕ್ಟೋಬರ್ ಇಡೀ  ತಿಂಗಳು ಹಾಗು  ನವಂಬರ್ ಮಧ್ಯಂತರಾದವರೆಗೆ ದೊಡ್ಡ ಪ್ರಮಾಣದಲ್ಲಿ ಕಂಡು ಬಂದ  ಈ ಹೊರ ಹರಿವಿನ ಪ್ರಕ್ರಿಯೆ ಸದ್ಯಕ್ಕೆ ನಿಲ್ಲಬಹುದು ಅನ್ನುವ ವಿಶ್ವಾಸ ತಜ್ಞರದ್ದು. ಇದು ಷೇರು ಮಾರುಕಟ್ಟೆಯಲ್ಲಿ ಸ್ಥಿರತೆ ತರುವ ಸಾಧ್ಯತೆ ಇದೆ.  (ಸೂಚನೆ:  ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ....
 ಈ ವಾರ ಮಾರುಕಟ್ಟೆ ಏನಾಗಬಹುದು?  ಭಾರತೀಯ ಷೇರುಮಾರುಕಟ್ಟೆಯಲ್ಲಿ  ಅಕ್ಟೋಬರ್ ನಿಂದ ಆರಂಭವಾದ ರಕ್ತದೋಕುಳಿ ಗುರುವಾರ ತನಕ ಮುಂದುವರಿದಿದೆ. ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳ ಷೇರು ಮಾರುಕಟ್ಟೆಗಳಲ್ಲಿ ಸೂಚ್ಯಂಕಗಳು ಹೊಸ ದಾಖಲೆ ಬರೆಯುತ್ತಿದ್ದಾರೆ, ಭಾರತದಲ್ಲಿ ಮಾತ್ರ ತದ್ವಿರುದ್ದ.  ಪಾಕಿಸ್ತಾನ ಷೇರು ಮಾರುಕಟ್ಟೆ ಕೂಡಾ ಮೊನ್ನೆ ೯೩,೦೦೦ ಅಂಕಗಳ ಗಡಿ ದಾಟಿದೆ. ಹಾಗಾದರೆ ಈ ವಾರ ಭಾರತದ ಷೇರು ಮಾರುಕಟ್ಟೆ ಏನಾಗಬಹುದು?  ಈ ವಾರ ಭಾರತೀಯ ಮಾರುಕಟ್ಟೆಯನ್ನು ಪ್ರಭಾವಿಸಲಿರುವ ಬಹು ದೊಡ್ಡ ಅಂಶ ಮಹಾರಾಷ್ಟ್ರ ಚುನಾವಣಾ ಎಕ್ಸಿಟ್ ಪೋಲ್ ಹಾಗು ಮತದಾನದ ಟ್ರೆಂಡ್. ೨೦ರಂದು ಮಹಾರಾಷ್ಟ್ರದಲ್ಲಿ ಮತದಾನ ನಡೆಯಲಿದೆ. ಮತದಾನ ಸದ್ಯಕ್ಕೆ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ  ಮಹಾಯುತಿಗೆ ಪೂರಕವಾಗಿದ್ದರೆ ದೊಡ್ಡ ಪ್ರಮಾಣದಲ್ಲಿ ಸೂಚ್ಯಂಕ ಏರಬಹುದು. ಒಂದೊಮ್ಮೆ, ಅದಕ್ಕೆ ತದ್ವಿರುದ್ಧವಾದ ಭಾವನೆ ಮೂಡಿದರೆ, ಮಾರುಕಟ್ಟೆಯಲ್ಲಿ ಇನ್ನೊಂದಿಷ್ಟು ದಿನ ರಕ್ತದೋಕುಳಿ ಖಚಿತ.  ಇನ್ನು ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಮಾರಾಟ ಪರ್ವ ಒಂದು ಹಂತದಲ್ಲಿ ನಿಂತಂತೆ ಭಾಸವಾಗುತ್ತಿದೆ. ಹಾಗಾಗಿ, ಈ ಅಂಶ ಮಾರುಕಟ್ಟೆಯ ಮೇಲೆ ಅಷ್ಟೊಂದು ದೊಡ್ಡ ಪ್ರಮಾಣದ ಪ್ರಭಾವ ಬೀರಲಿಕ್ಕಿಲ್ಲ. ಆದರೆ, ಎಲ್ಲರ ಕಣ್ಣು ಈಗ ನೆಟ್ಟಿರುವುದು ಸೋಮವಾರ ಏನಾಗಬಹುದು ಎಂಬುದರತ್ತ. 
 ಷೇರು ಮಾರುಕಟ್ಟೆ: ಈಗ ಹೂಡಿಕೆಗೆ ಸುಸಮಯವೇ? ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೆಲ್ ಇಂಡಿಯಾ-ಬೈ ಚೀನಾ ಸ್ಟ್ರಾಟೆಜಿ ಪರಿಣಾಮ, ಕಳೆದ ಕೆಲ ದಿನಗಳಿಂದ ದೇಶದ ಷೇರು ಮಾರುಕಟ್ಟೆಯಲ್ಲಿ ರಕ್ತದೋಕುಳಿಯೇ ಹರಿದಿದೆ. ಬುಧವಾರ ಸತತ ಐದನೇ ದಿನ ದೇಶಿಯ ಮಾರುಕಟ್ಟೆ ಕುಸಿತ ಕಂಡದ್ದು.  ನಿರಂತರವಾಗಿ  ಷೇರುಗಳನ್ನು ಮಾರಾಟ ಮಾಡುತ್ತಿರುವ ವಿದೇಶಿ ಹೂಡಿಕೆದಾರರು,   ನಿರಾಶಾದಾಯಕವಾಗಿರುವ  ಸೆಪ್ಟೆಂಬರ್ ತ್ರೈ ಮಾಸಿಕದ  ಕಾರ್ಪೊರೇಟ್ ಗಳಿಕೆಗಳು ಮತ್ತು  ಹದ್ದುಬಸ್ತಿಗೆ ಸಿಗದಿರುವ  ಹಣದುಬ್ಬರ ಇವು ಮೂರೂ ಅಂಶಗಳು ಈ ರಕ್ತದೋಕುಳಿಗೆ ಕಾರಣ.  ಈ ಕುಸಿತದ ಪ್ರಮಾಣ ಯಾವ ಮಟ್ಟಿಗೆ ಇದೆಯೆಂದರೆ ಸೆಪ್ಟೆಂಬರ್ 27 ರಂದು ತಲುಪಿದ 20,200 ರ ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ನಿಫ್ಟಿ ಈಗ ಸುಮಾರು 10 ಪ್ರತಿಶತದಷ್ಟು ಕುಸಿದಿದೆ.  ಅಮೆರಿಕಾದ ನೂತನ ಅಧ್ಯಕ್ಷರಾಗಿ ಟ್ರಂಪ್ ಆಯ್ಕೆಯಾದ ದಿನ ಹೊರತು ಪಡಿಸಿ, ಉಳಿದಂತೆ, ದೇಶದ ಷೇರು ಮಾರುಕಟ್ಟೆ ಕುಸಿತವನ್ನು ಕಾಣುತ್ತಿದೆ.  ಈ ಕುಸಿತ ಅದೆಷ್ಟು ಮಟ್ಟಿಗೆ ತಲುಪಿದೆಯೆಂದರೆ, ಕೆಲವು ಅತ್ಕ್ರುಷ್ಟ ಕಂಪೆನಿಗಳ ಷೇರು ಕೂಡಾ ಬಹುತೇಕ ನೆಲಕಚ್ಚಿದೆ.  ಹಾಗಾದರೆ, ಮುಂದೇನು? ಕೆಲವು ತಜ್ಞರು ಇನ್ನೂ ಮೂರರಿಂದ ಆರು ತಿಂಗಳು  ಮಾರುಕಟ್ಟೆ ಅನಿಶ್ಚಿತತೆ ಮುಂದುವರಿಯಲಿದೆ ಎನ್ನುವ ಎಚ್ಚರಿಕೆ ನೀಡಿದ್ದಾರೆ. "ಮುಂದಿನ 3-6 ತಿಂಗಳುಗಳಲ್ಲಿ ನಿಫ್ಟಿ ಇನ್...
ಎನ್ ಟಿ ಪಿ ಸಿ ಗ್ರೀನ್ ಎನರ್ಜಿ ಐಪಿಒ ಬಗ್ಗೆ ನಮ್ಮ ವಿಶ್ಲೇಷಣೆ ಇಲ್ಲಿದೆ  ಬೆಂಗಳೂರು:  ಎನ್ ಟಿ ಪಿ ಸಿ  ಗ್ರೀನ್ ಎನರ್ಜಿ ಲಿಮಿಟೆಡ್  ಐಪಿಒ  ಮಂಗಳವಾರ, ನವೆಂಬರ್ 19ದಿಂದ  ಹೂಡಿಕೆದಾರರಿಗೆ ಲಭ್ಯವಾಗಲಿದ್ದು,   ನವೆಂಬರ್ 22, 2024 ಶುಕ್ರವಾರದಂದು ಮುಕ್ತಾಯಗೊಳ್ಳುತ್ತದೆ. ನಮ್ಮ ಪ್ರಕಾರ ಇದರ ಮೇಲಿನ ಹೂಡಿಕೆ ನಿಮ್ಮ ಬೆಸ್ಟ್ ಇನ್ವೆಸ್ಟ್ಮೆಂಟ್ ಆಗಲಿದೆ.  ಸದ್ಯಕ್ಕೆ ನಮ್ಮ ಅಂದಾಜಿನ ಪ್ರಕಾರ, ನೀವು ನಿರೀಕ್ಷಿಸಿದಷ್ಟು ಷೇರುಗಳು ನಿಮಗೆ ಐಪಿಒದಲ್ಲಿ ಸಿಗಲಾರದು. ಏಕೆಂದರೆ, ಈ ಐಪಿಒಗೆ ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಇರುವ ಸಾಧ್ಯತೆ ಇದೆ.  ಸದ್ಯಕ್ಕೆ  ಪ್ರತಿ ಷೇರಿಗೆ ₹102 ರಿಂದ ₹108 ಎಂದು ಬೆಲೆ ನಿಗದಿ ಪಡಿಸಲಾಗಿದೆ. ನೀವು ಕನಿಷ್ಠವೆಂದರೂ  138 ಷೇರುಗಳನ್ನು ಖರೀದಿಸಬೇಕು.  ಹೂಡಿಕೆದಾರರು ಕನಿಷ್ಠ 138 ಈಕ್ವಿಟಿ ಷೇರುಗಳಿಗೆ ಮತ್ತು ನಂತರ 138 ಷೇರುಗಳ ಗುಣಕಗಳಲ್ಲಿ ಬಿಡ್ ಮಾಡಬಹುದು. ಚಿಲ್ಲರೆ ಹೂಡಿಕೆದಾರರು 138 ಷೇರುಗಳ ಒಂದು ಲಾಟ್‌ಗೆ ಕನಿಷ್ಠ 14,904 ರೂ ಹೂಡಿಕೆ ಮಾಡಬಹುದು ಮತ್ತು ಅವರ ಗರಿಷ್ಠ ಹೂಡಿಕೆಯು 1,794 ಷೇರುಗಳ 13 ಲಾಟ್‌ಗಳಿಗೆ 1,93,752 ರೂ ಆಗಿರುತ್ತದೆ, ಏಕೆಂದರೆ ಅವರು ಐಪಿಒದಲ್ಲಿ ರೂ 2 ಲಕ್ಷದವರೆಗೆ ಹೂಡಿಕೆ ಮಾಡಲು ಅನುಮತಿಸಲಾಗಿದೆ. ಎನ್ ಟಿ ಪಿ ಸಿ ಗ್ರೀನ್ ಕೇಂದ್ರ ಸರಕಾರಿ ಸ್ವಾಮ್ಯದ ಸಂಸ್ಥೆ. ನಿಮಗೆ ದೊಡ್ಡ ಪ್ರಮಾಣದಲ್ಲಿ ಅಲ...
 ಶಿಪ್ಪಿಂಗ್ ಕಾರ್ಪೊರೇಷನ್, ಐಡಿಬಿಐ ಷೇರು: ಬಸ್ ಮಿಸ್ ಮಾಡಿಕೊಳ್ಳದಿರಿ.  ನೀವು ದೀರ್ಘಾವಧಿಯ ಹೂಡಿಕೆದಾರರಾಗಿದ್ದರೆ ಈ ಎರಡು ಷೇರುಗಳ ಬಗ್ಗೆ ನೀವು ಓದಲೇ ಬೇಕು.  ಸೋಮವಾರ, ಶಿಪ್ಪಿಂಗ್ ಕಾರ್ಪೊರೇಷನ್  ಆಫ್ ಇಂಡಿಯಾದ ಷೇರುಗಳು ಸುಮಾರು 13%ದಷ್ಟು  ಏರಿಕೆ ಕಂಡವು. ಇದಕ್ಕೆ ಎರಡು ಕಾರಣಗಳಿದ್ದವು. ಒಂದು ಅತ್ಯುತ್ತಮ ತ್ರೈಮಾಸಿಕ ಫಲಿತಾಂಶ. ಇನ್ನೊಂದು ಡಿಸ್- ಇನ್ವೆಸ್ಟ್ಮೆಂಟ್ ಪ್ರಕ್ರಿಯೆ ಕುರಿತ ಮಾಹಿತಿ  ಸಂಸ್ಥೆ ತನ್ನ ಷೇರುದಾರರಿಗೆ  ನೀಡಿದ ಮಾಹಿತಿ ಪ್ರಕಾರ, ಕಂಪನಿಯಲ್ಲಿನ ತನ್ನ ಪಾಲನ್ನು ಮಾರಾಟ ಮಾಡುವ ಪ್ರಕ್ರಿಯೆಯನ್ನು ಸರಕಾರ ಮುಂದುವರಿಸಿದೆ. ಅಂದರೆ, ಇನ್ನೇನು ಕೆಲವೇ ತಿಂಗಳಿನಲ್ಲಿ ಸರಕಾರ ತನ್ನ ಪಾಲಿನ ಸುಮಾರು ಮೂರೂ ಸಾವಿರ ಕೋಟಿ ರೂಪಾಯಿ ಮೊತ್ತದ ಷೇರುಗಳನ್ನು ಮಾರಾಟ ಮಾಡುವುದು ಖಚಿತ.  ಇನ್ನು ಐಡಿಬಿಐ ಬ್ಯಾಂಕ್ ಖಾಸಗೀಕರಣ ಪ್ರಕ್ರಿಯೆ ಕೂಡಾ ಮುಂದುವರಿದಿದೆ. ಖಾಸಗೀಕರಣ ಬಳಿಕ ಈ  ಷೇರು ಕೂಡಾ  ಆಗಸಕ್ಕೇರಲಿದೆ.  ನೀವು ತಾಳ್ಮೆಯಿಂದ ಕಾಯುವವರಾಗಿದ್ದರೆ, ಈ ಎರಡು ಷೇರು ಖರೀದಿಗೆ ನೀವು ಯೋಚಿಸಬಹುದು.  (ಸೂಚನೆ:  ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ.  ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.) 
ಈ 14 ಷೇರುಗಳ ಖರೀದಿಗೆ ತಜ್ಞರ ಸಲಹೆ  ಜೆಫರೀಸ್  ಹೂಡಿಕೆ ಸಲಹಾ ಸಂಸ್ಥೆ  ಷೇರು ಮಾರುಕಟ್ಟೆ ಕುಸಿತ ಸಂದರ್ಭದಲ್ಲಿ ಈ 14 ಷೇರುಗಳ  ಖರೀದಿಗೆ ಸಲಹೆ ನೀಡಿದೆ. ಈ ಷೇರುಗಳು, ತಮ್ಮ ಜೂನ್ ಬೆಲೆಗಿಂತ ಕೆಳಗೆ ಕುಸಿದಿದ್ದು,  ಈಗ ಖರೀದಿಗೆ ಯೋಚಿಸಬಹುದು ಎಂದು ತಿಳಿಸಿದೆ. ಈ 14 ಷೇರುಗಳ ಪಟ್ಟಿ ಇಲ್ಲಿದೆ.  ಎಚ್ ಎ ಎಲ್  ಕೋಲ್ ಇಂಡಿಯಾ  ಇಂಟರ್ ಗ್ಲೋಬ್ ಏವಿಯೇಷನ್ ​​ಲಿ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೋದ್ರೇಜ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ಮ್ಯಾಕ್ರೋಟೆಕ್ ಡೆವಲಪರ್ಸ್ ಲಿಮಿಟೆಡ್ (ಲೋಧಾ) ಚೋಳಮಂಡಲಂ ಫೈನಾನ್ಶಿಯಲ್ ಹೋಲ್ಡಿಂಗ್ಸ್ ಲಿ. ಡಾಬರ್ ಇಂಡಿಯಾ ಲಿಮಿಟೆಡ್ GMR ಏರ್ಪೋರ್ಟ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸುಪ್ರೀಂ ಇಂಡಸ್ಟ್ರೀಸ್ ಲಿಮಿಟೆಡ್ IDFC ಫಸ್ಟ್ ಬ್ಯಾಂಕ್ ಲಿಮಿಟೆಡ್. ಕೆಇಐ ಇಂಡಸ್ಟ್ರೀಸ್ ಲಿಮಿಟೆಡ್ ಮಹಾನಗರ ಗ್ಯಾಸ್ ಲಿ. ಹೊನಸ ಕನ್ಸ್ಯೂಮರ್ ಲಿ.
ರೆಡ್ ಅಲರ್ಟ್:   6  ದಿನ ದಲ್ಲಿ  20,000 ಕೋಟಿ  ರೂ.ಗೂ   ಹೆಚ್ಚು ಮೊತ್ತದ ಷೇರು ಮಾರಿದ ಎಫ್ ಐಐಗಳು! ಷೇರು ಮಾರುಕಟ್ಟೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ರಕ್ತದೋಕುಳಿಗೆ ಕಾರಣವಾದ ಅಂಶ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ (ಎಫ್ ಐಐ) ಸುಮಾರು 94,017   ಕೋಟಿ ರೂಪಾಯಿ ಮೌಲ್ಯದ ಷೇರುಗಳ ಮಾರಾಟ. ನವಂಬರ್ ತಿಂಗಳ ಮೊದಲ ಆರು ಟ್ರೇಡಿಂಗ್ ಸೆಷನ್ ನಲ್ಲೂ ಇದೆ ಪ್ರವೃತಿ ಮುಂದುವರಿದಿದೆ. ಈ ಆರು ಟ್ರೇಡಿಂಗ್ ಸೆಷನ್ ಗಳಲ್ಲಿ 23,398 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರಾಟ ಮಾಡಿದ್ದಾರೆ. ಬೈ ಚೀನಾ- ಸೆಲ್ ಇಂಡಿಯಾ ಸ್ಟ್ರಾಟೆಜಿ ಅಡಿ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೀಗೆ ದೊಡ್ಡ ಮಟ್ಟದ ಷೇರು ಮಾರಾಟ ಮಾಡುತ್ತಿದ್ದಾರೆ. ಪರಿಣಾಮ ಭಾರತೀಯ ಷೇರುಗಳ ಮೌಲ್ಯ ಪಾತಾಳಕ್ಕೆ ಕುಸಿಯುತ್ತಿದೆ. ಅಮೇರಿಕ ಅಧ್ಯಕ್ಷಿಯ ಚುನಾವಣೆ ಬಳಿಕವೂ ಚೀನಾದತ್ತ ವಿದೇಶಿ ಹೂಡಿಕೆದಾರರು ಮನಸ್ಸು ಮಾಡುತ್ತಿದ್ದಾರೆ ಎಂದರೆ, ನಮ್ಮ ಷೇರು ಮಾರುಕಟ್ಟೆಯಲ್ಲಿ ಈ ಕುಸಿತ ಇನ್ನು ಕೆಲ ದಿನ ಮುಂದುವರಿಯಲಿದೆ. ನೆನಪಿಟ್ಟುಕೊಳ್ಳಿ: ಷೇರು ಮಾರುಕಟ್ಟೆ ಕುಸಿದಷ್ಟು ಹೂಡಿಕೆ ಮಾಡಲು ಅನುಕೂಲ. ನಾವು ಹಿಂದೆ   ಮಿಸ್  ಮಾಡಿಕೊಂಡ ಷೇರುಗಳ ಖರೀದಿಗೆ ಇದು ಸುಸಮಯ. (ಸೂಚನೆ:  ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ...
  ಈ ಅಗ್ಗದ ಸರಕಾರಿ ಷೇರುಗಳು 2 ತಿಂಗಳಿನಲ್ಲಿ ಸರಾಸರಿ 20% ಲಾಭ ತಂದುಕೊಡಬಲ್ಲವು  ಹೊಸ ವರ್ಷಕ್ಕೆ ಇನ್ನೇನು ಕೆಲವೇ ವಾರಗಳಲ್ಲಿ ನಾವು ಕಾಲಿಡಲಿದ್ದೇವೆ. ನೀವು ಈಗ ಹೂಡಿಕೆ ಮಾಡಿದರೆ, ಈ ವರ್ಷದ ಅಂತ್ಯದ ಒಳಗೆ  ಸರಾಸರಿ 20% ಲಾಭ ತಂದುಕೊಡಬಲ್ಲ ಷೇರುಗಳ ಪಟ್ಟಿ ಇಲ್ಲಿದೆ. ಇವೆಲ್ಲವೂ  ಕೇಂದ್ರ ಸರಕಾರೀ ಸ್ವಾಮ್ಯದ ಷೇರುಗಳು. ಹಾಗಾಗಿ ನಷ್ಟದ ಸಾಧ್ಯತೆ ಇಲ್ಲವೇ ಇಲ್ಲ ಎನ್ನಬಹುದು.  ಹಾಗಾದರೆ ಆ ಷೇರುಗಳು ಯಾವುವು? ಈ ಲೇಖನ ಓದಿರಿ  ಆಯಿಲ್ ಇಂಡಿಯಾ:  ಲಾಭದ ಸಾಧ್ಯತೆ  24.8% ಒ ಎನ್ ಜಿ ಸಿ: ಲಾಭದ ಸಾಧ್ಯತೆ 21.8% ಎಚ್ ಎ ಎಲ್: ಲಾಭದ ಸಾಧ್ಯತೆ 21% ಎಸ್ ಜೆ ವಿ ಎನ್ :  ಲಾಭದ ಸಾಧ್ಯತೆ 16.8% ಬಿಇಎಲ್:   ಲಾಭದ ಸಾಧ್ಯತೆ 12.6%
 ಮತ್ತೆ ನಿಜವಾದ ನಮ್ಮ ವಿಶ್ಲೇಷಣೆ:  ಶುಕ್ರವಾರ ಮತ್ತೆ ಮಾರ್ಕೆಟ್ ಡೌನ್  ಶುಕ್ರವಾರ ಕೂಡಾ ನಮ್ಮ ವಿಶ್ಲೇಷಣೆ ಸರಿಯಾಗಿತ್ತು. ಸೂಚ್ಯಂಕ ಸುಮಾರು ೫ ಅಂಕಗಳ ಕುಸಿತ ಕಂಡಿತು.  ಹಾಗಾದರೆ ಮುಂದಿನವಾರ? ವಿಶ್ಲೇಷಣೆ ಓದಲು ನಮ್ಮ ಬ್ಲಾಗ್ ಗೆ ಭೇಟಿ ನೀಡಿ. 
ಇಂದು ಶುಭ ಶುಕ್ರವಾರ :   ಷೇರು ಖರೀದಿ ಬೇಡ!  ಇಂದು ಕೂಡಾ ಬಹುತೇಕ ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ  ಆರ್ಥಾತ್ ರಕ್ತದೋಕುಳಿ ಸಾಧ್ಯತೆ ಇದೆ. ಹಾಗಾಗಿ ನೀವು ಹೂಡಿಕೆದಾರರಾಗಿದ್ದರೆ, ಮುಂದಿನ ವಾರ ಹೊಸ ಷೇರು ಖರೀದಿಗೆ ಯೋಚಿಸಬಹುದು.  ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಿರಂತರವಾಗಿ ಷೇರು ಮಾರಾಟ ಮಾಡುತ್ತಿರುವುದರಿಂದ, ಮಾರುಕಟ್ಟೆಯಲ್ಲಿನ ಅಸ್ಥಿರತೆ ಮುಂದುವರಿದಿದೆ. ಹಾಗಾಗಿ  ಒಂದಿಷ್ಟು ಸ್ಥಿರತೆ ಎದುರಾಗುವವರೆಗೆ, ತಾಳ್ಮೆ ಅಗತ್ಯ.  (ಸೂಚನೆ:  ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ.  ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.) 
 ಸ್ಟಾಕ್ ಮಾರ್ಕೆಟ್ : ಲಡ್ಡು ಬಾಯಿಗೆ ಬಿತ್ತಾ ? ಸುಮಾರು ಹತ್ತು ಗಂಟೆ ವೇಳೆಗೆ ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆಯುವ ಸಾಧ್ಯತೆ ಇದೆ.  ಇದೆ ಟ್ರೆಂಡ್ ಮುಂದುವರಿದು, ಒಂದೊಮ್ಮೆ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದರೆ, ಲಡ್ಡು ಬಾಯಿಗೆ ಬೀಳುವುದು ಖಚಿತ.  ಸ್ಟಾಕ್ ಮಾರ್ಕೆಟ್ ದೊಡ್ಡ ಪ್ರಮಾದಲ್ಲಿ ಏರಿಕೆ ಕಂಡು, ಹೂಡಿಕೆದಾರರು ಮತ್ತೆ ಲಾಭದ ಹಳಿಗೆ ಮರಳುವುದು ಖಚಿತ.  ಆದರೆ ಕಮಲಾ ಹ್ಯಾರಿಸ್ ಗೆದ್ದರೆ ಏನಾಗಬಹುದು ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. 
 ಮತ್ತೆ ಮತ್ತೆ ನಿಜವಾಗುತ್ತಿರುವ ನಮ್ಮ  ವಿಶ್ಲೇಷಣೆ:   ಇಂದು  700 ಅಂಶ ಏರಿಕೆ ಕಂಡ ಸೂಚ್ಯಂಕ  ಇಡೀ ದೇಶದ ಮಾರುಕಟ್ಟೆ ತಜ್ಞರು ಸೋಮವಾರ ಮಾರುಕಟ್ಟೆ ಫ್ಲಾಟ್ ಆಗಿರುತ್ತದೆ ಎಂಬ ಅಭಿಪ್ರಾಯ ನೀಡಿದ್ದರೆ, ನಾವು ಮಾತ್ರ ನಮ್ಮ ವಿಶ್ಲೇಷಣೆ ಪ್ರಕಾರ ಇಂದು ಮಾರುಕಟ್ಟೆ ದೊಡ್ಡ ಮಟ್ಟದ ಏರಿಕೆ  ಕಾಣಲಿದೆ ಎಂದು ತಿಳಿಸಿದ್ದೇವು. ನಮ್ಮ ವಿಶ್ಲೇಷಣೆಯಂತೆ ಇಂದು ಮಾರುಕಟ್ಟೆ ಸುಮಾರು   700 ಅಂಶ ಏರಿಕೆ ಕಂಡಿದೆ.  ನಿಖರ ಮಾರುಕಟ್ಟೆ ಸುದ್ದಿಗಾಗಿ ನಮ್ಮ ಬ್ಲಾಗ್ ಗೆ ನಿಯಮಿತವಾಗಿ ಭೇಟಿ ನೀಡುತ್ತಿರಿ. 
ಭಾರತೀಯ ಮಾರುಕಟ್ಟೆ:  ಅಕ್ಟೋಬರ್ ನಲ್ಲಿ  10 ಬಿಲಿಯನ್ ಡಾಲರ್ ಹಿಂತೆಗೆದುಕೊಂಡ ಜಾಗತಿಕ ಫಂಡ್ ಗಳು  ಅಕ್ಟೋಬರ್ ನಲ್ಲಿ ಸ್ಟಾಕ್ ಮಾರುಕಟ್ಟೆ ಕುಸಿಯಲು ಕಾರಣ ಏನಿರಬಹುದು ಎಂಬುದಕ್ಕೆ ಈಗ ಸಿಕ್ಕಿದೆ ಉತ್ತರ. ಕಳೆದ ತಿಂಗಳು ದೇಶದ ಮಾರುಕಟ್ಟೆಯಿಂದ ಜಾಗತಿಕ ಫಂಡ್ ಗಳು ಹಿಂತೆಗೆದುಕೊಂಡ ಉಟ್ಟು ಮೊತ್ತ ಸುಮಾರು ಹತ್ತು ಬಿಲಿಯನ್ ಅಮೇರಿಕನ್ ಡಾಲರ್.  ಸಿಟಿಗ್ರೂಪ್ ಸಂಸ್ಥೆಯ ತಜ್ಞರ ಪ್ರಕಾರ ,  ಹೀಗೆ ನಿರಂತರ ವಿದೇಶಿ ಹೂಡಿಕೆ  ಹೊರಹರಿವುಗಳು ಶಾರ್ಟ್ ಟರ್ಮ್ ನಲ್ಲಿ  ಷೇರು ಮಾರುಕಟ್ಟೆಯ  ಕಾರ್ಯಕ್ಷಮತೆ ಕುಸಿಯಲು ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದಾರೆ.   ಹಾಗಾದರೆ ನೀವೇನು ಮಾಡಬಹುದು? ಕೆಳಗೆ ಬೀಳುತ್ತಿರುವ ಚೂರಿಯನ್ನು ಹಿಡಿಯಲು ಹೋದರೆ, ಅದು ನಿಮ್ಮ ಜೀವಕ್ಕ ಅಪಾಯ ತಂದೊಡ್ಡಬಹುದು. ಹಾಗಂತ ಕೆಳಗೆ ಬೀಳುತ್ತಿರುವ ವಜ್ರವನ್ನು ಕೈ ಚೆಲ್ಲಿದರೆ ಅದು ಮೂರ್ಖತನ. ಹಾಗಾಗಿ ಈ ಕುಸಿತ, ಒಳ್ಳೆಯ ಷೇರುಗಳ ಆಯ್ಕೆಗೆ ಸುಸಮಯ ಅನ್ನುತ್ತಾರೆ ತಜ್ಞರು.  (ಸೂಚನೆ:  ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ.  ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.) 
 ಮಂಗಳವಾರ ಷೇರು ಮಾರುಕಟ್ಟೆ ಬಹುತೇಕ ಏರಲಿದ! ಸೋಮವಾರದ ರಕ್ತದೋಕುಳಿ ಬಳಿಕ, ಎಲ್ಲರ ಚಿತ್ತ ಮಂಗಳವಾರ ಷೇರು ಮಾರುಕಟ್ಟೆ ಏನಾಗಲಿದೆ ಎಂಬುದು.. ಬಹುತೇಕ, ಮಂಗಳವಾರ ಮಾರುಕಟ್ಟೆ ಹಸಿರು ಬಣ್ಣದಲ್ಲಿರಲಿದೆ.  ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೆಲ್ ಇಂಡಿಯಾ- ಬೈ ಚೀನಾ  ಸ್ಟ್ರಾಟೆಜಿ ಅನುಸರಿಸಲಾರಂಭಿಸಿರುವುದು, ಹಾಗು ಅಮೇರಿಕ ಅಧ್ಯಕ್ಷಿಯ ಚುನಾವಣಾ ಭಾರತೀಯ ಷೇರು ಮಾರುಕಟ್ಟೆಕುಸಿತಕ್ಕೆ ಬಹು ಮುಖ್ಯ ಕಾರಣ. ನಮ್ಮ ವಿಶ್ಲೇಷಣೆ ಪ್ರಕಾರ ವರ್ಸ್ಟ್ ಐಸ್ ಓವರ್ . ಈ ವಾರ ಇನ್ನು ದೊಡ್ಡ ಮಟ್ಟದ ಕುಸಿತ ಕಂಡು ಬರಲಿಕ್ಕಿಲ್ಲ. ಅದರಲ್ಲೂ ಮಂಗಳವಾರ ಮಾರುಕಟ್ಟೆ ಏರಿಕೆ ಕಾಣುವ ಸಾಧ್ಯತೆಗಳು ದಟ್ಟವಾಗಿವೆ.  ಆದರೆ, ಹೂಡಿಕೆದಾರರು ಎಚ್ಚರ ವಹಿಸಬೇಕಿರುವುದು ಮಹಾರಾಷ್ಟ್ರ ವಿಧಾನ ಸಭಾ ಚುನಾವಣಾ ಫಲಿತಾಂಶದ ಮೇಲೆ. ಒಂದೊಮ್ಮೆ, ಬಿಜೆಪಿ ಮತ್ತು ಮಿತ್ರಪಕ್ಷಗಳು ಅಧಿಕಾರ ಕಳೆದುಕೊಂಡರೆ ಇನ್ನೊಂದು ಎರಡು ಸಾವಿರ ಅಂಕ ಕುಸಿತದ ಭೀತಿ ಇದೆ.  (ಸೂಚನೆ:  ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ.  ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.) 
 ಸ್ಟಾಕ್ ಮಾರ್ಕೆಟ್ : ನಮ್ಮ ವಿಶ್ಲೇಷಣೆ ಮತ್ತೊಮ್ಮೆ ನಿಜವಾಯಿತು. ನವಂಬರ್ ೨ ರಂದು ನಾವು ಈ  ವಾರ ಎಚ್ಚರದಿಂದ ಷೇರು ಮಾರುಕಟ್ಟೆಯಲ್ಲಿ   ಹೂಡಿಕೆ ಮಾಡಿ ಎಂದು ನಮ್ಮ ಹೂಡಿಕೆದಾರರಿಗೆ ಸಲಹೆ   ನೀಡಿದ್ದೆವು.  ಈ ಸಲಹೆ ಇಂದು ನಿಜವಾಗಿದೆ.  https://waytorichkn.blogspot.com/2024/11/blog-post_2.html ನೀವು ಹೂಡಿಕೆದಾರರಾಗಿದ್ದರೆ ಈ ವಾರ ಸ್ವಲ್ಪ ಎಚ್ಚರದಿಂದಿರಿ.  ಅಮೇರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶದವರೆಗೆ ಕಾಯಿರಿ.   
 ನಿಮ್ಮಲ್ಲಿ 15,000 ರೂಪಾಯಿ ಇದ್ದಾರೆ ಈ ಐಪಿಒಗೆ ಅಪ್ಲೈ ಮಾಡಿ!   ಈ ಐಪಿಒ ಸೀಸನ್ ನಲ್ಲಿ,  ನೀವು ಕೊಳ್ಳಬಹುದಾದ ಒಳ್ಳೆ ಷೇರು ಎಂದರೆ ಅದು  Sagility India IPO. ರಿಟೈಲ್ ಇನ್ವೆಸ್ಟರ್ಸ್ ಕನಿಷ್ಠವೆಂದರೂ 15,000 ರೂಪಾಯಿ ತೊಡಗಿಸಬೇಕು. ನವಂಬರ್ 5ರಿಂದ 7ರ ವರೆಗೆ ನೀವು ಈ ಐಪಿಒ ಖರೀದಿಸಬಹುದು.  ಈ ಐಪಿಒದಲ್ಲಿ   ಪ್ರತಿ ಷೇರು   28 - 30 ರೂಪಾಯಿ ನಡುವೆ ನಿಮಗೆ ದೊರೆಯಬಹುದು.  ಕನಿಷ್ಠ ಐನೂರು ಷೇರುಗಳನ್ನು ನೀವು ಕೊಳ್ಳಲೇ  ಬೇಕು.  ಹಗಳಗಾಗಿ ಹಾಗಾಗಿ ನಿಮ್ಮಲ್ಲಿ 15,000 ರೂಪಾಯಿ ಇದ್ದಾರೆ ಈ ಐಪಿಒಗೆ ಅಪ್ಲೈ ಮಾಡಬಹುದು.  ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಗಳ ಪ್ರಕಾರ ಕಂಪನಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು. ಕಳೆದ ಮೂರು ವರ್ಷಗಳಲ್ಲಿ ಆದಾಯ ಹಾಗು  ಲಾಭದ ಪ್ರಮಾಣ ವಾರ್ಷಿಕವಾಗಿ ಏರುತ್ತಿದೆ.  28 - 30 ರೂಪಾಯಿ ಮಟ್ಟದವನ್ನು ಗಮನಿಸಿದರೆ ಮುಂದಿನ ಒಂದು ವರ್ಷದಲ್ಲಿ ಹೂಡಿಕೆದಾರರ ಸಂಪತ್ತು ಡಬಲ್ ಆಗುವ ಸಾಧ್ಯತೆ ಇದೆ.  (ಸೂಚನೆ:  ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ.  ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.) 
ಅಕ್ಟೋಬರ್ ನಲ್ಲಿ ಭಾರಿ ಏರಿಕೆ ಕಂಡ ಈ  ಷೇರುಗಾಳು   ನಿಮ್ಮ ಗಮನದಲ್ಲಿರಲಿ  ಕಳೆದ ತಿಂಗಳು  ಭಾರಿ ಏರಿಕೆ ಕಂಡ, ಅಗ್ಗದ ದರದ  ಕೆಲವು ಷೇರುಗಳ ಪಟ್ಟಿ ಇಲ್ಲಿದೆ. ಈ ಷೇರುಗಳು ನಿಮ್ಮ  ಗಮನದಲ್ಲಿರಲಿ  ರಿಹ್ಯಾಟನ್  ಟಿಎಂಟಿ  ಮುಕ್ಕ ಪ್ರೋಟಿನ್ಸ್  ಜ್ಯೋತಿ ಸ್ಟ್ರಕ್ತ್ಛ್ ರ್ಸ್  ಪಿರಮಿಡ್ ಟೆಕ್ನಾಪ್ಲಾಸ್ಟ್  ಟಿ ಟಿ ಲಿಮಿಟೆಡ್  ಸೆಕ್ಯೂರ್ ಕ್ಲೌಡ್ ಟೆಕ್ನಾಲಜೀಸ್  ಮೆಡಿಕೋ ರೆಮಿಡೀಸ್  ಈ ಎಲ್ಲಾ ಕಡಿಮೆ ಬೆಲೆಯ ಷೇರುಗಳು, ಬಿಎಸ್ಇ  ಬಿ ಗುಂಪಿನ ಷೇರುಗಳು. ಹಾಗಾಗಿ ಅವುಗಳ ವಿಶ್ವಾಸಾರ್ಹತೆ ಚೆನ್ನಾಗಿದೆ ಎಂದೇ ಹೇಳಬಹುದು.  ನೀವು ದೀರ್ಘಾವಧಿಯ ಹೂಡಿಕೆದಾರರಾಗಿದ್ದರೆ, ಈ ಷೇರುಗಳ ಬಗ್ಗೆ ಚಿಂತನೆ ನಡೆಸಬಹುದು.  (ಸೂಚನೆ:  ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ.  ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.) 
 ಈ ವಾರ ಎಚ್ಚರದಿಂದ   ಹೂಡಿಕೆ ಮಾಡಿ  ಈ ವಾರ ಮಾರುಕಟ್ಟೆ ಏರುಪೇರು ಸಾಧ್ಯತೆ ಇದೆ. ಏಕೆಂದರೆ, ಮಂಗಳವಾರದ ಅಮೇರಿಕ ಅಧ್ಯಕೀಯ ಚುನಾವಣೆ, ಖಂಡಿತವಾಗಿಯೂ ಈ ವಾರ ನಮ್ಮ ದೇಶದ ಷೇರು ಮಾರುಕಟ್ಟೆಯನ್ನು ಪ್ರಭಾವಿಸಲಿದೆ.  ಒಂದೊಮ್ಮೆ  ಟ್ರಂಪ್ ನೂತನ ಅಧ್ಯಕ್ಷರಾದರೆ, ಷೇರು ಮಾರುಕಟ್ಟೆ ಆಗಸದೆತ್ತರಕ್ಕೆ ನೆಗೆಯುವುದು ಖಚಿತ. ಆದರೆ  ಐಟಿ ಷೇರುಗಳು ಸ್ವಲ್ಪ ಮಟ್ಟಿಗೆ ಕುಸಿಯಬಹುದು. ಆದರೆ ಒಟ್ಟಾರೆಯಾಗಿ ಷೇರು ಮಾರುಕಟ್ಟೆ ಏರಿಕೆ ಕಾಣಲಿದೆ.  ಕಮಲ ಹ್ಯಾರಿಸ್ ಅಧ್ಯಕ್ಷೆಯಾಗಿ ಆಯ್ಕೆಯಾದರೆ, ಸದ್ಯಕ್ಕೆ ಯಥಾಸ್ಥಿತಿ. ಮಹಾರಾಷ್ಟ್ರ ಚುನಾವಣಾ ಫಲಿತಾಂಶದವರೆಗೆ ಎಲ್ಲವು ಅಯೋಮಯವಾಗಿರಲಿದೆ.  (ಸೂಚನೆ:  ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ.  ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.) 
 ನಮ್ಮ ಸಲಹೆ:  ಸ್ವಿಗ್ಗಿ ಐಪಿಒಗೆ ಹಣ ಹೊಂದಿಸಿಕೊಳ್ಳಿ!  ನೀವು ಐಪಿಒದಲ್ಲಿ ಹೂಡಿಕೆಗೆ ಮಾಡುವ ಮನಸ್ಸು ಮಾಡಿದ್ದಾರೆ ಈ ವಾರ ಅದಕ್ಕೆ ಬೆಸ್ಟ್ ಅವಕಾಶವಿದೆ. ಮುಂದಿನವಾರ ಸ್ವೀಗ್ಗಿ ಐಪಿಒಗೆ ನಿಮಗೆ ಅವಕಾಶ ದೊರೆಯಲಿದೆ. ಸುಮಾರು 390 ರೂಪಾಯಿ ಆಸುಪಾಸಿನಲ್ಲಿ ಸ್ವಿಗ್ಗಿ ಐಪಿಒ ದೊರೆಯಲಿದೆ.  ತಿಂಗಳ ಹಿಂದೆ ಖಾಸಗಿ ಮಾರುಕಟ್ಟೆಯಲ್ಲಿ  ಸ್ವಿಗ್ಗಿ ಶೇರು ಬೆಲೆ 530 ರೂಪಾಯಿಯಷ್ಟಿತ್ತು. ಹಾಗಾಗಿ ಈ ಷೇರು ಬೆಲೆ ಮುಂದಿನ ಆರು ತಿಂಗಳ ಒಳಗೆ ಈ ಮೊತ್ತ ದಾಟುವ ನಿರೀಕ್ಷೆ ಇದೆ.  ಹಾಗಾಗಿ ನೀವು ಸುಮಾರು ಆರು ತಿಂಗಳ ಕಾಲ ಕಾಯುವ ತಾಳ್ಮೆ ಹೊಂದಿದ್ದರೆ, ಇದೊಂದು ಕಡಿಮೆ ರಿಸ್ಕ್- ಹೈ ರಿಟರ್ನ್    ಸ್ಟಾಕ್.  (ಸೂಚನೆ:  ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ.  ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.) 
  ಮುಹೂರ್ತ್  ಟ್ರೇಡಿಂಗ್ : ನೀವು ಈ ಸ್ಟಾಕುಗಳ ಮೇಲೆ ನಿಶ್ಚಿತವಾಗಿ ವಿಶ್ವಾಸವಿಡಬಹುದು.  ಇಂದು ಗೋಧೂಳಿ ಸಮಯದಲ್ಲಿ ಈ ವರ್ಷದ ಮುಹೂರ್ತ್  ಟ್ರೇಡಿಂಗ್ ನಡೆಯಲಿದೆ. ಒಂದು ಗಂಟೆಯ ಅವಧಿಯ ಈ ಟ್ರೇಡಿಂಗ್ ಸಮಯದಲ್ಲಿ, ನೀವು ಈ ಕೆಳಗಿನ ಷೇರುಗಳನ್ನು ನಮ್ಮ ಸಂಶೋಧನೆಗಳ ಪ್ರಕಾರ ಕಣ್ಮುಚ್ಚಿ ತೆಗೆದುಕೊಳ್ಳಬಹುದು. ಒಂದು ವರ್ಷದ ಅವಧಿಯಲ್ಲಿ ಕನಿಷ್ಠ ಮೂವತ್ತರಿಂದ ಅರುವತ್ತು ಪ್ರತಿಶತ ಲಾಭ ದೊರೆಯುವ ಸಾಧ್ಯತೆ ಇದೆ.  ನಮ್ಮ ಶಿಫಾರಸುಗಳು  ಐಡಿಬಿಐ ಬ್ಯಾಂಕ್  ಬಿಇಎಂಎಲ್  ಎಚ್ ಎ ಎಲ್  ಬಿ ಇ ಎಲ್  ಜೆ ಎಸ್ ಡಬ್ಲ್ಯು  ಇನ್ಫ್ರಾ  ಜಿಯೋ ಫೈನಾನ್ಸಿಲ್ಸ್  ಐಡಿಎಫ್ ಸಿ ಫಸ್ಟ್ ಬ್ಯಾಂಕ್  ಬಿ ಎಚ್ ಇ ಎಲ್  ವಿ ಆರ್ ಎಲ್  ವಿಪ್ರೋ  ಆರ್ ವಿ ಎನ್ ಎಲ್  ಹೈ  ರಿಸ್ಕ್- ಹೈ  ರಿವಾರ್ಡ್ ಸ್ಟಾಕ್ ಗಳು  ವೇದಾಂತ  ಅದಾನಿ ಎಂಟರ್ಪ್ರೈಸಸ್  ಅದಾನಿ ಪೋರ್ಟ್ಸ್  ಎ ಟಿ ಜಿ ಎಲ್  ಬಿರ್ಲಾ ಸಾಫ್ಟ್  ಟಾಟಾ ಪವರ್  ಹ್ಯಾಪಿಯೆಸ್ಟ್ ಮೈಂಡ್ಸ್  ಇಂಡಸ್ ಇಂಡ್ ಬ್ಯಾಂಕ್  ಲೇಮನ್ ಟ್ರೀ ಹೋಟೆಲ್ಸ್  ನೀವು ಪೆನ್ನಿ ಸ್ಟಾಕ್ ಪ್ರಿಯರಾಗಿದ್ದರೆ ಈ ಸ್ಟಾಕ್ ಗಳನ್ನೂ ಕೂಡ ಯೋಚಿಸಬಹುದು  ಸರ್ವೇಶ್ವರ್ ಫುಡ್  ಸೌತ್ ಇಂಡಿಯನ್ ಬ್ಯಾಂಕ್  ಜಿನಸ್ ಪೇಪರ್ ಅಂಡ್ ಬೋರ್ಡ್ಸ  (ಸೂಚ...