ಇಂದು ಅದಾನಿ ಷೇರುಗಳು ಪಾತಾಳಕ್ಕೆ ಇಳಿಯುವುದು ಖಚಿತ
ಭಾರತೀಯ ಷೇರು ಹೂಡಿಕೆದಾರರ ಸಂಕಷ್ಟಕ್ಕೆ ಕೊನೆ ಇಲ್ಲ ಅನ್ನುವಂತಾಗಿದೆ. ಜೂನ್ ನಲ್ಲಿ ಆರಂಭವಾದ ಈ ಸಂಕಷ್ಟದ ಸರಮಾಲೆಗೆ ಹೊಸ ಸೇರ್ಪಡೆ ಈಗ ಅಮೆರಿಕದಲ್ಲಾಗಿದೆ.
ಅಮೇರಿಕಾದಲ್ಲಿ ಈಗ ಅದಾನಿ ವಿರುದ್ಧ ಹೊಸ ಆರೋಪ ಮಾಡಲಾಗಿದೆ. ಮೇಲ್ನೋಟಕ್ಕೆ ಈ ಆರೋಪ ಬಹಳ ಗಂಭೀರ ಸ್ವರೂಪದ್ದು ಅನ್ನುವಂತಿದೆ. ಪರಿಣಾಮ ಅದಾನಿ ಬಾಂಡ್ ಗಳು ಏಷ್ಯಾದಲ್ಲಿ ಕುಸಿದಿವೆ. ಈ ಆರೋಪದ ಪರಿಣಾಮ ಭಾರತೀಯ ಮಾರುಕಟ್ಟೆಯಲ್ಲೂ ಇಂದು ಪ್ರತಿಫಲಿಸಲಿದೆ.
ಅದಾನಿ ಷೇರುಗಳು ಕುಸಿದರೆ, ಅದು ಮಾರುಕಟ್ಟೆಯ ಮೇಲೆ ಫಲಿತಾಂಶ ಬೀರಲಿದೆ. ಒಟ್ಟಾರೆ ಇಂದು ಷೇರು ಮಾರುಕಟ್ಟೆಗೆ ಒಳ್ಳೆಯ ದಿನವಲ್ಲ.
ಆದರೆ ನೀವು ದೀರ್ಘಾವಧಿಯ ಹೂಡಿಕೆದಾರರಾಗಿದ್ದರೆ ಒಳ್ಳೆಯ ಷೇರು ಖರೀದಿಗೆ ಇದು ಸಕಾಲ
Comments
Post a Comment