ಷೇರು ಮಾರುಕಟ್ಟೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ರಕ್ತದೋಕುಳಿಗೆ ಕಾರಣವಾದ ಅಂಶ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ (ಎಫ್ ಐಐ) ಸುಮಾರು 94,017 ಕೋಟಿ ರೂಪಾಯಿ ಮೌಲ್ಯದ ಷೇರುಗಳ ಮಾರಾಟ. ನವಂಬರ್ ತಿಂಗಳ ಮೊದಲ ಆರು ಟ್ರೇಡಿಂಗ್ ಸೆಷನ್ ನಲ್ಲೂ ಇದೆ ಪ್ರವೃತಿ ಮುಂದುವರಿದಿದೆ. ಈ ಆರು ಟ್ರೇಡಿಂಗ್ ಸೆಷನ್ ಗಳಲ್ಲಿ 23,398 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರಾಟ ಮಾಡಿದ್ದಾರೆ.
ಬೈ ಚೀನಾ- ಸೆಲ್ ಇಂಡಿಯಾ ಸ್ಟ್ರಾಟೆಜಿ ಅಡಿ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೀಗೆ ದೊಡ್ಡ ಮಟ್ಟದ ಷೇರು ಮಾರಾಟ ಮಾಡುತ್ತಿದ್ದಾರೆ. ಪರಿಣಾಮ ಭಾರತೀಯ ಷೇರುಗಳ ಮೌಲ್ಯ ಪಾತಾಳಕ್ಕೆ ಕುಸಿಯುತ್ತಿದೆ. ಅಮೇರಿಕ ಅಧ್ಯಕ್ಷಿಯ ಚುನಾವಣೆ ಬಳಿಕವೂ ಚೀನಾದತ್ತ ವಿದೇಶಿ ಹೂಡಿಕೆದಾರರು ಮನಸ್ಸು ಮಾಡುತ್ತಿದ್ದಾರೆ ಎಂದರೆ, ನಮ್ಮ ಷೇರು ಮಾರುಕಟ್ಟೆಯಲ್ಲಿ ಈ ಕುಸಿತ ಇನ್ನು ಕೆಲ ದಿನ ಮುಂದುವರಿಯಲಿದೆ.
ನೆನಪಿಟ್ಟುಕೊಳ್ಳಿ: ಷೇರು ಮಾರುಕಟ್ಟೆ ಕುಸಿದಷ್ಟು ಹೂಡಿಕೆ ಮಾಡಲು ಅನುಕೂಲ. ನಾವು ಹಿಂದೆ ಮಿಸ್ ಮಾಡಿಕೊಂಡ ಷೇರುಗಳ ಖರೀದಿಗೆ ಇದು ಸುಸಮಯ.
(ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.)
Comments
Post a Comment