ಆಸ್ಟರ್ ಡಿಎಂ, ಪಿ ಸಿ ಜ್ಯೂವೆಲ್ಲರ್ ಷೇರು ಏರಿಕೆ ಮೇಲೆ ನಿಮ್ಮ ಗಮನವಿರಲಿ
ಸದ್ಯಕ್ಕೆ ಸುದ್ದಿಯಲ್ಲಿರುವ ಎರಡು ಮಹತ್ವದ ಷೇರುಗಳೆಂದರೆ ಆಸ್ಟರ್ ಡಿಎಂ, ಹಾಗು ಪಿ ಸಿ ಜ್ಯೂವೆಲ್ಲರ್. ಇವೆರಡು ಸದ್ಯಕ್ಕೆ ಅಗ್ಗವಾಗಿಯೇ ದೊರೆಯುತ್ತಿವೆ. ಆದರೆ ಇನ್ನೆರಡು ತಿಂಗಳಲ್ಲಿ ಅವುಗಳು ಆಗಸದೆತ್ತರಕ್ಕೆ ನೆಗೆಯುವ ಸಾಧ್ಯತೆ ಇದೆ.
ಆಸ್ಟರ್ ಡಿಎಂ ಷೇರು ಸದ್ಯಕ್ಕೆ ಆ ಸಮೂಹದ ವಿಸ್ತರಣೆ ಕಾರಣಕ್ಕೆ ಸುದ್ದಿಯಲ್ಲಿದೆ. ಹೈದರಾಬಾದ ಮೂಲದ ಕ್ವಾಲಿಟಿ ಕೇರ್ ಸಂಸ್ಥೆಯ ಜೊತೆಗಿನ ಕೈಜೋಡಿಸುವಿಕೆ ಷೇರುದಾರರಿಗೆ ಭರಪೂರ ಲಾಭ ತಂದುಕೊಡಬಲ್ಲದು.
ಇನ್ನು ಪಿ ಸಿ ಜ್ಯೂವೆಲ್ಲರ್ ಷೇರು ಮುಖಬೆಲೆಯನ್ನು ೧೦ ರೂಪಾಯಿಯಿಂದ ೧ ರುಪಾಯಿಗೆ ಇಳಿಸಲು ಸಂಸ್ಥೆ ನಿರ್ಧರಿಸಿದೆ. ಡಿಸೆಂಬರ್ ೧೬ ಇದಕ್ಕಾಗಿ ರೆಕಾರ್ಡ್ ಡೇಟ್ ಎಂದು ನಿಗದಿಪಡಿಸಲಾಗಿದೆ. ಈ ಷೇರು ಕೂಡಾ ಅತಿ ಅಗ್ಗಕ್ಕೆ ಸದ್ಯಕ್ಕೆ ಲಭ್ಯವಿದೆ.
Comments
Post a Comment