ಸೋಮವಾರದ ರಕ್ತದೋಕುಳಿ ಬಳಿಕ, ಎಲ್ಲರ ಚಿತ್ತ ಮಂಗಳವಾರ ಷೇರು ಮಾರುಕಟ್ಟೆ ಏನಾಗಲಿದೆ ಎಂಬುದು.. ಬಹುತೇಕ, ಮಂಗಳವಾರ ಮಾರುಕಟ್ಟೆ ಹಸಿರು ಬಣ್ಣದಲ್ಲಿರಲಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೆಲ್ ಇಂಡಿಯಾ- ಬೈ ಚೀನಾ ಸ್ಟ್ರಾಟೆಜಿ ಅನುಸರಿಸಲಾರಂಭಿಸಿರುವುದು, ಹಾಗು ಅಮೇರಿಕ ಅಧ್ಯಕ್ಷಿಯ ಚುನಾವಣಾ ಭಾರತೀಯ ಷೇರು ಮಾರುಕಟ್ಟೆಕುಸಿತಕ್ಕೆ ಬಹು ಮುಖ್ಯ ಕಾರಣ.
ನಮ್ಮ ವಿಶ್ಲೇಷಣೆ ಪ್ರಕಾರ ವರ್ಸ್ಟ್ ಐಸ್ ಓವರ್ . ಈ ವಾರ ಇನ್ನು ದೊಡ್ಡ ಮಟ್ಟದ ಕುಸಿತ ಕಂಡು ಬರಲಿಕ್ಕಿಲ್ಲ. ಅದರಲ್ಲೂ ಮಂಗಳವಾರ ಮಾರುಕಟ್ಟೆ ಏರಿಕೆ ಕಾಣುವ ಸಾಧ್ಯತೆಗಳು ದಟ್ಟವಾಗಿವೆ.
ಆದರೆ, ಹೂಡಿಕೆದಾರರು ಎಚ್ಚರ ವಹಿಸಬೇಕಿರುವುದು ಮಹಾರಾಷ್ಟ್ರ ವಿಧಾನ ಸಭಾ ಚುನಾವಣಾ ಫಲಿತಾಂಶದ ಮೇಲೆ. ಒಂದೊಮ್ಮೆ, ಬಿಜೆಪಿ ಮತ್ತು ಮಿತ್ರಪಕ್ಷಗಳು ಅಧಿಕಾರ ಕಳೆದುಕೊಂಡರೆ ಇನ್ನೊಂದು ಎರಡು ಸಾವಿರ ಅಂಕ ಕುಸಿತದ ಭೀತಿ ಇದೆ.
(ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.)
Comments
Post a Comment