ಇಂದು ಸೂಚ್ಯಂಕ ಮೇಲೇರುವುದು ಖಚಿತ
ಕಳೆದ ವಾರದ ಮಾರುಕಟ್ಟೆ ರಕ್ತದೋಕುಳಿಯಿಂದ ಕಂಗೆಟ್ಟಿರುವ ಹೂಡಿಕೆದಾರರಿಗೆ ಇಂದು ಸೋಮವಾರ ಶುಭದಿನವಾಗುವ ಸೂಚನೆ ಇದೆ. ಬಹುತೇಕ ಇಂದು ಮಾರುಕಟ್ಟೆಯಲ್ಲಿ ಸೂಚ್ಯಂಕ ಮೇಲೇರುವ ಸಾಧ್ಯತೆ ಇದೆ.
ಶುಕ್ರವಾರ ಜಾಗತಿಕವಾಗಿ ಬಹುತೇಕ ಷೇರು ಮಾರುಕಟ್ಟೆಗಳಲ್ಲಿ ಸೂಚ್ಯಂಕ ಇಳಿಕೆ ಕಂಡಿತ್ತು. ಅಂದು ಭಾರತೀಯ ಮಾರುಕಟ್ಟೆಗಳು ಮುಚ್ಚಿದ್ದವು. ಈಗ ಮೂರೂ ದಿನಗಳ ಬಳಿಕ ಈಗಾಗಬಹುದು ಎಂಬುದು ಎಲ್ಲರ ಕುತೂಹಲ.
ಸೋಮವಾರ ಭಾರತೀಯ ಮಾರುಕಟ್ಟೆ ಆರಂಭಕ್ಕೆ ಸುಮಾರು ಒಂದು ಗಂಟೆಗಳ ಮುನ್ನ ಏಷ್ಯನ್ ಮಾರುಕಟ್ಟೆಗಳಲ್ಲಿ ಮಿಶ್ರ
ಟ್ರೆಂಡ್ ಕಂಡು ಬರುತ್ತಿದೆ. ಆದರೆ ಸದ್ಯಕ್ಕೆ ಕಂಡು ಬರುತ್ತಿರುವ ಟ್ರೆಂಡ್ ಪ್ರಕಾರ ಭಾರತದಲ್ಲಿ ಸೂಚ್ಯಂಕ ಏರಿಕೆ ಕಾಣುವ ಸಾಧ್ಯತೆ ಇದೆ.
ವಿದೇಶಿ ಹೂಡಿಕೆ ಹೊರ ಹರಿವು ಇಂದು ಅಷ್ಟಾಗಿ ಕಂಡುಬರಲಿಕ್ಕಿಲ್ಲ ಅನ್ನುವುದು ತಜ್ಞರ ನಿರೀಕ್ಷೆ. ಅಕ್ಟೋಬರ್ ಇಡೀ ತಿಂಗಳು ಹಾಗು ನವಂಬರ್ ಮಧ್ಯಂತರಾದವರೆಗೆ ದೊಡ್ಡ ಪ್ರಮಾಣದಲ್ಲಿ ಕಂಡು ಬಂದ ಈ ಹೊರ ಹರಿವಿನ ಪ್ರಕ್ರಿಯೆ ಸದ್ಯಕ್ಕೆ ನಿಲ್ಲಬಹುದು ಅನ್ನುವ ವಿಶ್ವಾಸ ತಜ್ಞರದ್ದು. ಇದು ಷೇರು ಮಾರುಕಟ್ಟೆಯಲ್ಲಿ ಸ್ಥಿರತೆ ತರುವ ಸಾಧ್ಯತೆ ಇದೆ.
(ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.)
Comments
Post a Comment