ಷೇರು ಮಾರುಕಟ್ಟೆ: ಈಗ ಹೂಡಿಕೆಗೆ ಸುಸಮಯವೇ?
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೆಲ್ ಇಂಡಿಯಾ-ಬೈ ಚೀನಾ ಸ್ಟ್ರಾಟೆಜಿ ಪರಿಣಾಮ, ಕಳೆದ ಕೆಲ ದಿನಗಳಿಂದ ದೇಶದ ಷೇರು ಮಾರುಕಟ್ಟೆಯಲ್ಲಿ ರಕ್ತದೋಕುಳಿಯೇ ಹರಿದಿದೆ. ಬುಧವಾರ ಸತತ ಐದನೇ ದಿನ ದೇಶಿಯ ಮಾರುಕಟ್ಟೆ ಕುಸಿತ ಕಂಡದ್ದು. ನಿರಂತರವಾಗಿ ಷೇರುಗಳನ್ನು ಮಾರಾಟ ಮಾಡುತ್ತಿರುವ ವಿದೇಶಿ ಹೂಡಿಕೆದಾರರು, ನಿರಾಶಾದಾಯಕವಾಗಿರುವ ಸೆಪ್ಟೆಂಬರ್ ತ್ರೈ ಮಾಸಿಕದ ಕಾರ್ಪೊರೇಟ್ ಗಳಿಕೆಗಳು ಮತ್ತು ಹದ್ದುಬಸ್ತಿಗೆ ಸಿಗದಿರುವ ಹಣದುಬ್ಬರ ಇವು ಮೂರೂ ಅಂಶಗಳು ಈ ರಕ್ತದೋಕುಳಿಗೆ ಕಾರಣ. ಈ ಕುಸಿತದ ಪ್ರಮಾಣ ಯಾವ ಮಟ್ಟಿಗೆ ಇದೆಯೆಂದರೆ ಸೆಪ್ಟೆಂಬರ್ 27 ರಂದು ತಲುಪಿದ 20,200 ರ ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ನಿಫ್ಟಿ ಈಗ ಸುಮಾರು 10 ಪ್ರತಿಶತದಷ್ಟು ಕುಸಿದಿದೆ.
ಅಮೆರಿಕಾದ ನೂತನ ಅಧ್ಯಕ್ಷರಾಗಿ ಟ್ರಂಪ್ ಆಯ್ಕೆಯಾದ ದಿನ ಹೊರತು ಪಡಿಸಿ, ಉಳಿದಂತೆ, ದೇಶದ ಷೇರು ಮಾರುಕಟ್ಟೆ ಕುಸಿತವನ್ನು ಕಾಣುತ್ತಿದೆ. ಈ ಕುಸಿತ ಅದೆಷ್ಟು ಮಟ್ಟಿಗೆ ತಲುಪಿದೆಯೆಂದರೆ, ಕೆಲವು ಅತ್ಕ್ರುಷ್ಟ ಕಂಪೆನಿಗಳ ಷೇರು ಕೂಡಾ ಬಹುತೇಕ ನೆಲಕಚ್ಚಿದೆ.
ಹಾಗಾದರೆ, ಮುಂದೇನು? ಕೆಲವು ತಜ್ಞರು ಇನ್ನೂ ಮೂರರಿಂದ ಆರು ತಿಂಗಳು ಮಾರುಕಟ್ಟೆ ಅನಿಶ್ಚಿತತೆ ಮುಂದುವರಿಯಲಿದೆ ಎನ್ನುವ ಎಚ್ಚರಿಕೆ ನೀಡಿದ್ದಾರೆ. "ಮುಂದಿನ 3-6 ತಿಂಗಳುಗಳಲ್ಲಿ ನಿಫ್ಟಿ ಇನ್ನೂ 10% ಕರೆಕ್ಸನ್ ( ನಷ್ಟ) ಕಾಣಬಹುದು ಎಂದು ಮ್ಯಾಕ್ವಾರಿಯ ಸಂಸ್ಥೆಯ ಸಂದೀಪ್ ಭಾಟಿಯಾ ಅಭಿಪ್ರಾಯ ಪಡುತ್ತಾರೆ.
ಹೂಡಿಕೆದಾರರ ಎದುರು ಈಗಿರುವ ಪ್ರಶ್ನೆ: ಈಗ ಷೇರು ಖರೀದಿಸಲೇ ಅಥವಾ ಮುಂದಿನ ಕೆಲ ದಿನಗಳ ಕಾಲ ಕಾಯಬೇಕೆ ಎಂಬುದು... ನೀವು ದೀರ್ಘಾವಧಿಯ ಹೂಡಿಕೆದಾರರಾಗಿದ್ದರೆ ಖಂಡಿತಾ ಈಗ ಷೇರು ಮಾರುಕಟ್ಟೆ ಪ್ರವೇಶಿಸಬಹುದು. ಕೆಲವು ಅತ್ಯುತ್ತಮ ಷೇರುಗಳು ನಿಮ್ಮ ಕೈಗೆಟುಕುವ ಬೆಲೆಯಲ್ಲಿವೆ. ಇನ್ನೊಂಡು ಆಯ್ಕೆ ಸ್ಟಾಕ್ ಎಸ್ ಐ ಪಿ.
ಒಂದೊಮ್ಮೆ ಅಮೆರಿಕಾದಲ್ಲಿ ಕಮಲಾ ಹ್ಯಾರಿಸ್ ವಿಜಯ ಸಾಧಿಸುತ್ತಿದ್ದಾರೆ, ಮಾರುಕಟ್ಟೆ ಈ ವೇಳೆಗೆ ಸ್ಥಿರತೆ ಸಾಧಿಸುವ ಸಾಧ್ಯತೆ ಇತ್ತು. ಆದರೆ
ಜಾಗತಿಕ ಆರ್ಥಿಕತೆ ಅದೆಷ್ಟು ಅನಿಶ್ಚತತೆಯಲ್ಲಿದೆ ಎಂದರೆ, ಟ್ರಂಪ್ ಆಡಳಿತದಲ್ಲಿ ನಾಳೆ ಏನು ಅನ್ನುವುದೇ ಅನಿಶ್ಚಿತತೆಯಲ್ಲಿದೆ. ಹಾಗಾಗಿ ನಿಮ್ಮ ಮುಂದಿರುವ ಆಯ್ಕೆಗಳು ಕೆಲವೇ ಕೆಲವು.
ದೀರ್ಘಾವಧಿಯ ಹೂಡಿಕೆಗೆ ಅತ್ಯುತ್ತಮ ಷೇರುಗಳನ್ನು ಆಯ್ಕೆ ಮಾಡುವುದು.
(ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.)
Comments
Post a Comment