ಶಿಪ್ಪಿಂಗ್ ಕಾರ್ಪೊರೇಷನ್, ಐಡಿಬಿಐ ಷೇರು: ಬಸ್ ಮಿಸ್ ಮಾಡಿಕೊಳ್ಳದಿರಿ.
ನೀವು ದೀರ್ಘಾವಧಿಯ ಹೂಡಿಕೆದಾರರಾಗಿದ್ದರೆ ಈ ಎರಡು ಷೇರುಗಳ ಬಗ್ಗೆ ನೀವು ಓದಲೇ ಬೇಕು.
ಸೋಮವಾರ, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದ ಷೇರುಗಳು ಸುಮಾರು 13%ದಷ್ಟು ಏರಿಕೆ ಕಂಡವು. ಇದಕ್ಕೆ ಎರಡು ಕಾರಣಗಳಿದ್ದವು. ಒಂದು ಅತ್ಯುತ್ತಮ ತ್ರೈಮಾಸಿಕ ಫಲಿತಾಂಶ. ಇನ್ನೊಂದು ಡಿಸ್- ಇನ್ವೆಸ್ಟ್ಮೆಂಟ್ ಪ್ರಕ್ರಿಯೆ ಕುರಿತ ಮಾಹಿತಿ
ಸಂಸ್ಥೆ ತನ್ನ ಷೇರುದಾರರಿಗೆ ನೀಡಿದ ಮಾಹಿತಿ ಪ್ರಕಾರ, ಕಂಪನಿಯಲ್ಲಿನ ತನ್ನ ಪಾಲನ್ನು ಮಾರಾಟ ಮಾಡುವ ಪ್ರಕ್ರಿಯೆಯನ್ನು ಸರಕಾರ ಮುಂದುವರಿಸಿದೆ. ಅಂದರೆ, ಇನ್ನೇನು ಕೆಲವೇ ತಿಂಗಳಿನಲ್ಲಿ ಸರಕಾರ ತನ್ನ ಪಾಲಿನ ಸುಮಾರು ಮೂರೂ ಸಾವಿರ ಕೋಟಿ ರೂಪಾಯಿ ಮೊತ್ತದ ಷೇರುಗಳನ್ನು ಮಾರಾಟ ಮಾಡುವುದು ಖಚಿತ.
ಇನ್ನು ಐಡಿಬಿಐ ಬ್ಯಾಂಕ್ ಖಾಸಗೀಕರಣ ಪ್ರಕ್ರಿಯೆ ಕೂಡಾ ಮುಂದುವರಿದಿದೆ. ಖಾಸಗೀಕರಣ ಬಳಿಕ ಈ ಷೇರು ಕೂಡಾ ಆಗಸಕ್ಕೇರಲಿದೆ.
ನೀವು ತಾಳ್ಮೆಯಿಂದ ಕಾಯುವವರಾಗಿದ್ದರೆ, ಈ ಎರಡು ಷೇರು ಖರೀದಿಗೆ ನೀವು ಯೋಚಿಸಬಹುದು.
(ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.)
Comments
Post a Comment