ಈ ವಾರ ಮಾರುಕಟ್ಟೆ ಏನಾಗಬಹುದು? 

ಭಾರತೀಯ ಷೇರುಮಾರುಕಟ್ಟೆಯಲ್ಲಿ  ಅಕ್ಟೋಬರ್ ನಿಂದ ಆರಂಭವಾದ ರಕ್ತದೋಕುಳಿ ಗುರುವಾರ ತನಕ ಮುಂದುವರಿದಿದೆ. ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳ ಷೇರು ಮಾರುಕಟ್ಟೆಗಳಲ್ಲಿ ಸೂಚ್ಯಂಕಗಳು ಹೊಸ ದಾಖಲೆ ಬರೆಯುತ್ತಿದ್ದಾರೆ, ಭಾರತದಲ್ಲಿ ಮಾತ್ರ ತದ್ವಿರುದ್ದ.  ಪಾಕಿಸ್ತಾನ ಷೇರು ಮಾರುಕಟ್ಟೆ ಕೂಡಾ ಮೊನ್ನೆ ೯೩,೦೦೦ ಅಂಕಗಳ ಗಡಿ ದಾಟಿದೆ. ಹಾಗಾದರೆ ಈ ವಾರ ಭಾರತದ ಷೇರು ಮಾರುಕಟ್ಟೆ ಏನಾಗಬಹುದು? 

ಈ ವಾರ ಭಾರತೀಯ ಮಾರುಕಟ್ಟೆಯನ್ನು ಪ್ರಭಾವಿಸಲಿರುವ ಬಹು ದೊಡ್ಡ ಅಂಶ ಮಹಾರಾಷ್ಟ್ರ ಚುನಾವಣಾ ಎಕ್ಸಿಟ್ ಪೋಲ್ ಹಾಗು ಮತದಾನದ ಟ್ರೆಂಡ್. ೨೦ರಂದು ಮಹಾರಾಷ್ಟ್ರದಲ್ಲಿ ಮತದಾನ ನಡೆಯಲಿದೆ. ಮತದಾನ ಸದ್ಯಕ್ಕೆ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ  ಮಹಾಯುತಿಗೆ ಪೂರಕವಾಗಿದ್ದರೆ ದೊಡ್ಡ ಪ್ರಮಾಣದಲ್ಲಿ ಸೂಚ್ಯಂಕ ಏರಬಹುದು. ಒಂದೊಮ್ಮೆ, ಅದಕ್ಕೆ ತದ್ವಿರುದ್ಧವಾದ ಭಾವನೆ ಮೂಡಿದರೆ, ಮಾರುಕಟ್ಟೆಯಲ್ಲಿ ಇನ್ನೊಂದಿಷ್ಟು ದಿನ ರಕ್ತದೋಕುಳಿ ಖಚಿತ. 

ಇನ್ನು ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಮಾರಾಟ ಪರ್ವ ಒಂದು ಹಂತದಲ್ಲಿ ನಿಂತಂತೆ ಭಾಸವಾಗುತ್ತಿದೆ. ಹಾಗಾಗಿ, ಈ ಅಂಶ ಮಾರುಕಟ್ಟೆಯ ಮೇಲೆ ಅಷ್ಟೊಂದು ದೊಡ್ಡ ಪ್ರಮಾಣದ ಪ್ರಭಾವ ಬೀರಲಿಕ್ಕಿಲ್ಲ. ಆದರೆ, ಎಲ್ಲರ ಕಣ್ಣು ಈಗ ನೆಟ್ಟಿರುವುದು ಸೋಮವಾರ ಏನಾಗಬಹುದು ಎಂಬುದರತ್ತ. 





Comments

Popular posts from this blog