ಈ ವಾರ ಎಚ್ಚರದಿಂದ ಹೂಡಿಕೆ ಮಾಡಿ
ಈ ವಾರ ಮಾರುಕಟ್ಟೆ ಏರುಪೇರು ಸಾಧ್ಯತೆ ಇದೆ. ಏಕೆಂದರೆ, ಮಂಗಳವಾರದ ಅಮೇರಿಕ ಅಧ್ಯಕೀಯ ಚುನಾವಣೆ, ಖಂಡಿತವಾಗಿಯೂ ಈ ವಾರ ನಮ್ಮ ದೇಶದ ಷೇರು ಮಾರುಕಟ್ಟೆಯನ್ನು ಪ್ರಭಾವಿಸಲಿದೆ.
ಒಂದೊಮ್ಮೆ ಟ್ರಂಪ್ ನೂತನ ಅಧ್ಯಕ್ಷರಾದರೆ, ಷೇರು ಮಾರುಕಟ್ಟೆ ಆಗಸದೆತ್ತರಕ್ಕೆ ನೆಗೆಯುವುದು ಖಚಿತ. ಆದರೆ ಐಟಿ ಷೇರುಗಳು ಸ್ವಲ್ಪ ಮಟ್ಟಿಗೆ ಕುಸಿಯಬಹುದು. ಆದರೆ ಒಟ್ಟಾರೆಯಾಗಿ ಷೇರು ಮಾರುಕಟ್ಟೆ ಏರಿಕೆ ಕಾಣಲಿದೆ.
ಕಮಲ ಹ್ಯಾರಿಸ್ ಅಧ್ಯಕ್ಷೆಯಾಗಿ ಆಯ್ಕೆಯಾದರೆ, ಸದ್ಯಕ್ಕೆ ಯಥಾಸ್ಥಿತಿ. ಮಹಾರಾಷ್ಟ್ರ ಚುನಾವಣಾ ಫಲಿತಾಂಶದವರೆಗೆ ಎಲ್ಲವು ಅಯೋಮಯವಾಗಿರಲಿದೆ.
(ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.)
Comments
Post a Comment