ಇಂದು ಮಾರುಕಟ್ಟೆ ಯಲ್ಲಿ ಸಣ್ಣ ಮಟ್ಟದ ರಕ್ತದೋಕುಳಿ ಸಾಧ್ಯತೆ 


ಎರಡು ದಿನಗಳ  ರ್‍ಯಾಲಿ. ಬಳಿಕ ಇಂದು ಷೇರು ಮಾರುಕಟ್ಟೆಯಲ್ಲಿ ಸಣ್ಣ ಮಟ್ಟದ ರಕ್ತದೋಕುಳಿ ಸಾಧ್ಯತೆ ಇದೆ. ಪ್ರಾಫಿಟ್ ಬುಕ್ಕಿಂಗ್ ದೊಡ್ಡ ಮಟ್ಟದಲ್ಲಿ ನಡೆಯುವ ಸಾಧ್ಯತೆ ಇದೆ. ಹಾಗಾಗಿ ಇಂದು ಮಾರಾಟಕ್ಕಿಂತ ಖರೀದಿ ಬಗ್ಗೆ ಹೂಡಿಕೆದಾರರು ಯೋಚಿಸಬಹುದು. 


ಯುರೋಪ್ ಹಾಗು ಅಮೇರಿಕ ಮಾರುಕಟ್ಟೆಗಳಲ್ಲಿ  ಸೂಚ್ಯಂಕ ಏರಿಕೆ ಕಂಡಿದ್ದರೂ, ಏಷ್ಯಾ ಮಾರುಕಟ್ಟೆಗಳು ಇಂದು ದುರ್ಬಲವಾಗಿದ್ದು, ಸೂಚ್ಯಂಕ ಕೆಳಗಿಳಿದಿದೆ. ಈ ಇದು ಕೂಡಾ ಭಾರತೀಯ ಮಾರುಕಟ್ಟೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. 


 ಆದರೆ, ಮಹಾರಾಷ್ಟ್ರ ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿಕೂಟ ಭರ್ಜರಿ ಜಯ ಗಳಿಸಿರುವುದರಿಂದ, ಸೂಚ್ಯಂಕ 82,000 ಗಡಿ ದಾಟುವವರೆಗೆ 

ಯಾವುದೇ ಮಹಾಪತನ ಕಾಣಲಾರದು ಎನ್ನುತ್ತಾರೆ ತಜ್ಞರು. 


ಈ ನಡುವೆ ನೀವು ಈ ಸಂದರ್ಭದಲ್ಲಿ ಖರೀದಿಸಬಹುದಾದ ಅತ್ಯುತ್ತಮ ಷೇರುಗಳ ಬಗ್ಗೆ ನಮ್ಮ ವಿಶ್ಲೇಷಣೆಗಾಗಿ ನಿರಂತರವಾಗಿ ಈ ಬ್ಲಾಗ್ ಓದುತ್ತೀರಿ 

Comments

Popular posts from this blog