ಭಾರತೀಯ ಮಾರುಕಟ್ಟೆ:  ಅಕ್ಟೋಬರ್ ನಲ್ಲಿ  10 ಬಿಲಿಯನ್ ಡಾಲರ್ ಹಿಂತೆಗೆದುಕೊಂಡ ಜಾಗತಿಕ ಫಂಡ್ ಗಳು 



ಅಕ್ಟೋಬರ್ ನಲ್ಲಿ ಸ್ಟಾಕ್ ಮಾರುಕಟ್ಟೆ ಕುಸಿಯಲು ಕಾರಣ ಏನಿರಬಹುದು ಎಂಬುದಕ್ಕೆ ಈಗ ಸಿಕ್ಕಿದೆ ಉತ್ತರ. ಕಳೆದ ತಿಂಗಳು ದೇಶದ ಮಾರುಕಟ್ಟೆಯಿಂದ ಜಾಗತಿಕ ಫಂಡ್ ಗಳು ಹಿಂತೆಗೆದುಕೊಂಡ ಉಟ್ಟು ಮೊತ್ತ ಸುಮಾರು ಹತ್ತು ಬಿಲಿಯನ್ ಅಮೇರಿಕನ್ ಡಾಲರ್. 



ಸಿಟಿಗ್ರೂಪ್ ಸಂಸ್ಥೆಯ ತಜ್ಞರ ಪ್ರಕಾರ ,  ಹೀಗೆ ನಿರಂತರ ವಿದೇಶಿ ಹೂಡಿಕೆ  ಹೊರಹರಿವುಗಳು ಶಾರ್ಟ್ ಟರ್ಮ್ ನಲ್ಲಿ  ಷೇರು ಮಾರುಕಟ್ಟೆಯ  ಕಾರ್ಯಕ್ಷಮತೆ ಕುಸಿಯಲು ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದಾರೆ.  



ಹಾಗಾದರೆ ನೀವೇನು ಮಾಡಬಹುದು? ಕೆಳಗೆ ಬೀಳುತ್ತಿರುವ ಚೂರಿಯನ್ನು ಹಿಡಿಯಲು ಹೋದರೆ, ಅದು ನಿಮ್ಮ ಜೀವಕ್ಕ ಅಪಾಯ ತಂದೊಡ್ಡಬಹುದು. ಹಾಗಂತ ಕೆಳಗೆ ಬೀಳುತ್ತಿರುವ ವಜ್ರವನ್ನು ಕೈ ಚೆಲ್ಲಿದರೆ ಅದು ಮೂರ್ಖತನ. ಹಾಗಾಗಿ ಈ ಕುಸಿತ, ಒಳ್ಳೆಯ ಷೇರುಗಳ ಆಯ್ಕೆಗೆ ಸುಸಮಯ ಅನ್ನುತ್ತಾರೆ ತಜ್ಞರು. 



(ಸೂಚನೆ:  ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ.  ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.) 



Comments

Popular posts from this blog