ಎನ್ ಟಿ ಪಿ ಸಿ ಗ್ರೀನ್ ಎನರ್ಜಿ ಐಪಿಒ ಬಗ್ಗೆ ನಮ್ಮ ವಿಶ್ಲೇಷಣೆ ಇಲ್ಲಿದೆ
ಬೆಂಗಳೂರು: ಎನ್ ಟಿ ಪಿ ಸಿ ಗ್ರೀನ್ ಎನರ್ಜಿ ಲಿಮಿಟೆಡ್ ಐಪಿಒ ಮಂಗಳವಾರ, ನವೆಂಬರ್ 19ದಿಂದ ಹೂಡಿಕೆದಾರರಿಗೆ ಲಭ್ಯವಾಗಲಿದ್ದು, ನವೆಂಬರ್ 22, 2024 ಶುಕ್ರವಾರದಂದು ಮುಕ್ತಾಯಗೊಳ್ಳುತ್ತದೆ. ನಮ್ಮ ಪ್ರಕಾರ ಇದರ ಮೇಲಿನ ಹೂಡಿಕೆ ನಿಮ್ಮ ಬೆಸ್ಟ್ ಇನ್ವೆಸ್ಟ್ಮೆಂಟ್ ಆಗಲಿದೆ.
ಸದ್ಯಕ್ಕೆ ನಮ್ಮ ಅಂದಾಜಿನ ಪ್ರಕಾರ, ನೀವು ನಿರೀಕ್ಷಿಸಿದಷ್ಟು ಷೇರುಗಳು ನಿಮಗೆ ಐಪಿಒದಲ್ಲಿ ಸಿಗಲಾರದು. ಏಕೆಂದರೆ, ಈ ಐಪಿಒಗೆ ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಇರುವ ಸಾಧ್ಯತೆ ಇದೆ.
ಸದ್ಯಕ್ಕೆ ಪ್ರತಿ ಷೇರಿಗೆ ₹102 ರಿಂದ ₹108 ಎಂದು ಬೆಲೆ ನಿಗದಿ ಪಡಿಸಲಾಗಿದೆ. ನೀವು ಕನಿಷ್ಠವೆಂದರೂ
138 ಷೇರುಗಳನ್ನು ಖರೀದಿಸಬೇಕು. ಹೂಡಿಕೆದಾರರು ಕನಿಷ್ಠ 138 ಈಕ್ವಿಟಿ ಷೇರುಗಳಿಗೆ ಮತ್ತು ನಂತರ 138 ಷೇರುಗಳ ಗುಣಕಗಳಲ್ಲಿ ಬಿಡ್ ಮಾಡಬಹುದು. ಚಿಲ್ಲರೆ ಹೂಡಿಕೆದಾರರು 138 ಷೇರುಗಳ ಒಂದು ಲಾಟ್‌ಗೆ ಕನಿಷ್ಠ 14,904 ರೂ ಹೂಡಿಕೆ ಮಾಡಬಹುದು ಮತ್ತು ಅವರ ಗರಿಷ್ಠ ಹೂಡಿಕೆಯು 1,794 ಷೇರುಗಳ 13 ಲಾಟ್‌ಗಳಿಗೆ 1,93,752 ರೂ ಆಗಿರುತ್ತದೆ, ಏಕೆಂದರೆ ಅವರು ಐಪಿಒದಲ್ಲಿ ರೂ 2 ಲಕ್ಷದವರೆಗೆ ಹೂಡಿಕೆ ಮಾಡಲು ಅನುಮತಿಸಲಾಗಿದೆ.
ಎನ್ ಟಿ ಪಿ ಸಿ ಗ್ರೀನ್ ಕೇಂದ್ರ ಸರಕಾರಿ ಸ್ವಾಮ್ಯದ ಸಂಸ್ಥೆ. ನಿಮಗೆ ದೊಡ್ಡ ಪ್ರಮಾಣದಲ್ಲಿ ಅಲ್ಲವಾದರೂ, ಈ ಷೇರು ಖಂಡಿತಾ ಉತ್ತಮ ಲಾಭ ತಂದು ಕೊಡಲಿದೆ. ಹಾಗಾಗಿ ನಿಮ್ಮಲ್ಲಿ ಸುಮಾರು ಹದಿನೈದು ಸಾವಿರ ರೂಪಾಯಿ ಹಣವಿದ್ದರೆ, ಖಂಡಿತ ಈ ಐಪಿಒದಲ್ಲಿ ಹಣ ತೊಡಗಿಸಬಹುದು.
(ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.)
Comments
Post a Comment