ನಮ್ಮ ಹಿಂದಿನ ವಿಶ್ಲೇಷಣೆ ಮತ್ತೆ ಸತ್ಯವಾಗಲಿದೆ: ಇಂದು ಕೂಡಾ ಏರಲಿದೆ ಷೇರು ಮಾರುಕಟ್ಟೆ
ಕಳೆದ ವಾರ ರಕ್ತದೋಕುಳಿ ಕಂಡಿದ್ದ ಷೇರು ಮಾರುಕಟ್ಟೆ ಈ ವಾರ ಮಹಾರಾಷ್ಟ್ರ ಚುನಾವಣಾ ಫಲಿತಾಂಶದ ಮೇಲೆ ಅವಲಂಬಿತವಾಗಿರಲಿದೆ ಎಂದು ನಾವು ವಿಶ್ಲೇಷಿಸಿದ್ದೆವು. ಮಹಾರಾಷ್ಟ್ರ ಚುನಾವಣೆಯ ಎಕ್ಸಿಟ್ ಪೋಲ್ ಆಧಾರದ ಮೇಲೆ ಸುಮಾರು ಎರಡು ಸಾವಿರ ಏರಿಕೆ ಕಂಡಿದ್ದ ಸೂಚ್ಯಂಕ ಇಂದು ಮತ್ತೆಆಗಸದೆತ್ತರಕ್ಕೆ ಚಿಮ್ಮಲಿದೆ.
ಒಂದೊಮ್ಮೆ ಹೊಸ ಆರೋಪಗಳು ಇಲ್ಲವಾಗುತ್ತಿದ್ದರೆ, ಆದಾನಿ ಗುಂಪಿನ ಷೇರುಗಳು ಇಂದು ಹೂಡಿಕೆದಾರರಿಗೆ ಭಾರಿ ಲಾಭ ತಂದುಕೊಡುವ ಸಾಧ್ಯತೆ ಇತ್ತು. ಆದರೆ ಇಂದು ಆದಾನಿ ಷೇರುಗಳನ್ನು ಹೊರತು ಪಡಿಸಿ ಉಳಿದ ಷೇರುಗಳು ಮೇಲಕ್ಕೇರುವ ಸಾಧ್ಯತೆ ಇದೆ.
ಮಹಾರಾಷ್ಟ್ರ ವಿಧಾನ ಸಭಾ ಚುನಾವಣಾ ಫಲಿತಾಂಶ ಕೇಂದ್ರ ಸರಕಾರ ಸುಧಾರಣಾ ನೀತಿಗಳನ್ನು ಮುಂದುವರಿಸಲು ನೀಡಿದ ಗ್ರೀನ್ ಲೈಟ್ ಎಂದು ತಜ್ಞರ ಅಭಿಪ್ರಾಯ. ಈಗ ಸರಕಾರ ತನ್ನ ಹಳೆಯ ಸುಧಾರಣಾ ಪ್ರಕ್ರಿಯೆ ಮುಂದುವರಿಸಿದರೆ, ಬಹುತೇಕ ಮಾರುಕಟ್ಟೆ ಸೂಚ್ಯಂಕ ಹಿಂದಿನ ಸ್ಥಿತಿಗೆ ಮರಳಬಹುದು.
Comments
Post a Comment