ಸದ್ಯಕ್ಕೆ ಬೆಸ್ಟ್ ಬೆಟ್ಸ್ :ಅಪೋಲೋ ಮೈಕ್ರೋ, ಬಿಇಎಲ್, ವೇದಾಂತ ಹಾಗು ಜಿಯೋ ಫೈನಾನ್ಸ್ ಸ್ಟಾಕ್ ಮಾರ್ಕೆಟ್ ನ ಅನಿಶ್ಚಿತತೆಗಳಿಂದ ನಿಮಗೆ ನಷ್ಟದ ಹೆದರಿಕೆ ಇದ್ದರೆ, ನೀವು ಕಣ್ಮುಚ್ಚಿ ಖರೀದಿಸಬಹುದಾದ ನಾಲ್ಕು ಷೇರುಗಳ ಪಟ್ಟಿ ಇಲ್ಲಿದೆ. ಅಪೋಲೋ ಮೈಕ್ರೋ ಬಿಇಎಲ್ ವೇದಾಂತ ಜಿಯೋ ಫೈನಾನ್ಸ್ ಅಪೊಲೊ ಮೈಕ್ರೋ ಸಿಸ್ಟಮ್ಸ್ ಲಿಮಿಟೆಡ್ (AMSL) ತೆರಿಗೆಯ ನಂತರದ ಲಾಭದಲ್ಲಿ ಎರಡು ಪಟ್ಟು ಹೆಚ್ಚಳವನ್ನು ದಾಖಲಿಸಿದೆ. ಸೆಪ್ಟೆಂಬರ್ 2024 ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ಕಂಪನಿ ಸುಮಾರು 16 ಕೋಟಿ ರೂ ಲಾಭ ದಾಖಲಿಸಿದೆ. ಒಟ್ಟು ಆದಾಯವು ಹಿಂದಿನ ವರ್ಷದ 87.40 ಕೋಟಿಯಿಂದ 161.30 ಕೋಟಿಗೆ ಏರಿಕೆಯಾಗಿದೆ. AMSL ಮೂಲಸೌಕರ್ಯ, ಸಾರಿಗೆ ಮತ್ತು ಏರೋಸ್ಪೇಸ್‌ನಂತಹ ಕ್ಷೇತ್ರಗಳಲ್ಲಿ ತಂತ್ರಜ್ಞಾನ-ಚಾಲಿತ ಪರಿಹಾರಗಳನ್ನು ಒದಗಿಸುತ್ತಿರುವ ಸಂಸ್ಥೆಯಾಗಿದೆ. ಸದ್ಯಕ್ಕೆ ನೂರು ರೂಪಾಯಿ ಆಸುಪಾಸಿನಲ್ಲಿ ಸಂಸ್ಥೆಯ ಷೇರು ಇದ್ದು, ಒಂದು ವರ್ಷದಲ್ಲಿ ಸುಮಾರು ಇನ್ನೂರ ಐವತ್ತರ ಸಮೀಪ ಇದು ತಲುಪಬಹುದು ಎನ್ನುವ ನಿರೀಕ್ಷೆ ಇದೆ. ಇನ್ನು ಜಿಯೋ ಫೈನಾನ್ಸ್ ತನ್ನ ಸೇವಾ ವ್ಯಾಪ್ತಿಯನ್ನು ದೊಡ್ಡ ಮಟ್ಟದಲ್ಲಿ ಹಿಗ್ಗಿಸಿಕೊಳ್ಳುತ್ತಿದೆ. ಹೀಗಾಗಿ, ನಿಮ್ಮ ಇನ್ವೆಸ್ಟ್ಮೆಂಟ್ ಖಂಡಿತವಾಗಿಯೂ ಅಲ್ಲಿ ಸುರಕ್ಷಿತ. ವೇದಾಂತ ಕಂಪನಿ ತನ್ನ ಸ್ಪ್ಲಿಟ್ ಘೋಷಿಸಿದೆ....
Posts
Showing posts from October, 2024
- Get link
- X
- Other Apps
ಶಾರ್ಟ್ ಟರ್ಮ್ : ಆಟೋಮೊಬೈಲ್ ಷೇರುಗಳಿಂದ ದೂರ ಇರುವುದು ಒಳ್ಳೆಯದು ನೀವು ಶಾರ್ಟ್ ಟರ್ಮ್ ಹೂಡಿಕೆದಾರರರಾಗಿದ್ದರೆ, ಮೂರೂ ಪ್ರಮುಖ ಆಟೋಮೊಬೈಲ್ ಷೇರುಗಳಿಂದ ದೂರ ಇರುವುದು ಒಳ್ಳೆಯದು. ಆದರೆ ನೀವು ಲಾಂಗ್ ಟರ್ಮ್ ಹೂಡಿಕೆದಾರರಾಗಿದ್ದರೆ, ನೀವು ಆಟೋಮೊಬೈಲ್ ಷೇರುಗಳ ಖರೀದಿಗೆ ಇದು ಸುಸಮಯ ಬುಧವಾರ ಬಹುತೇಕ ಎಲ್ಲಾ ಆಟೋಮೊಬೈಲ್ ಷೇರುಗಳು ಕುಸಿಯುವ ಸಾಧ್ಯತೆ ಇದೆ. ಏಕೆಂದರೆ ನಿನ್ನೆ ಬಿಡುಗಡೆಗೊಂಡ ಮಾರುತಿ ತ್ರೈಮಾಸಿಕ ಫಲಿತಾಂಶ ಎಲ್ಲರಿಗೂ ನಿರಾಸೆ ಉಂಟು ಮಾಡಿದೆ. ಒಂದೊಮ್ಮೆ ಮಾರುತಿ ಷೇರುಗಳು ಕುಸಿದರೆ ಅದರ ದುಷ್ಪರಿಣಾಮ ಟಾಟಾ ಮೋಟರ್ಸ್, ಹುಂಡೈ ಷೇರುಗಳ ಮೇಲೆ ಕೂಡಾ ಬೀಳಬಹುದು. ಆದರೆ ನೀವು ಒಂದೊಮ್ಮೆ ಲಾಂಗ್ ಟರ್ಮ್ ಹೂಡಿಕೆದಾರರಾಗಿದ್ದರೆ, ಮುಂದಿನ ವಾರ ಈ ಸ್ಟಾಕ್ ಗಳ ಖರೀದಿಗೆ ಯೋಚಿಸಬಹುದು. ಏಕೆಂದರೆ ಈ ಹಿನ್ನಡೆ ತಾತ್ಕಾಲಿಕ. ಸುಮಾರು ಆರು ತಿಂಗಳಲ್ಲಿ ಈ ಸ್ಟಾಕುಗಳು ಸುಮಾರು ಮೂವತ್ತು ಪ್ರತಿಶತ ರಿಟರ್ನ್ಸ್ ನೀಡುವ ನಿರೀಕ್ಷೆ ಇದೆ. (ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.)
- Get link
- X
- Other Apps
ದೀಪಕ್ ಬಿಲ್ಡರ್ಸ್ & ಇಂಜಿನಿಯರ್ಸ್ ಷೇರು ನಿಮ್ಮ ಗಮನದಲ್ಲಿರಲಿ ೨೦೩ ರುಪಾಯಿಗೆ ಲಿಸ್ಟ್ ಆದ ಬಳಿಕ ದೀಪಕ್ ಬಿಲ್ಡರ್ಸ್ & ಇಂಜಿನಿಯರ್ಸ್ ಷೇರು ದೊಡ್ಡ ಮಟ್ಟದ ಕುಸಿತ ಕಂಡಿದೆ. ಸುಮಾರು ನಲವತ್ತು ರೂಪಾಯಿಗಳಷ್ಟು ಕುಸಿತ ಕಂಡಿರುವ ಈ ಷೇರು ಬೆಲೆ, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಕಾರಣವಿದೆ. ಕಳೆದ ವಾರ ಮೂರನೇ ಮತ್ತು ಅಂತಿಮ ದಿನದಂದು ಈ ಕಂಪನಿಯ IPO 41.54 ಬಾರಿ ಚಂದಾದಾರಿಕೆಯಾಗಿತ್ತು. ಈ ಪೈಕಿ ದೊಡ್ಡ ದೊಡ್ಡ ಹೂಡಿಕೆ ಸಂಸ್ಥೆಗಳ ಪಾಲೇ ದೊಡ್ಡದಿತ್ತು. ಉದಾಹರಣೆಗೆ ಸಾಂಸ್ಥಿಕವಲ್ಲದ ಹೂಡಿಕೆದಾರರು ಈ ಷೇರಿಗೆ 82.47 ಪಟ್ಟು ಬಿಡ್ ಮಾಡಿದರು, ನಂತರ ಚಿಲ್ಲರೆ ಹೂಡಿಕೆದಾರರು (39.79 ಪಟ್ಟು ) ಮತ್ತು ಅರ್ಹ ಸಾಂಸ್ಥಿಕ ಖರೀದಿದಾರರು (13.91 ಪಟ್ಟು ) ದೀಪಕ್ ಬಿಲ್ಡರ್ಸ್ & ಇಂಜಿನಿಯರ್ಸ್ ಎಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿರ್ಮಾಣ ಕಂಪನಿಯಾಗಿದ್ದು ಅದು ರೈಲ್ವೆ ಸೇತುವೆಗಳನ್ನು ನಿರ್ಮಿಸುತ್ತದೆ ಮತ್ತು ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಮತ್ತು ಪುನರಾಭಿವೃದ್ಧಿಯನ್ನು ಸಹ ಕೈಗೊಳ್ಳುತ್ತದೆ. ಇದರ ಇತರ ನಿರ್ಮಾಣ ಯೋಜನೆಗಳಲ್ಲಿ ಆಡಳಿತಾತ್ಮಕ ಮತ್ತು ಸಾಂಸ್ಥಿಕ ಕಟ್ಟಡಗಳು, ಆಸ್ಪತ್ರೆಗಳು ಮತ್ತು ಫ್ಲೈಓವರ್‌ಗಳು ಸೇರಿವೆ. ಕಂಪನಿಯು 2024 ರ ಹಣಕಾಸು ವರ್ಷದಲ್ಲಿ 1,380 ಕೋಟಿ ಮೌಲ್ಯದ ಆರ್ಡರ್‌ಗಳನ್...
- Get link
- X
- Other Apps
ಅತ್ಯುತ್ತಮ ತ್ರೈಮಾಸಿಕ ಫಲಿತಾಂಶ ಘೋಷಿಸಿರುವ ಈ ಸ್ಟಾಕ್ ಗಳು ನಿಮ್ಮ ಬದುಕು ಬದಲಾಯಿಸಬಹುದು! ಷೇರುಮಾರುಕಟ್ಟೆಯಲ್ಲಿ ರಕ್ತದೋಕುಳಿ ಬಳಿಕ, ಕೆಲವು ಷೇರುಗಳು ಅತ್ಯಂತ ಅಗ್ಗಕ್ಕೆ ದೊರಕುತ್ತಿವೆ. ನೀವು ಲಾಂಗ್ ಟರ್ಮ್ (ದೀರ್ಘಾವಧಿ) ಹೂಡಿಕೆದಾರರಾಗಿದ್ದರೆ, ಕೆಲವು ಸ್ಟಾಕುಗಳಲ್ಲಿ ಹೂಡಿಕೆ ಮಾಡಲು ಇದು ಸುಸಮಯ. ಈ ನಡುವೆ ಇದೀಗ ತ್ರೈಮಾಸಿಕ ಹಾಗೂ ಅರ್ಧವಾರ್ಷಿಕ ಫಲಿತಾಂಶ ಕಾಲ. ಕೆಲವು ಕಂಪನಿಗಳ ಫಲಿತಾಂಶ ಅತ್ಯುತ್ತಮವಾಗಿದ್ದು, ನಿಶ್ಚಿತವಾಗಿ ನಿಮ್ಮ ಹೂಡಿಕೆಯನ್ನು ವರ್ಷವಾಧಿಯಲ್ಲಿ ದ್ವಿಗುಣಗೊಳಿಸುವ ಸಾಧ್ಯೆತೆ ಇದೆ. ಈ ಕೆಲವು ಷೇರುಗಳ ಪಟ್ಟಿ ಇಲ್ಲಿದೆ. ಯಸ್ ಬ್ಯಾಂಕ್ ಸುಜ್ಲ್ಯಾನ್ ಎನರ್ಜಿ ಜೆ ಎಸ್ ಡಬ್ಲ್ಯು ಇನ್ಫ್ರಾ ಫೆಡರಲ್ ಬ್ಯಾಂಕ್ ಕ್ಯಾಸ್ಟ್ರಾಲ್ ಇಂಡಿಯಾ (ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.)
- Get link
- X
- Other Apps
ಯದ್ವಾತದ್ವಾ ಏರಿಕೆ: ಪಾಕಿಸ್ತಾನ್ ಸ್ಟಾಕ್ ಎಕ್ಸ್ಚೇಂಜ್ ಹೊಸ ದಾಖಲೆ ! ಒಂದೆಡೆ ಭಾರತದಲ್ಲಿ ಷೇರು ಮಾರುಕಟ್ಟೆ ಕುಸಿಯುತ್ತಿದ್ದರೆ, ಪಾಕಿಸ್ತಾನದಲ್ಲಿ ಷೇರು ಮಾರುಕಟ್ಟೆ ಹೊಸ ದಾಖಲೆ ಸೃಷ್ಟಿಸಿದೆ. ಶುಕ್ರವಾರ ಸುಮಾರು ಒಂದು ಪ್ರತಿಶತ ಜಿಗಿತದೊಂದಿಗೆ, 90,000 ಅಂಶಗಳನ್ನು ಷೇರು ಮಾರುಕಟ್ಟೆ ಹಿಂದಿಕ್ಕಿದೆ. ಅಂದಹಾಗೆ, ಈ ವರ್ಷದ ಅಂತ್ಯದ ಒಳಗೆ ಪಾಕಿಸ್ತಾನ ಷೇರು ಮಾರುಕಟ್ಟೆ ಒಂದು ಲಕ್ಷ ಅಂಶಗಳನ್ನು ದಾಟಲಿದೆ ಎಂಬ ವಿಶ್ಲೇಷಣೆ ಅಲ್ಲಿನ ಆರ್ಥಿಕ ತಜ್ಞರದ್ದು. ಭಾರತೀಯರ ಒಂದು ಗುಂಪು ಇದನ್ನು ತಮಾಷೆ ಎಂದು ಪರಿಗಣಿಸಬಹುದು. ಆದರೆ ಪಾಕಿಸ್ತಾನದಲ್ಲಿನ ಸರಕಾರ ಕೈಗೊಳ್ಳುತ್ತಿರುವ ದಿಟ್ಟ ಆರ್ಥಿಕ ನೀತಿಗಳಿಂದ ಅಲ್ಲಿನ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ. ಹಣದುಬ್ಬರ ಸ್ಥಿರಗೊಂಡಿದೆ. ಮುಂದಿನವಾರ ಅಲ್ಲಿನ ರಿಸರ್ವ್ ಬ್ಯಾಂಕ್ ಬಡ್ಡಿದರ ಕಡಿತಗೊಳಿಸುವ ಸೂಚನೆ ನೀಡಿದೆ. ಇದಕ್ಕ್ಕೆ ತದ್ವಿರುದ್ಧವಾದ ಸ್ಥಿತಿ ಈಗ ಸದ್ಯಕ್ಕೆ ಭಾರತದಲ್ಲಿದೆ. ಕೇಂದ್ರ ಸರಕಾರ ಆರ್ಥಿಕ ಸುಧಾರಣೆ ಕೈಬಿಟ್ಟಿದೆ ಅನಿಸುವಂತಿದೆ. ಪರಿಣಾಮ ಷೇರು ಮಾರುಕಟ್ಟೆ ಪಾತಾಳಕ್ಕೆ ಸೇರಿದೆ.
- Get link
- X
- Other Apps
ಈ ದೀಪಾವಳಿಗೆ ತಜ್ಞರ "ಅಗ್ಗದ " ಫೆವೆರೆಟ್ ಷೇರುಗಳು ಷೇರು ಮಾರುಕಟ್ಟೆಯಲ್ಲಿ ಈಗ ರಕ್ತದೋಕುಳಿದ್ದೇ ಮಾತುಗಳು. ಬಹುತೇಕ ಒಳ್ಳೊಳ್ಳೆ ಷೇರುಗಳು ಕೂಡಾ ಪಾತಾಳ ತಲುಪಿವೆ. ಅಮೇರಿಕ ಅಧ್ಯಕ್ಷೀಯ ಚುನಾವಣೆ, ಹಾಗು ಮಹಾರಾಷ್ಟ್ರ ವಿಧಾನ ಸಭಾ ಚುನಾವಣಾ ಫಲಿತಾಂಶ ತನಕ ಈ ಅಸ್ಥಿರತೆ ಮುಂದುವರಿಯಲಿದೆ. ಆದರೆ ಈ ನಡುವೆ ದೀಪಾವಳಿ ಬರುತ್ತಿದೆ. ಈ ಹಿನ್ನಲೆಯಲ್ಲಿ ನೀವು ಖರೀದಿಸಬಹುದಾದ ಒಂದಿಷ್ಟು ಅಗ್ಗದ ಷೇರುಗಳ ಪಟ್ಟಿ ಇಲ್ಲಿದೆ. ಈ ಷೇರುಗಳು ಖಂಡಿತಾ ನಿಮಗೆ ನಷ್ಟ ತಂದುಕೊಡಲಾರವು. ಷೇರು : ಟಾರ್ಗೆಟ್ BEL: 426 ರೂಪಾಯಿ ಐ ಎಫ್ ಸಿ ಐ : 88 ರೂಪಾಯಿ ಐಆರ್ ಬಿ ಇಫ್ರಾ : 86 ರೂಪಾಯಿ ಬಿ ಎಚ್ ಇ ಎಲ್: 390 ರೂಪಾಯಿ ಎಕ್ಸಿಡ್ ಇಂಡಸ್ಟ್ರೀಸ್: 740 ರೂಪಾಯಿ ಗುಜರಾತ್ ಮಿನರಲ್ ಡೆವಲಪ್ಮೆಂಟ್ ಕಾರ್ಪೊರೇಷನ್: 544 ರೂಪಾಯಿ (ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.)
- Get link
- X
- Other Apps
ಝೊಮ್ಯಾಟೊ ಷೇರು ಖರೀದಿಸಿ- ಬಡತನ ದೂರಗೊಳಿಸಿ! ಕಳೆದ ಒಂದು ವರ್ಷಗಳ ಅವಧಿಯಲ್ಲಿ ಸುಮಾರು ಒಂದೂವರೆ ಪಟ್ಟು ಲಾಭವನ್ನು ಹೂಡಿಕೆದಾರರಿಗೆ ತಂದುಕೊಟ್ಟ ಝೊಮ್ಯಾಟೊ ಷೇರು ಈಗ ಮತ್ತೆ ಸುದ್ದಿಯಲ್ಲಿದೆ. ಸುಮಾರು ೨೫೦ ರೂಪಾಯಿ ಆಸು ಪಾಸಿನಲ್ಲಿರುವ ಈ ಷೇರು ಮುಂದಿನ ದಿನಗಳಲ್ಲಿ ಮುನ್ನೂರ ಐವತ್ತು ರೂಪಾಯಿಯತ್ತ ಸಾಗುವ ಸ್ಪಷ್ಟ ಸೂಚನೆ ಸಿಕ್ಕಿದೆ. ಆರು ತಿಂಗಳಲ್ಲಿ ನಿಮ್ಮ ಹೂಡಿಕೆಯನ್ನು ಇದು ದ್ವಿಗುಣಗೊಳಿಸುವ ಷೇರು ಅಂದರೆ ತಪ್ಪಾಗಲಾರದು. ನಿನ್ನೆ ಝೊಮ್ಯಾಟೊ ತ್ರೈಮಾಸಿಕ ಫಲಿತಾಂಶದ ಬಳಿಕ ತಜ್ಞರು ಈ ಷೇರು ಟಾರ್ಗೆಟ್ ಬೆಲೆ ಏರಿಸಿದ್ದಾರೆ. ಹೀಗಾಗಿ ನೀವು ಲಾಂಗ್ ಟರ್ಮ್ ಹೂಡಿಕೆದಾರರಾಗಿದ್ದರೆ, ಈ ಶೇರು ಖರೀದಿಸಬಹುದು. (ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.)
- Get link
- X
- Other Apps
ಈ ಪೆನ್ನಿ ಸ್ಟಾಕ್ ಖರೀದಿಗೆ ನೀವು ಯೋಚಿಸಬಹುದು! ದಿಢೀರ್ ಹಣಮಾಡುವ ಯೋಚನೆಯಲ್ಲಿ ಪೆನ್ನಿ (PENNY) ಷೇರುಗಳಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಳ್ಳುವವರೇ ಹೆಚ್ಚು. ಆದರೆಕೆಲವು ಪೆನ್ನಿ ಷೇರುಗಳು ಚಿಪ್ಪಿನೊಳಗಿನ ಮುತ್ತಿನಂತೆ ಅಡಗಿರುತ್ತವೆ. ಅವುಗಳ ಬಗ್ಗೆ ಒಂದಿಷ್ಟು ಅಧ್ಯಯನ ನಡೆಸಿ, ಖರೀದಿಸಬಹುದು. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್ ನಲ್ಲಿರುವ ಪೆನ್ನಿ ಷೇರು ಅಂದರೆ ಅದು ಸರ್ವೇಶ್ವರ್ ಫುಡ್ಸ್ ಲಿಮಿಟೆಡ್. ಶುಕ್ರವಾರ ಮಾರುಕಟ್ಟೆ ಅವಧಿ ಬಳಿಕ, ಕಂಪನಿ ತನ್ನ ಅರ್ಧ ವಾರ್ಷಿಕ ಹಣಕಾಸು ಫಲಿತಾಂಶ ಬಿಡುಗಡೆ ಮಾಡಿತು. ತಜ್ಞರ ಪ್ರಕಾರ ಈ ಫಲಿತಾಂಶ ಅತ್ಯುತ್ತಮವಾಗಿದೆ. ಸದ್ಯಕ್ಕೆ ಒಂಭತ್ತು ರೂಪಾಯಿ ಆಸುಪಾಸಿನಲ್ಲಿರುವ ಈ ಕಂಪನಿ ಷೇರು ದ್ವಿಗುಣಗೊಳ್ಳುವ ನಿರೀಕ್ಷೆ ಎಲ್ಲರದ್ದೂ. ಎಲ್ಲರ ಚಿತ್ತ ಈಗ ನೆಟ್ಟಿರುವುದು ಸೋಮವಾರದ ಟ್ರೇಡಿಂಗ್ ಟ್ರೆಂಡ್ಸ್ ಮೇಲೆ H1 FY25 ಗೆ, H1 FY24 ಹೋಲಿಸಿದರೆ, ಕಂಪನಿಯ ಫಲಿತಾಂಶ ಹೀಗಿದೆ. • ಒಟ್ಟು ಆದಾಯ INR 504.36 ಕೋಟಿ v/s INR 392.90 ಕೋಟಿ (+ 28.37%) * ತೆರಿಗೆ ಬಳಿಕ ಲಾಭ INR 11.24 ಕೋಟಿ v/s INR 7.74 ಕೋಟಿ (+ 45.22%) H1 FY25 - H2 FY24 ಗೆ ಹೋಲಿಸಿದರೆ ಒಟ್ಟು ಆದಾಯ INR 504.36 ಕೋಟಿ v/s INR 476.69 ಕೋಟಿ (+ 5.80%) ತೆರಿಗೆ ಬಳಿಕ ಲಾಭ INR 11.24 ಕೋಟಿ v/s INR 9.04 ಕೋಟಿ (+ 24...
- Get link
- X
- Other Apps
ಈ ಮೂರು ಸ್ಟಾಕ್ ಗಳು ನಿಮ್ಮ ಪಾಲಿಗೆ ಬಂಗಾರವಾಗಬಹುದು ಈ ಬಾರಿಯ ದೀಪಾವಳಿಯನ್ನು ನೀವು ಈ ಮೂರೂ ಅಗ್ಗದ ಷೇರುಗಳೊಂದಿಗೆ ಆಚರಿಸಬಹುದು. ಅವುಗಳೆಂದರೆ ಜಿಪಿಪಿಎಲ್ (GPPL), ಪಿರಮಿಡ್ ಟೆಕ್ನಾಪ್ಲಾಸ್ಟ್ (Pyramid Technoplast), ಹಾಗು ಬಿಇಎಲ್ (BEL). ಈ ಮೂರೂ ಷೇರುಗಳ ಬೆಲೆ ನಿಧಾನವಾಗಿ ಆದರೆ ಸ್ಥಿರವಾಗಿ ಮೇಲಕ್ಕೇರುತ್ತಿದೆ. ಅವುಗಳ ಫೈನಾನ್ಸಿಲ್ಸ್ ಕೂಡ ಉತ್ತಮವಾಗಿದೆ. ಹೀಗಾಗಿ ಮುಂದಿನ ಒಂದು ವರ್ಷದ ಅವಧಿಯಲ್ಲಿ ಇವುಗಳ ಬೆಲೆ ದ್ವಿಗುಣಗೊಳ್ಳಬಹುದು ಎಂಬುದು ಮಾರುಕಟ್ಟೆ ನಿರೀಕ್ಷೆ. (ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.)
- Get link
- X
- Other Apps
ಹುಂಡೈ ಐಪಿಒ : ನಿಧಾನವಾಗಿ ಯೋಚಿಸಿ ನೋಡಿ! ಸದ್ಯಕ್ಕೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿರುವವರೆಲ್ಲರ ಮನಸ್ಸಿನಲ್ಲಿ ಕೊರೆಯುತ್ತಿರುವ ಪ್ರಶ್ನೆ ಹುಂಡೈ ಐಪಿಒದಲ್ಲಿ ಹೂಡಿಕೆ ಮಾಡಬೇಕೇ ಬೇಡವೇ ಎಂಬುದು. ನೀವು ಹೂಡಿಕೆ ಮಾಡುವುದಿದ್ದರೆ ಇಂದೇ ಕೊನೆ ದಿನ. ಸದ್ಯಕ್ಕೆ ಮೊದಲ ಎರಡು ದಿನದ ಪ್ರತಿಕ್ರಿಯೆ ಗಮನಿಸಿದರೆ, ಹೂಡಿಕೆದಾರರು, ಈ ಐಪಿಒ ಬಗ್ಗೆ ಹೆಚ್ಚಿನ ಕ್ರೇಜ್ ಬೆಳೆಸಿಕೊಂಡಂತಿಲ್ಲ. ಐವತ್ತರಷ್ಟೂ ಷೇರುಗಳಿಗೆ ಇಂದು ಬೆಳಗ್ಗೆಯವರೆಗೆ ಕೊಳ್ಳು ವವರಿರಲಿಲ್ಲ. ಈ ನಡುವೆ, ಗುರುವಾರ ಬಹುತೇಕ ಎಲ್ಲಾ ಆಟೋ ಸ್ಟಾಕ್ ಗಳು ಕುಸಿದಿವೆ. ಈ ಹಿನ್ನಲೆಯಲ್ಲಿ, ಹೂಡಿಕೆದಾರರು ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. (ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.)
- Get link
- X
- Other Apps
15 ರುಪಾಯಿಯ ಸೂಪರ್ ಟ್ಯಾನೇರಿ ಸ್ಟಾಕ್ ನಿಮ್ಮ ಗಮನದಲ್ಲಿರಲಿ ಕಡಿಮೆ ಬೆಲೆಯ ಸ್ಟಾಕ್ ಗಳ ಆಸಕ್ತರು ಗಮದಲ್ಲಿಟ್ಟುಕೊಳ್ಳಬಹುದಾದ ಸ್ಟಾಕ್ ಗಳಲ್ಲೊಂದು ಸುಮಾರು 15 ರುಪಾಯಿ ಆಸುಪಾಸಿನಲ್ಲಿ ದೊರೆಯುತ್ತಿರುವ ಸೂಪರ್ ಟ್ಯಾನೇರಿ ಸ್ಟಾಕ್ ನಿಮಗೆ ತಕ್ಷಣಕ್ಕೆ ಲಾಭ ತಂದುಕೊಡಬಲ್ಲ ಸ್ಟಾಕ್. ಸೂಪರ್ ಟ್ಯಾನರಿ ಷೇರು ಹೂಡಿಕೆದಾರರಿಗೆ ನಿನ್ನೆ 1.97%, ಕಳೆದ ತಿಂಗಳು 15.26% ಮತ್ತು ಕಳೆದ ಮೂರು ತಿಂಗಳಲ್ಲಿ 52.74% ನಷ್ಟು ಲಾಭ ತಂದುಕೊಟ್ಟಿದೆ. ಸೂಪರ್ ಟ್ಯಾನರಿ, ಲೆದರ್/ಸಿಂಥೆಟಿಕ್ ಉತ್ಪನ್ನಗಳ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು bse ನಲ್ಲಿ ಸ್ಮಾಲ್‌ಕ್ಯಾಪ್ ಎಂದು ವರ್ಗೀಕರಿಸಲಾಗಿದೆ. ಕಳೆದ ಎರಡು ತ್ರೈಮಾಸಿಕದಲ್ಲೂ ಲಾಭ ದಾಖಲಿಸಿರುವ ಈ ಕಂಪನಿ ಷೇರು ಬಗ್ಗೆ ನೀವು ಯೋಚಿಸಬಹುದು. (ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು )
- Get link
- X
- Other Apps
190 ರುಪಾಯಿಗೆ ತಲುಪಲಿದೆಯೇ ಟಾಟಾ ಸ್ಟೀಲ್ ಷೇರು ? ಸದ್ಯಕ್ಕೆ ಅತ್ಯಂತ ಕಡಿಮೆ ದರದಲ್ಲಿ ಲಭ್ಯವಿರುವ ಏಕೈಕ ಟಾಟಾ ಕಂಪನಿ ಷೇರು ಎಂದರೆ ಅದು ಟಾಟಾ ಸ್ಟೀಲ್. 160 ರೂಪಾಯಿ ಆಸುಪಾಸಿನಲ್ಲಿರುವ ಈ ಷೇರುಗಳು 190 ರುಪಾಯಿಗೆ ತಲುಪಲಿದೆ ಎನ್ನುವ ಗುರಿಯನ್ನು ಜೆಎಂ ಫೈನಾನ್ಸಿಯಲ್ ಸಂಸ್ಥೆ ನೀಡಿದೆ. ಅಂದರೆ ಹೂಡಿಕೆದಾರರು ಸುಮಾರು ಮೂವತ್ತು ರೂಪಾಯಿಗಳ ಲಾಭ ಗಳಿಸುವ ಸಾಧ್ಯತೆ ಇದೆ. ಅಂದರೆ ಸುಮಾರು ೨೦ ಪ್ರತಿಶತ ಲಾಭದ ನಿರೀಕ್ಷೆ ಇದೆ. ಟಾಟಾ ಸ್ಟೀಲ್ ಷೇರುಗಳು 2024 ರಲ್ಲಿ ಇದುವರೆಗೆ 15 ಶೇಕಡಾ ಮತ್ತು ಕಳೆದ ಒಂದು ವರ್ಷದಲ್ಲಿ ಶೇಕಡಾ 28 ರಷ್ಟು ಧನಾತ್ಮಕ ಲಾಭವನ್ನು ನೀಡಿವೆ. ಕಳೆದ ಎರಡು ವರ್ಷಗಳಲ್ಲಿ ಷೇರುಗಳು ಶೇ.60ರಷ್ಟು ಏರಿಕೆ ಕಂಡಿವೆ. (ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು )
- Get link
- X
- Other Apps
ಬಂಕಾ ಬೈಯೊ (Banka BioLoo Limited) ಷೇರು ನಿಮ್ಮ ಗಮನದಲ್ಲಿರಲಿ ಸ್ವಚ್ಛ ಭಾರತ ಹಿನ್ನಲೆಯಲ್ಲಿ ತ್ಯಾಜ್ಯ ಮರುಬಳಕೆ, ವಿಲೇವಾರಿಗೆ ದೊಡ್ಡ ಮಟ್ಟದ ಒತ್ತು ಸಿಗುತ್ತಿದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಬಂಕಾ ಬೈಯೋ (Banka BioLoo Limited) ಸಂಸ್ಥೆಯ ಷೇರುಗಳು ನಿಮ್ಮ ಗಮನದಲ್ಲಿರಲಿ. ಶುಕ್ರವಾರ ಸುಮಾರು ಏಳು ಪ್ರತಿಶತ ಏರಿಕೆ ಕಂಡಿದ್ದ ಈ ಷೇರು 133 ರೂಪಾಯಿ ಆಸುಪಾಸಿಗೆ ದೊರೆಯುತ್ತಿದೆ. ಕಳೆದ ಒಂದು ವರ್ಷದಲ್ಲಿ ಹೂಡಿಕೆದಾರರ ಹಣವನ್ನು ದ್ವಿಗುಣಗೊಳಿಸಿರುವ ಈ ಷೇರು ಇನ್ನಷ್ಟು ಏರಿಕೆ ಕಾಣುವುದರಲ್ಲಿ ಸಂಶಯವಿಲ್ಲ. ಇನ್ನು ಆರು ತಿಂಗಳ ಅವಧಿಯಲ್ಲಿ ಇನ್ನೂರು ರೂಪಾಯಿಗೆ ಈ ಷೇರು ಏರಿಕೆ ಕಾಣಬಹುದು ಅನ್ನುವ ಲೆಕ್ಕಾಚಾರ ಹೂಡಿಕೆದಾರರದ್ದು. (ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.)