ಯದ್ವಾತದ್ವಾ ಏರಿಕೆ: ಪಾಕಿಸ್ತಾನ್ ಸ್ಟಾಕ್ ಎಕ್ಸ್ಚೇಂಜ್ ಹೊಸ ದಾಖಲೆ !
ಒಂದೆಡೆ ಭಾರತದಲ್ಲಿ ಷೇರು ಮಾರುಕಟ್ಟೆ ಕುಸಿಯುತ್ತಿದ್ದರೆ, ಪಾಕಿಸ್ತಾನದಲ್ಲಿ ಷೇರು ಮಾರುಕಟ್ಟೆ ಹೊಸ ದಾಖಲೆ ಸೃಷ್ಟಿಸಿದೆ.
ಶುಕ್ರವಾರ ಸುಮಾರು ಒಂದು ಪ್ರತಿಶತ ಜಿಗಿತದೊಂದಿಗೆ, 90,000 ಅಂಶಗಳನ್ನು ಷೇರು ಮಾರುಕಟ್ಟೆ ಹಿಂದಿಕ್ಕಿದೆ.
ಅಂದಹಾಗೆ, ಈ ವರ್ಷದ ಅಂತ್ಯದ ಒಳಗೆ ಪಾಕಿಸ್ತಾನ ಷೇರು ಮಾರುಕಟ್ಟೆ ಒಂದು ಲಕ್ಷ ಅಂಶಗಳನ್ನು ದಾಟಲಿದೆ ಎಂಬ ವಿಶ್ಲೇಷಣೆ ಅಲ್ಲಿನ ಆರ್ಥಿಕ ತಜ್ಞರದ್ದು.
ಭಾರತೀಯರ ಒಂದು ಗುಂಪು ಇದನ್ನು ತಮಾಷೆ ಎಂದು ಪರಿಗಣಿಸಬಹುದು. ಆದರೆ ಪಾಕಿಸ್ತಾನದಲ್ಲಿನ ಸರಕಾರ ಕೈಗೊಳ್ಳುತ್ತಿರುವ ದಿಟ್ಟ ಆರ್ಥಿಕ ನೀತಿಗಳಿಂದ ಅಲ್ಲಿನ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ. ಹಣದುಬ್ಬರ ಸ್ಥಿರಗೊಂಡಿದೆ. ಮುಂದಿನವಾರ ಅಲ್ಲಿನ ರಿಸರ್ವ್ ಬ್ಯಾಂಕ್ ಬಡ್ಡಿದರ ಕಡಿತಗೊಳಿಸುವ ಸೂಚನೆ ನೀಡಿದೆ.
ಇದಕ್ಕ್ಕೆ ತದ್ವಿರುದ್ಧವಾದ ಸ್ಥಿತಿ ಈಗ ಸದ್ಯಕ್ಕೆ ಭಾರತದಲ್ಲಿದೆ. ಕೇಂದ್ರ ಸರಕಾರ ಆರ್ಥಿಕ ಸುಧಾರಣೆ ಕೈಬಿಟ್ಟಿದೆ ಅನಿಸುವಂತಿದೆ. ಪರಿಣಾಮ
ಷೇರು ಮಾರುಕಟ್ಟೆ ಪಾತಾಳಕ್ಕೆ ಸೇರಿದೆ.
Comments
Post a Comment