ಈ ಪೆನ್ನಿ ಸ್ಟಾಕ್ ಖರೀದಿಗೆ ನೀವು ಯೋಚಿಸಬಹುದು! 


ದಿಢೀರ್ ಹಣಮಾಡುವ ಯೋಚನೆಯಲ್ಲಿ ಪೆನ್ನಿ (PENNY) ಷೇರುಗಳಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಳ್ಳುವವರೇ ಹೆಚ್ಚು. ಆದರೆಕೆಲವು ಪೆನ್ನಿ ಷೇರುಗಳು  ಚಿಪ್ಪಿನೊಳಗಿನ ಮುತ್ತಿನಂತೆ ಅಡಗಿರುತ್ತವೆ. ಅವುಗಳ ಬಗ್ಗೆ ಒಂದಿಷ್ಟು ಅಧ್ಯಯನ ನಡೆಸಿ, ಖರೀದಿಸಬಹುದು. 


ಸದ್ಯಕ್ಕೆ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್ ನಲ್ಲಿರುವ ಪೆನ್ನಿ ಷೇರು ಅಂದರೆ ಅದು ಸರ್ವೇಶ್ವರ್ ಫುಡ್ಸ್ ಲಿಮಿಟೆಡ್. ಶುಕ್ರವಾರ ಮಾರುಕಟ್ಟೆ ಅವಧಿ ಬಳಿಕ, ಕಂಪನಿ ತನ್ನ ಅರ್ಧ ವಾರ್ಷಿಕ ಹಣಕಾಸು ಫಲಿತಾಂಶ ಬಿಡುಗಡೆ ಮಾಡಿತು. ತಜ್ಞರ ಪ್ರಕಾರ ಈ ಫಲಿತಾಂಶ ಅತ್ಯುತ್ತಮವಾಗಿದೆ. 


ಸದ್ಯಕ್ಕೆ ಒಂಭತ್ತು ರೂಪಾಯಿ ಆಸುಪಾಸಿನಲ್ಲಿರುವ ಈ ಕಂಪನಿ ಷೇರು ದ್ವಿಗುಣಗೊಳ್ಳುವ ನಿರೀಕ್ಷೆ ಎಲ್ಲರದ್ದೂ. ಎಲ್ಲರ ಚಿತ್ತ ಈಗ ನೆಟ್ಟಿರುವುದು ಸೋಮವಾರದ ಟ್ರೇಡಿಂಗ್ ಟ್ರೆಂಡ್ಸ್ ಮೇಲೆ 


H1 FY25 ಗೆ, H1 FY24  ಹೋಲಿಸಿದರೆ, ಕಂಪನಿಯ  ಫಲಿತಾಂಶ ಹೀಗಿದೆ. 


• ಒಟ್ಟು ಆದಾಯ INR 504.36 ಕೋಟಿ v/s INR 392.90 ಕೋಟಿ (+ 28.37%)

* ತೆರಿಗೆ ಬಳಿಕ ಲಾಭ  INR 11.24 ಕೋಟಿ v/s INR 7.74 ಕೋಟಿ (+ 45.22%)


H1 FY25 -  H2 FY24 ಗೆ ಹೋಲಿಸಿದರೆ

ಒಟ್ಟು ಆದಾಯ INR 504.36 ಕೋಟಿ v/s INR 476.69 ಕೋಟಿ (+ 5.80%)

ತೆರಿಗೆ ಬಳಿಕ ಲಾಭ  INR 11.24 ಕೋಟಿ v/s INR 9.04 ಕೋಟಿ (+ 24.34%)


(ಸೂಚನೆ:  ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ.  ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.) 



Comments

Popular posts from this blog