ಹುಂಡೈ ಐಪಿಒ: ನಿಧಾನವಾಗಿ ಯೋಚಿಸಿ ನೋಡಿ!
ಸದ್ಯಕ್ಕೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿರುವವರೆಲ್ಲರ ಮನಸ್ಸಿನಲ್ಲಿ ಕೊರೆಯುತ್ತಿರುವ ಪ್ರಶ್ನೆ ಹುಂಡೈ ಐಪಿಒದಲ್ಲಿ ಹೂಡಿಕೆ ಮಾಡಬೇಕೇ ಬೇಡವೇ ಎಂಬುದು. ನೀವು ಹೂಡಿಕೆ ಮಾಡುವುದಿದ್ದರೆ ಇಂದೇ ಕೊನೆ ದಿನ.
ಸದ್ಯಕ್ಕೆ ಮೊದಲ ಎರಡು ದಿನದ ಪ್ರತಿಕ್ರಿಯೆ ಗಮನಿಸಿದರೆ, ಹೂಡಿಕೆದಾರರು, ಈ ಐಪಿಒ ಬಗ್ಗೆ ಹೆಚ್ಚಿನ ಕ್ರೇಜ್ ಬೆಳೆಸಿಕೊಂಡಂತಿಲ್ಲ. ಐವತ್ತರಷ್ಟೂ ಷೇರುಗಳಿಗೆ ಇಂದು ಬೆಳಗ್ಗೆಯವರೆಗೆ ಕೊಳ್ಳು ವವರಿರಲಿಲ್ಲ.
ಈ ನಡುವೆ, ಗುರುವಾರ ಬಹುತೇಕ ಎಲ್ಲಾ ಆಟೋ ಸ್ಟಾಕ್ ಗಳು ಕುಸಿದಿವೆ. ಈ ಹಿನ್ನಲೆಯಲ್ಲಿ, ಹೂಡಿಕೆದಾರರು ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ.
(ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.)
Comments
Post a Comment