ಶಾರ್ಟ್ ಟರ್ಮ್ : ಆಟೋಮೊಬೈಲ್ ಷೇರುಗಳಿಂದ ದೂರ ಇರುವುದು ಒಳ್ಳೆಯದು 


ನೀವು ಶಾರ್ಟ್ ಟರ್ಮ್ ಹೂಡಿಕೆದಾರರರಾಗಿದ್ದರೆ, ಮೂರೂ ಪ್ರಮುಖ ಆಟೋಮೊಬೈಲ್ ಷೇರುಗಳಿಂದ ದೂರ ಇರುವುದು ಒಳ್ಳೆಯದು. ಆದರೆ ನೀವು ಲಾಂಗ್ ಟರ್ಮ್  ಹೂಡಿಕೆದಾರರಾಗಿದ್ದರೆ, ನೀವು ಆಟೋಮೊಬೈಲ್ ಷೇರುಗಳ ಖರೀದಿಗೆ ಇದು ಸುಸಮಯ 


ಬುಧವಾರ ಬಹುತೇಕ ಎಲ್ಲಾ ಆಟೋಮೊಬೈಲ್ ಷೇರುಗಳು ಕುಸಿಯುವ ಸಾಧ್ಯತೆ ಇದೆ. ಏಕೆಂದರೆ ನಿನ್ನೆ ಬಿಡುಗಡೆಗೊಂಡ ಮಾರುತಿ ತ್ರೈಮಾಸಿಕ ಫಲಿತಾಂಶ ಎಲ್ಲರಿಗೂ ನಿರಾಸೆ ಉಂಟು ಮಾಡಿದೆ. ಒಂದೊಮ್ಮೆ ಮಾರುತಿ ಷೇರುಗಳು ಕುಸಿದರೆ ಅದರ ದುಷ್ಪರಿಣಾಮ ಟಾಟಾ ಮೋಟರ್ಸ್, ಹುಂಡೈ ಷೇರುಗಳ ಮೇಲೆ ಕೂಡಾ ಬೀಳಬಹುದು. 



ಆದರೆ ನೀವು ಒಂದೊಮ್ಮೆ ಲಾಂಗ್ ಟರ್ಮ್ ಹೂಡಿಕೆದಾರರಾಗಿದ್ದರೆ, ಮುಂದಿನ ವಾರ ಈ ಸ್ಟಾಕ್ ಗಳ ಖರೀದಿಗೆ ಯೋಚಿಸಬಹುದು. ಏಕೆಂದರೆ ಈ ಹಿನ್ನಡೆ ತಾತ್ಕಾಲಿಕ.  ಸುಮಾರು ಆರು ತಿಂಗಳಲ್ಲಿ ಈ ಸ್ಟಾಕುಗಳು ಸುಮಾರು ಮೂವತ್ತು ಪ್ರತಿಶತ ರಿಟರ್ನ್ಸ್ ನೀಡುವ ನಿರೀಕ್ಷೆ ಇದೆ. 


(ಸೂಚನೆ:  ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ.  ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.) 


Comments

Popular posts from this blog