190 ರುಪಾಯಿಗೆ ತಲುಪಲಿದೆಯೇ ಟಾಟಾ ಸ್ಟೀಲ್ ಷೇರು ?
ಸದ್ಯಕ್ಕೆ ಅತ್ಯಂತ ಕಡಿಮೆ ದರದಲ್ಲಿ ಲಭ್ಯವಿರುವ ಏಕೈಕ ಟಾಟಾ ಕಂಪನಿ ಷೇರು ಎಂದರೆ ಅದು ಟಾಟಾ ಸ್ಟೀಲ್. 160 ರೂಪಾಯಿ ಆಸುಪಾಸಿನಲ್ಲಿರುವ ಈ ಷೇರುಗಳು 190 ರುಪಾಯಿಗೆ ತಲುಪಲಿದೆ ಎನ್ನುವ ಗುರಿಯನ್ನು ಜೆಎಂ ಫೈನಾನ್ಸಿಯಲ್ ಸಂಸ್ಥೆ ನೀಡಿದೆ. ಅಂದರೆ ಹೂಡಿಕೆದಾರರು ಸುಮಾರು ಮೂವತ್ತು ರೂಪಾಯಿಗಳ ಲಾಭ ಗಳಿಸುವ ಸಾಧ್ಯತೆ ಇದೆ. ಅಂದರೆ ಸುಮಾರು ೨೦ ಪ್ರತಿಶತ ಲಾಭದ ನಿರೀಕ್ಷೆ ಇದೆ.
ಟಾಟಾ ಸ್ಟೀಲ್ ಷೇರುಗಳು 2024 ರಲ್ಲಿ ಇದುವರೆಗೆ 15 ಶೇಕಡಾ ಮತ್ತು ಕಳೆದ ಒಂದು ವರ್ಷದಲ್ಲಿ ಶೇಕಡಾ 28 ರಷ್ಟು ಧನಾತ್ಮಕ ಲಾಭವನ್ನು ನೀಡಿವೆ. ಕಳೆದ ಎರಡು ವರ್ಷಗಳಲ್ಲಿ ಷೇರುಗಳು ಶೇ.60ರಷ್ಟು ಏರಿಕೆ ಕಂಡಿವೆ.
(ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು )
Comments
Post a Comment