ಸದ್ಯಕ್ಕೆ ಬೆಸ್ಟ್ ಬೆಟ್ಸ್ :ಅಪೋಲೋ ಮೈಕ್ರೋ, ಬಿಇಎಲ್, ವೇದಾಂತ ಹಾಗು ಜಿಯೋ ಫೈನಾನ್ಸ್
ಸ್ಟಾಕ್ ಮಾರ್ಕೆಟ್ ನ ಅನಿಶ್ಚಿತತೆಗಳಿಂದ ನಿಮಗೆ ನಷ್ಟದ ಹೆದರಿಕೆ ಇದ್ದರೆ, ನೀವು ಕಣ್ಮುಚ್ಚಿ ಖರೀದಿಸಬಹುದಾದ ನಾಲ್ಕು ಷೇರುಗಳ ಪಟ್ಟಿ ಇಲ್ಲಿದೆ.
ಅಪೋಲೋ ಮೈಕ್ರೋ
ಬಿಇಎಲ್
ವೇದಾಂತ
ಜಿಯೋ ಫೈನಾನ್ಸ್
ಅಪೊಲೊ ಮೈಕ್ರೋ ಸಿಸ್ಟಮ್ಸ್ ಲಿಮಿಟೆಡ್ (AMSL) ತೆರಿಗೆಯ ನಂತರದ ಲಾಭದಲ್ಲಿ ಎರಡು ಪಟ್ಟು ಹೆಚ್ಚಳವನ್ನು ದಾಖಲಿಸಿದೆ. ಸೆಪ್ಟೆಂಬರ್ 2024 ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ಕಂಪನಿ ಸುಮಾರು 16 ಕೋಟಿ ರೂ ಲಾಭ ದಾಖಲಿಸಿದೆ. ಒಟ್ಟು ಆದಾಯವು ಹಿಂದಿನ ವರ್ಷದ 87.40 ಕೋಟಿಯಿಂದ 161.30 ಕೋಟಿಗೆ ಏರಿಕೆಯಾಗಿದೆ. AMSL ಮೂಲಸೌಕರ್ಯ, ಸಾರಿಗೆ ಮತ್ತು ಏರೋಸ್ಪೇಸ್‌ನಂತಹ ಕ್ಷೇತ್ರಗಳಲ್ಲಿ ತಂತ್ರಜ್ಞಾನ-ಚಾಲಿತ ಪರಿಹಾರಗಳನ್ನು ಒದಗಿಸುತ್ತಿರುವ ಸಂಸ್ಥೆಯಾಗಿದೆ.
ಸದ್ಯಕ್ಕೆ ನೂರು ರೂಪಾಯಿ ಆಸುಪಾಸಿನಲ್ಲಿ ಸಂಸ್ಥೆಯ ಷೇರು ಇದ್ದು, ಒಂದು ವರ್ಷದಲ್ಲಿ ಸುಮಾರು ಇನ್ನೂರ ಐವತ್ತರ ಸಮೀಪ ಇದು ತಲುಪಬಹುದು ಎನ್ನುವ ನಿರೀಕ್ಷೆ ಇದೆ.
ಇನ್ನು ಜಿಯೋ ಫೈನಾನ್ಸ್ ತನ್ನ ಸೇವಾ ವ್ಯಾಪ್ತಿಯನ್ನು ದೊಡ್ಡ ಮಟ್ಟದಲ್ಲಿ ಹಿಗ್ಗಿಸಿಕೊಳ್ಳುತ್ತಿದೆ. ಹೀಗಾಗಿ, ನಿಮ್ಮ ಇನ್ವೆಸ್ಟ್ಮೆಂಟ್ ಖಂಡಿತವಾಗಿಯೂ ಅಲ್ಲಿ ಸುರಕ್ಷಿತ.
ವೇದಾಂತ ಕಂಪನಿ ತನ್ನ ಸ್ಪ್ಲಿಟ್ ಘೋಷಿಸಿದೆ. ಹೀಗಾಗಿ ಇದು ಕೂಡಾ ಹೂಡಿಕೆದಾರರಿಗೆ ಸುರಕ್ಷಿತ ಸ್ಟಾಕ್. ನಿಗದಿತವಾಗಿ ಕಂಪನಿ ನೀಡುವ ಡಿವಿಡೆಂಡ್ ಈ ಕಂಪನಿಯ ಇನ್ನೊಂದು ವೈಶಿಷ್ಟ್ಯ.
(ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.)
Comments
Post a Comment