ಜಿಎಸ್ಟಿ ಇಳಿಕೆ: ಗಗನದೆತ್ತರ ಏರಲಿವೆ ಆಟೋ ಷೇರುಗಳು 



ಬೆಂಗಳೂರು: ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸ್ವಾತಂತ್ರೋತ್ಯ್ಸವ ದಿನದ ಭಾಷಣ ದೇಶ ಷೇರು ಮಾರುಕಟ್ಟೆಗೆ ಈ ವಾರ ಅತಿ ಅಗತ್ಯವಾದ ಬೂಸ್ಟ್ ನೀಡಲಿದೆ. ಅದರಲ್ಲಿಯೂ ಈ ವಾರ ಆಟೋ ಸ್ಟಾಕ್ ಗಳ ವಾರವಾಗಲಿದೆ. 


ಮೋದಿ ಅವರು  ದೀಪಾವಳಿಯ ಸಂದರ್ಭದಲ್ಲಿ ಆಟೋಮೊಬೈಲ್ ಉದ್ಯಮಕ್ಕೆ ಒಂದು ದೊಡ್ಡ ಕೊಡುಗೆಯಾಗಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಮೇಲಿನ ಜಿಎಸ್‌ಟಿಯನ್ನು 28% ರಿಂದ 18% ಕ್ಕೆ ಇಳಿಸುವ ಮುನ್ಸೂಚನೆ ನೀಡಿದ್ದಾರೆ. ಈ ಕ್ರಮವು ವಾಹನಗಳ ಬೆಲೆಯನ್ನು ಕಡಿಮೆ ಮಾಡಿ, ವಿಶೇಷವಾಗಿ ಎಂಟ್ರಿ-ಲೆವೆಲ್ ಮಾದರಿಗಳಿಗೆ ಗ್ರಾಹಕರ ಬೇಡಿಕೆ ದೊಡ್ಡ ಮಟ್ಟದಲ್ಲಿ ಏರಿಸುವ ಸಾಧ್ಯತೆ ಇದೆ.  


ಪ್ರಸ್ತುತ ಪ್ರಯಾಣಿಕ  ವಾಹನಗಳು ಮತ್ತು ದ್ವಿಚಕ್ರ ವಾಹನಗಳು 28% ಜಿಎಸ್‌ಟಿ ಎದುರಿಸುತ್ತಿವೆ.   ಜೊತೆಗೆ ಕೆಲವು ವಾಹನಗಳಿಗೆ 1% ರಿಂದ 22% ವರೆಗಿನ ಪರಿಹಾರ ಸೆಸ್ ಸೇರಿಕೊಂಡು ಒಟ್ಟು ತೆರಿಗೆ 50% ವರೆಗೆ ಇರುತ್ತದೆ. ಆದರೆ, ಎಲೆಕ್ಟ್ರಿಕ್ ಕಾರುಗಳಿಗೆ ಕೇವಲ 5% ತೆರಿಗೆ ವಿಧಿಸಲಾಗುತ್ತದೆ. ಈ ಜಿಎಸ್‌ಟಿ ಕಡಿತವು ಎಂಟ್ರಿ-ಲೆವೆಲ್ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಉತ್ಪಾದನೆ ಮತ್ತು ಮಾರಾಟವನ್ನು ಉತ್ತೇಜಿಸುವ ನಿರೀಕ್ಷೆಯಿದೆ. 



ನೀವು ದೀರ್ಘಾವಧಿಯ ಹೂಡಿಕೆದಾರರಾಗಿದ್ದರೆ ಖಂಡಿತ ಆಟೋ ಸ್ಟಾಕ್ ಗಳ ಬಗ್ಗೆ ಯೋಚಿಸಬಹುದು. ನಿಮ್ಮ ಹೆಸರಿಗೆ ಯಾವ ಸ್ಟಾಕ್ ಸೂಕ್ತ ಎಂದು ತಿಳಿದುಕೊಳ್ಳಲು ನಮಗೆ ಇಮೇಲ್ ಮಾಡಿ. 


Comments

Popular posts from this blog