ಈ ಎರಡು ಅಗ್ಗದ ಷೇರುಗಳು ನಿಮ್ಮ ಗಮನದಲ್ಲಿರಲಿ
bhatsurabhi311@gmail.com
ಸ್ನೋ ಮ್ಯಾನ್ ಲಾಜಿಸ್ಟಿಕ್ಸ್ (Snowman Logistics) ಹಾಗು ಕಾರ್ಗೊಟ್ರಾನ್ಸ್ (cargotrans maritime) ಷೇರುಗಳು ಸದ್ಯಕ್ಕೆ ಅಗ್ಗದಲ್ಲಿ ದೊರೆಯುತ್ತಿವೆ. ಆದರೆ ಅವುಗಳ ಕ್ಯೂ೪ ಫಲಿತಾಂಶದ ಬಳಿಕ ಅವುಗಳನ್ನು ಖರೀದಿಸಲು ನೀವು ಯೋಚಿಸಬಹುದು.
ಸ್ನೋ ಮ್ಯಾನ್ ಲಾಜಿಸ್ಟಿಕ್ಸ್ ಫಲಿತಾಂಶ ಅಷ್ಟೇನು ಆಶಾದಾಯಕವಾಗಿಲ್ಲ. ಆದರೆ, ಕಂಪನಿಯ ಹೊಸ ಯೋಜನೆಗಳು, ಇದರ ಶೇರು ಮೌಲ್ಯವನ್ನು ದೊಡ್ಡ ಮಟ್ಟಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ನೀವು ಲಾಂಗ್ ಟರ್ಮ್ ಹೂಡಿಕೆದಾರರಾಗಿದ್ದರೆ ಖಂಡಿತಾ ಈ ಸ್ಟಾಕ್ ನಿಮಗೆ ಸೂಕ್ತ.
ಕಂಪನಿಯು ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (DFC) ಸಂಪರ್ಕವನ್ನು 2025ರ ಡಿಸೆಂಬರ್ ವೇಳೆಗೆ ಸಂಪೂರ್ಣವಾಗಿ ಬಳಸಿಕೊಳ್ಳಲು ಯೋಜಿಸುತ್ತಿದ್ದು, ಇದರಿಂದ ರಸ್ತೆ ಸಾಗಾಟದಿಂದ ರೈಲಿಗೆ ಬದಲಾವಣೆಯಾಗಿ ವೆಚ್ಚ ಕಡಿಮೆಯಾಗಬಹುದು ಮತ್ತು ಲಾಭದಾಯಕತೆ ಸುಧಾರಿಸಬಹುದು.
ಇನ್ನು ಕಾರ್ಗೊಟ್ರಾನ್ಸ್ ಷೇರು ಕೂಡಾ ಅಗ್ಗದ ಬೆಲೆಯಲ್ಲಿ ದೊರೆಯುತ್ತಿದೆ. ಕಳೆದ ಕೆಲ ದಿನಗಳಿಂದ ಏರುಗತಿಯಲ್ಲಿ ಸಾಗುತ್ತಿರುವ ಈ ಷೇರು ಮುಂದಿನ ದಿನಗಳಲ್ಲಿ ಸುಮಾರು ೧೦೦ ರುಪಾಯಿಗೆ ತಲುಪುವ ಸಾಧ್ಯತೆ ಇದೆ.
ಕಾರ್ಗೊಟ್ರಾನ್ಸ್ ಮಾರಿಟೈಮ್ ಸಮುದ್ರ ಸಾಗಾಟ, ಕಸ್ಟಮ್ಸ್ ಕ್ಲಿಯರೆನ್ಸ್, ಮತ್ತು ವೇರ್‌ಹೌಸಿಂಗ್ ಸೇವೆಗಳನ್ನು ಒದಗಿಸುವ ಸಣ್ಣ ಕ್ಯಾಪ್ ಕಂಪನಿಯಾಗಿದೆ. ಕಡಿಮೆ P/E ಮತ್ತು ಇತ್ತೀಚಿನ ಏರುಗತಿಯಿಂದ ಆಕರ್ಷಕವಾಗಿದೆ.
Comments
Post a Comment