ಐ ಆರ್  ಇ  ಡಿ ಎ ಐ  ಸ್ಟಾಕ್ ಭಾರಿ ಏರಿಕೆ ಸಾಧ್ಯತೆ! 


ಕಡಿಮೆ ರಿಸ್ಕ್-ಹೆಚ್ಚು ಲಾಭ ನಿರೀಕ್ಷಿಸುವವರಿಗೆ ಸದ್ಯಕ್ಕೆ ಹೇಳಿ ಮಾಡಿಸಿದಂತಹ ಸ್ಟಾಕ್ ಸರಕಾರೀ ಸ್ವಾಮ್ಯದ  ಐಆರ್ ಡಿಎ ಸ್ಟಾಕ್ ( IREDAI Stock )

ಮಂಗಳವಾರ ಸುಮಾರು 9%ದಷ್ಟು ಏರಿಕೆ ಕಂಡಿದ್ದ ಈ ಸ್ಟಾಕ್, ಬುಧವಾರ ಟ್ರೆಂಡಿಂಗ್ ನಲ್ಲಿದೆ.  ಇದಕ್ಕೆ ಕಾರಣ, ಅದರ ಅದ್ಭುತವೆನ್ನಬಹುದಾದ  Q4 ಫಲಿತಾಂಶ. 



ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (IREDAI), ಒಂದು ಸಾರ್ವಜನಿಕ ವಲಯದ NBFC, 2024-25ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕ (Q4 FY25) ಮತ್ತು ಪೂರ್ಣ ವರ್ಷದ ಫಲಿತಾಂಶವನ್ನು ಏಪ್ರಿಲ್ 15, 2025 ರಂದು ಘೋಷಿಸಿತು. Q3 FY25 ರಲ್ಲಿ IREDA ₹425.38 ಕೋಟಿ ನಿವ್ವಳ ಲಾಭವನ್ನು ಗಳಿಸಿತು, ಇದು ಹಿಂದಿನ ವರ್ಷದ ₹335.53 ಕೋಟಿಗಿಂತ 27% ರಷ್ಟು ಹೆಚ್ಚಾಗಿದೆ. Q4 ರ ನಿಖರ ಲಾಭ 502 ಕೋಟಿಗೆ ತಲುಪಿದೆ. 


Q3 FY25 ಫಲಿತಾಂಶವನ್ನು ಮಂಗಳವಾರ ಷೇರು ಮಾರುಕಟ್ಟೆ ಮುಕ್ತಾಯದ ಬಳಿಕ ಘೋಷಿಸಲಾಯಿತು. ಬುಧವಾರ ಮಾರುಕಟ್ಟೆ ಕುಸಿತ ಕಂಡರೂ, ಐಆರ್ ಡಿಎ ಷೇರು ಭರ್ಜರಿ ಏರಿಕೆಯಾಗುವ ಸಾಧ್ಯತೆ ಇದೆ. 

ತಜ್ಞರ ಪ್ರಕಾರ ಈ ಷೇರು ಈಗಿನ 166 ರೂಪಾಯಿಯಿಂದ  203ದತ್ತ ಸಾಗುವ ಸಾಧ್ಯತೆ ಇದೆ. 






Comments

Popular posts from this blog