ಸದ್ಯಕ್ಕೆ ಷೇರು ಮಾರುಕಟ್ಟೆ ಕುಸಿಯುವ ಭೀತಿ ಇಲ್ಲ!
ಕಳೆದ ಮೂರು ವಾರ ಜಾಗತಿಕವಾಗಿ ಷೇರು ಮಾರುಕಟ್ಟೆಯನ್ನು ಅಲುಗಾಡಿಸಿದ್ದು ಟ್ರಂಪ್ ಟ್ರೇಡ್ ವಾರ್ . ಆದರೆ ಈಗ ನೋಡಿದರೆ ಅದರ ತೀವ್ರತೆ ಕಡಿಮೆಯಾಗುತ್ತಿದೆ. ಅಮೆರಿಕಾ ಹಾಗು ಚೀನಾ ನಡುವೆ ಕೂಡಾ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿ ಮಾತುಕತೆಗಳು ಆರಂಭವಾಗಿವೆ. ಈ ಮಾತುಕತೆಗಳು ಸಕಾರಾತ್ಮಕವಾಗಿವೆ ಎಂದು ಸ್ವತಃ ಟ್ರಂಪ್ ಅವರೇ ಘೋಷಿಸಿದ್ದಾರೆ. ಇನ್ನು ರಷ್ಯ- ಉಕ್ರೇನ್ ಯುದ್ಧ ಕೂಡಾ ನಿಲುಗಡೆಯಾಗುವ ಸಾಧ್ಯತೆ ಕಂಡು ಬರುತ್ತಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಸದ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆ ಕುಸಿಯುವ ಸಂಭವನೀಯತೆ ಕಡಿಮೆ.
ಷೇರು ಮಾರುಕಟ್ಟೆಯಲ್ಲಿ ಈವರೆಗೆ ಹಣ ಹೂಡಿಕೆಮಾಡಿ ಕೈಚೆಲ್ಲಿಕೊಂಡಿರುವವರು ಈ ಕೆಳಗಿನ ಸೂತ್ರಗಳನ್ನು ಅನುಸರಿಸಬಹುದು.
೧. ಹೂಡಿಕೆಗೆ ಉತ್ತಮ ಸ್ಟಾಕ್ ಗಳ ಆಯ್ಕೆ.
೨. ಪೆನ್ನಿ ಷೇರು ಮೇಲಿನ ವ್ಯಾಮೋಹ ಕಡಿಮೆ ಮಾಡುವುದು.
೩. ರಕ್ಷಣೆ, ಆರೋಗ್ಯ, ಎನರ್ಜಿ ಸ್ಟಾಕುಗಳ ಆಯ್ಕೆ.
೪. ಮೂಲ ಸೌಕರ್ಯ -ಸಿಮೆಂಟ್ ಕಂಪನಿಗಳ ಭವಿಷ್ಯ ಕೂಡಾ ಚೆನ್ನಾಗಿದೆ.
ಹಾಗದರೆ ನಿಮ್ಮ ಆಯ್ಕೆಯ ಷೇರುಗಳು ಯಾವುವು?
ಇಲ್ಲಿ ನೀವು ಕಾಮೆಂಟ್ ಮಾಡಿ
Comments
Post a Comment