ಸದ್ಯಕ್ಕೆ ಐಟಿ ಷೇರುಗಳ ಖರೀದಿ ಬೇಡ!
ಬೆಂಗಳೂರು: ಟಿಸಿಎಸ್, ಆ ಬಳಿಕ ವಿಪ್ರೋ, ಇಂದು ಇನ್ಫೋಸಿಸ್... ಮೂರೂ ಐಟಿ ದಿಗ್ಗಜ ಕಂಪನಿಗಳ ಷೇರುಗಳು ೨೦೨೪-೨೫ರ ನಾಲ್ಕನೇ ತ್ರೈ ಮಾಸಿಕ ಫಲಿತಾಂಶದ ಬಳಿಕ ಪಾತಾಳದತ್ತ ಮುಖ ಮಾಡಿವೆ. ಟಾಟಾ ಎಲಕ್ಸಿ ಫಲಿತಾಂಶ ಕೂಡ ನಿರಾಶದಾಯಕವಾಗಿದೆ. ಈ ಹಿನ್ನಲೆಯಲ್ಲಿ ಸದ್ಯದ ಮಟ್ಟಿಗೆ ಐಟಿ ಸ್ಟಾಕ್ ಗಳಿಂದ ದೂರ ಇರುವುದು ಉತ್ತಮ.
ಗುರುವಾರ ಭಾರತೀಯ ಷೇರು ಮಾರುಕಟ್ಟೆ ಸುಮಾರು ಒಂದೂವರೆ ಸಾವಿರ ಅಂಶಗಳಷ್ಟು ಏರಿಕೆ ಕಂಡರೂ, ಬಹುತೇಕ ಐಟಿ ಸ್ಟಾಕುಗಳ ಬೆಲೆ ಇಳಿಕೆಯಾಗಿದ್ದವು. ಶುಕ್ರವಾರ ಅವುಗಳು ಮತ್ತೆ ಪತನವಾಗುವ ಸಾಧ್ಯತೆ ಇದೆ.
ಸದ್ಯಕ್ಕೆ ನಾನಾ ಬ್ರೋಕರೇಜ್ ಸಂಸ್ಥೆಗಳ ಸಂಶೋಧನಾ ವರದಿಗಳು , ವಿಪ್ರೋ ಷೇರು ಬೆಲೆ ಗುರಿಯನ್ನು ಸುಮಾರು ಮೂವತ್ತು ರೂಪಾಯಿ ತಗ್ಗಿಸಲಾಗಿದೆ. ಇನ್ಫೋಸಿಸ್ ಎ ಡಿ ಆರ್ (ಅಮೇರಿಕನ್ ಮಾರುಕಟ್ಟೆ) ಗುರುವಾರ ಸುಮಾರು ನಾಲ್ಕು ಪ್ರತಿಶತ ಕುಸಿತ ಕಂಡಿತು. ಹೀಗಾಗಿ ಶುಕ್ರವಾರ, ಅದರ ಬೆಲೆ ನಮ್ಮಲ್ಲೂ ಕುಸಿಯುವ ಸಾಧ್ಯತೆ ಇದೆ. ಉಳಿದ ಐಟಿ ಷೇರುಗಳ ಕತೆ ಭಿನ್ನವಾಗಿಯೇನೂ ಇಲ್ಲ.
ಸದ್ಯಕ್ಕೆ ಹೂಡಿಕೆದಾರರು ಖರೀದಿಸಬಹುದಾದ ಬೆಸ್ಟ್ ಸ್ಟಾಕ್ ಗಳೆಂದರೆ ರಕ್ಷಣಾ ವಲಯದ ಷೇರುಗಳು. ಅವುಗಳು ತೀರಾ ಕುಸಿಯುವ ಸಾಧ್ಯತೆ ಇಲ್ಲ. ಉಳಿದಂತೆ, ಅಮೇರಿಕ ಮಾರುಕಟ್ಟೆ ಅವಲಂಬಿಸಿರುವ ಷೇರುಗಳ ಖರೀದಿ ಮುನ್ನ ಎಚ್ಚರಿಕೆ ಅಗತ್ಯ.
Comments
Post a Comment