ಗುಣಮಟ್ಟದ ಷೇರುಗಳು ಯಾರಿಗೂ ನಷ್ಟ ಉಂಟುಮಾಡಿಲ್ಲ!


ಕಳೆದ ಕೆಲ ದಿನಗಳಿಂದ ವಿಶ್ವಾದ್ಯಂತ ಷೇರು ಮಾರುಕಟ್ಟೆಯಲ್ಲಿ ರಕ್ತದೋಕುಳಿ ಬಗ್ಗೆಗೆನೇ ಸುದ್ದಿ. ಹೂಡಿಕೆದಾರರು ಕೈಸುಟ್ಟುಕೊಂಡ ಬಗ್ಗೆಗೆ ವರ್ಣರಂಜಿತ ವಿಶ್ಲೇಷಣೆಗಳು ಎಲ್ಲೆಡೆ ಕೇಳಿಬರುತ್ತಿವೆ. ಆದರೆ ವಾಸ್ತವದಲ್ಲಿ ಗುಣಮಟ್ಟದ ಷೇರುಗಳೆನಿಸಿಕೊಂಡ ಷೇರುಗಳು ಹೂಡಿಕೆದಾರರಿಗೆ ಅಷ್ಟೇನು ನಷ್ಟ ಉಂಟು ಮಾಡಿಲ್ಲ. 


ಉದಾಹರಣೆಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಷೇರು. ಭಾರತದಲ್ಲಿ ದಿ  ಬೆಸ್ಟ್ ಅನ್ನಿಸಿಕೊಂಡಿರುವ ಷೇರು ಇದು. ಇದರ ಮಾಸಿಕ ಹೆಚ್ಚು-ಕಡಿಮೆ ಬೆಲೆ  ರೂಪಾಯಿ  4492.80 ಹಾಗು ರೂಪಾಯಿ  3388.90.  ಒಂದೊಮ್ಮೆ ತಿಂಗಳ ಹಿಂದೆ ಈ ಷೇರು ಖರೀದಿಸಿದ್ದರೂ, ಈಗ ನೀವು  

 ಲಾಭದಲ್ಲಿರುವ ಸಾಧ್ಯತೆ ಇತ್ತು. 


ಇದೊಂದೇ ಷೇರು ಅಲ್ಲ, ಬದಲಿಗೆ ಐಡಿಬಿಐ ಬ್ಯಾಂಕ್, ಬಿ ಇ ಎಲ್, ಏರ್  ಟೆಲ್, ಹೀಗೆ ಹತ್ತು ಹಲವು ಷೇರುಗಳು ಈ ರಕ್ತದೋಕುಳಿ ಬಳಿಕ ಚೇತರಿಸಿಕೊಂಡಿವೆ.  ರಿಲಯೆನ್ಸ್,  ಟ್ರೆಂಟ್, ಹೀಗೆ  ವಿಶ್ವಾಸಾರ್ಹ ಸಂಸ್ಥೆಗಳ ಷೇರುಗಳು ಕೂಡಾ ಹೀಗೇನೆ. ಒಂದು ದಿನ ಕುಸಿದರು, ಮತ್ತೆ ಪುಟಿದು ನಿಂತಿವೆ. 


 ಆದರೆ ಅತಿ ಕಡಿಮೆ ಅವಧಿಯಲ್ಲಿ ಲಾಭ ಮಾಡುವ ದುರಾಸೆಯೊಂದಿಗೆ ಖರೀದಿಸಿದ ಕೆಲವು ಷೇರುಗಳು ಇನ್ನಿಲ್ಲದಂತೆ ನೆಲಕಚ್ಚಿವೆ. ಈ ಬಾರಿಯ ಷೇರು ಮಾರುಕಟ್ಟೆಯ ರಕ್ತದೋಕುಳಿ ಎಲ್ಲರಿಗೂ ಕಳಿಸಿರುವ ಪಾಠವೊಂದೇ... ಅತಿಯಾಸೆ.. ಗತಿಗೇಡು. 


 

Comments

Popular posts from this blog