Posts

Analysis

 ಜಿಎಸ್ಟಿ ಇಳಿಕೆ: ಗಗನದೆತ್ತರ ಏರಲಿವೆ ಆಟೋ ಷೇರುಗಳು  ಬೆಂಗಳೂರು: ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸ್ವಾತಂತ್ರೋತ್ಯ್ಸವ ದಿನದ ಭಾಷಣ ದೇಶ ಷೇರು ಮಾರುಕಟ್ಟೆಗೆ ಈ ವಾರ ಅತಿ ಅಗತ್ಯವಾದ ಬೂಸ್ಟ್ ನೀಡಲಿದೆ. ಅದರಲ್ಲಿಯೂ ಈ ವಾರ ಆಟೋ ಸ್ಟಾಕ್ ಗಳ ವಾರವಾಗಲಿದೆ.  ಮೋದಿ ಅವರು  ದೀಪಾವಳಿಯ ಸಂದರ್ಭದಲ್ಲಿ ಆಟೋಮೊಬೈಲ್ ಉದ್ಯಮಕ್ಕೆ ಒಂದು ದೊಡ್ಡ ಕೊಡುಗೆಯಾಗಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಮೇಲಿನ ಜಿಎಸ್‌ಟಿಯನ್ನು 28% ರಿಂದ 18% ಕ್ಕೆ ಇಳಿಸುವ ಮುನ್ಸೂಚನೆ ನೀಡಿದ್ದಾರೆ. ಈ ಕ್ರಮವು ವಾಹನಗಳ ಬೆಲೆಯನ್ನು ಕಡಿಮೆ ಮಾಡಿ, ವಿಶೇಷವಾಗಿ ಎಂಟ್ರಿ-ಲೆವೆಲ್ ಮಾದರಿಗಳಿಗೆ ಗ್ರಾಹಕರ ಬೇಡಿಕೆ ದೊಡ್ಡ ಮಟ್ಟದಲ್ಲಿ ಏರಿಸುವ ಸಾಧ್ಯತೆ ಇದೆ.   ಪ್ರಸ್ತುತ ಪ್ರಯಾಣಿಕ  ವಾಹನಗಳು ಮತ್ತು ದ್ವಿಚಕ್ರ ವಾಹನಗಳು 28% ಜಿಎಸ್‌ಟಿ ಎದುರಿಸುತ್ತಿವೆ.   ಜೊತೆಗೆ ಕೆಲವು ವಾಹನಗಳಿಗೆ 1% ರಿಂದ 22% ವರೆಗಿನ ಪರಿಹಾರ ಸೆಸ್ ಸೇರಿಕೊಂಡು ಒಟ್ಟು ತೆರಿಗೆ 50% ವರೆಗೆ ಇರುತ್ತದೆ. ಆದರೆ, ಎಲೆಕ್ಟ್ರಿಕ್ ಕಾರುಗಳಿಗೆ ಕೇವಲ 5% ತೆರಿಗೆ ವಿಧಿಸಲಾಗುತ್ತದೆ. ಈ ಜಿಎಸ್‌ಟಿ ಕಡಿತವು ಎಂಟ್ರಿ-ಲೆವೆಲ್ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಉತ್ಪಾದನೆ ಮತ್ತು ಮಾರಾಟವನ್ನು ಉತ್ತೇಜಿಸುವ ನಿರೀಕ್ಷೆಯಿದೆ.  ನೀವು ದೀರ್ಘಾವಧಿಯ ಹೂಡಿಕೆದಾರರಾಗಿದ್ದರೆ ಖಂಡಿತ ಆಟೋ ಸ್ಟಾಕ್ ಗಳ ಬಗ್ಗೆ ಯೋಚಿ...
 ರಕ್ಷಣಾ ಕ್ಷೇತ್ರದ ಷೇರುಗಳ ಖರೀದಿಗೆ ಇದು ಸುಸಮಯ  bhatsurabhi311@gmail.com ಎಚ್ ಎ ಎಲ್  (ರೂ 4652.55 ), ಬಿ ಇ ಎಲ್ ( ರೂ 394.70), ಅಪೋಲೋ ಮೈಕ್ರೋ ಸಿಸ್ಟಮ್ಸ್ ( ರೂ177.20 ),  ಪರಸ್ (ರೂ  795.65 ), ಬಿ ಇ ಎಂ ಎಲ್ (ರೂ 4,401.00), ಐಡಿಯಾ ಫೋರ್ಜ್ (ರೂ  542.10)  ಷೇರುಗಳು ಶುಕ್ರವಾರ ದೊಡ್ಡ ಮಟ್ಟದ ಕುಸಿತ ಕಂಡವು.  ಸತತ ಮೂರನೇ ದಿನದ ಕುಸಿತ ಇದಾಗಿದೆ. ತಜ್ಞರ ಪ್ರಕಾರ ಈ ಕುಸಿತ ಈ ಷೇರುಗಳ ಖರೀದಿಗೆ ಸುವರ್ಣ ಅವಕಾಶವನ್ನು ತೆರೆದಿಟ್ಟಿದೆ.   ನಿಫ್ಟಿ ಡಿಫೆನ್ಸ್ ಸೂಚ್ಯಂಕ,  ಎರಡು ತಿಂಗಳ ಹಿಂದಿನ ಮಟ್ಟಕ್ಕೆ ಕುಸಿದಿದ್ದು, ತಜ್ಞರ ಪ್ರಕಾರ ಇದಕ್ಕೆ ಕಾರಣ ಪ್ರಾಫಿಟ್ ಬುಕ್ಕಿಂಗ್. ಈ ವಾರ ಸೂಚ್ಯಂಕ ಎರಡು ಪ್ರತಿಶತ ಕುಸಿದಿದ್ದರೆ, ಅದರ ಹಿಂದಿನ ವಾರ ಅದು ಐದು ಪ್ರತಿಶತ ಕುಸಿದಿತ್ತು.  ತಜ್ಞರ ಪ್ರಕಾರ, ಈ ಕ್ಷೇತ್ರದ ಉತ್ತಮ ಷೇರುಗಳ ಖರೀದಿಗೆ ಹೂಡಿಕೆದಾರರಿಗೆ ಈ ಕುಸಿತ ದಿಡ್ಡಿ ಬಾಗಿಲು ತೆರೆದಿದೆ. ಅಂದರೆ, ಸದ್ಯಕ್ಕೆ ನಿಮಗೆ ಲಾಭದ ಅಪೇಕ್ಷೆ ಇಲ್ಲವಾದರೆ, ನೀವು ದೀರ್ಘಾವಧಿ ಹೂಡಿಕೆದಾರರಾಗಿದ್ದರೆ , ಖಂಡಿತ ಈ ಷೇರುಗಳು ನಿಮ್ಮ ಪಾಲಿಗೆ ಬಂಗಾರದ ಮೊಟ್ಟೆ ಇಡುವ ಕೋಳಿಗಳಾಗಬಹುದು.  ಆದರೆ ಕೆಟ್ಟ ಸ್ಟಾಕ್ ಖರೀದಿಸಿ ಕೈಸುಟ್ಟುಕೊಳ್ಳಬೇಡಿ.  Catch a falling star and put it in your pocket, never let it fade away. Catch a...
 ಸದ್ಯಕ್ಕೆ ಷೇರು ಮಾರುಕಟ್ಟೆ ಕುಸಿಯುವ ಸಾಧ್ಯತೆ ಇಲ್ಲ!  ಮೂರು ವರ್ಷಗಳ ಬಳಿಕ ಇದೆ ಮೊದಲ ಬಾರಿಗೆ  ಜಾಗತಿಕ ಆರ್ಥಿಕತೆಯಲ್ಲಿ ಒಂದು ರೀತಿಯ ಸ್ಥಿರತೆ ಕಂಡು ಬರಲಾರಂಭಿಸಿದೆ.  ಉಕ್ರೇನ್-ರಷ್ಯಾ ಯುದ್ಧ ಹೊರತು ಪಡಿಸಿದರೆ, ಸದ್ಯಕ್ಕೆ  ಜಗತ್ತಿನ ಯಾವುದೇ ಭಾಗದಲ್ಲಿ ಹೊಸ ಯುದ್ಧ ಏರ್ಪಡುವ ಸಾಧ್ಯತೆ ಇಲ್ಲ. ಇನ್ನೊಂದೆಡೆ  ಕಚ್ಚಾ ತೈಲ ಬೆಲೆಯ  ಭಾರಿ ಪ್ರಮಾಣದಲ್ಲಿ  ಇಳಿಕೆ ಕಾಣುತ್ತಿದೆ. ಈ ಎರಡು ಕಾರಣಗಳಿಂದಾಗಿ ಹಣದುಬ್ಬರ ದೊಡ್ಡ ಮಟ್ಟದಲ್ಲಿ ಕುಸಿಯುತ್ತಿದೆ. ಪರಿಣಾಮ ಷೇರು ಮಾರುಕಟ್ಟೆ  ದೊಡ್ಡ ಮಟ್ಟದಲ್ಲಿ ಏರಿಕೆ ಕಾಣುವ ಸಾಧ್ಯತೆ ಕಂಡು ಬರಲಾರಂಭಿಸಿದೆ.  ಈ ಮೂರೂ  ಅಂಶಗಳು ಷೇರು ಮಾರುಕಟ್ಟೆಯ ಕುಸಿತದ ಸಾಧ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡಿವೆ. ಗಾಜಾ, ಉಕ್ರೇನ್ ಹೊರತುಪಡಿಸಿದರೆ,   ಜಾಗತಿಕವಾಗಿ ಇನ್ನಾವುದೇ ಭಾಗದಲ್ಲಿ   ಯುದ್ಧದ ಸಾಧ್ಯತೆ ಕಾಣದಿರುವುದು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿದೆ. ಭೌಗೋಳಿಕ ರಾಜಕೀಯ ಸ್ಥಿರತೆಯು ಆರ್ಥಿಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತದೆ. ಇದು ವಿಶೇಷವಾಗಿ ತೈಲ, ತಂತ್ರಜ್ಞಾನ, ಮತ್ತು ಉತ್ಪಾದನಾ ವಲಯಗಳಿಗೆ ಲಾಭದಾಯಕವಾಗಿದೆ. ಯುದ್ಧದ ಭಯ ಕಡಿಮೆಯಾದಾಗ, ಕಂಪನಿಗಳು ದೀರ್ಘಕಾಲೀನ ಯೋಜನೆಗಳಿಗೆ ಹೆಚ್ಚಿನ ಹೂಡಿಕೆ ಮಾಡುವ ಸಾಧ್ಯತೆ ಇರುತ್ತದೆ.  ಇದು ಷೇರು ಬೆಲೆಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ...
ರಕ್ಷಣಾ ಷೇರುಗಳು ಆಗಸದೆತ್ತರಕ್ಕೆ ನೆಗೆಯಲಿವೆ: ಕಾರಣ ಇಲ್ಲಿದೆ. bhatsurabhi311@gmail.com ಜಾಗತಿಕ ರಕ್ಷಣಾ ವಲಯದಲ್ಲಿ ಒಂದು ಐತಿಹಾಸಿಕ ಬದಲಾವಣೆಗೆ ಸಾಕ್ಷಿಯಾಗುತ್ತಿದ್ದೇವೆ. ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (ನಾಟೋ) ಸದಸ್ಯ ರಾಷ್ಟ್ರಗಳು ತಮ್ಮ ರಕ್ಷಣಾ ವೆಚ್ಚವನ್ನು ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) 5%ಕ್ಕೆ ಏರಿಕೆ ಮಾಡಲು ಒಪ್ಪಿಗೆ ನೀಡಿವೆ. ಈ ನಿರ್ಧಾರವು ಜೂನ್ 25, 2025 ರಂದು ನೆದರ್‌ಲ್ಯಾಂಡ್ಸ್‌ನ ದಿ ಹೇಗ್‌ನಲ್ಲಿ ನಡೆದ ನಾಟೋ ಶೃಂಗಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಈ ಬೆಳವಣಿಗೆಯು ಭಾರತದ ರಕ್ಷಣಾ ಷೇರುಗಳಿಗೆ ಒಂದು ದೊಡ್ಡ ಅವಕಾಶವನ್ನು ಸೃಷ್ಟಿಸಿದ್ದು, ದೇಶದ ರಕ್ಷಣಾ ಕೈಗಾರಿಕೆಗೆ ಹೊಸ ಚೈತನ್ಯ ತುಂಬಿದೆ. ನಾಟೋದ ರಕ್ಷಣಾ ವೆಚ್ಚ ಏರಿಕೆ: ಒಂದು ಐತಿಹಾಸಿಕ ನಿರ್ಧಾರ ನಾಟೋದ 32 ಸದಸ್ಯ ರಾಷ್ಟ್ರಗಳು 2035ರ ವೇಳೆಗೆ ತಮ್ಮ ಜಿಡಿಪಿಯ 5% ರಕ್ಷಣೆಗೆ ಮೀಸಲಿಡಲು ಒಪ್ಪಿಗೆ ನೀಡಿವೆ. ಈ ನಿರ್ಧಾರವು ರಷ್ಯಾದಿಂದ ಉಂಟಾಗಿರುವ ಭದ್ರತಾ ಕಾಳಜಿಗಳಿಗೆ ಪ್ರತಿಕ್ರಿಯೆಯಾಗಿದ್ದು, ಯುಕ್ರೇನ್‌ನೊಂದಿಗಿನ ಸಂಘರ್ಷದಿಂದ ಉಂಟಾದ ಜಾಗತಿಕ ಭದ್ರತಾ ಬಿಕ್ಕಟ್ಟಿನಿಂದ ಪ್ರೇರಿತವಾಗಿದೆ. ಈ 5% ಗುರಿಯಲ್ಲಿ ಕನಿಷ್ಠ 3.5% ರಷ್ಟು ರಕ್ಷಣಾ ಅಗತ್ಯಗಳಿಗೆ (ಸೈನಿಕರು, ಶಸ್ತ್ರಾಸ್ತ್ರಗಳು, ಟ್ಯಾಂಕ್‌ಗಳು, ವಿಮಾನಗಳು) ಮತ್ತು ಉಳಿದ 1.5% ಸೈಬರ್ ಭದ್ರತೆ, ಮೂಲಸೌಕರ್ಯ ರಕ್ಷಣೆ, ರಕ್ಷಣಾ ಕೈಗಾರಿಕೆಯ ಆಧುನೀಕರಣಕ್ಕೆ ಮೀಸಲಿಡಲಾಗುವುದು. ನಾಟೋ ರ...
 ಈ ಎರಡು ಷೇರುಗಳ ಬಗ್ಗೆ ನಿಮ್ಮ ಗಮನವಿರಲಿ  ಷೇರು ವಿಭಜನೆ ಹಾಗು ಬೋನಸ್ ಷೇರುಗಳ ಘೋಷಣೆ ಹಿನ್ನಲೆಯಲ್ಲಿ ಈ ಎರಡು ಪ್ರಸಿದ್ಧ ಕಂಪನಿಗಳು ಸುದ್ದಿಯಲ್ಲಿವೆ. ಮುಂದಿನ ವಾರ ಈ ಷೇರುಗಳು ತಾತ್ಕಾಲಿಕವಾಗಿಯಾದರೂ  ದೊಡ್ಡ ಮಟ್ಟದ ಏರಿಕೆ ಕಾಣುವ ನಿರೀಕ್ಷೆ ಇದೆ.  ಕೆಲ್ಟನ್ ಟೆಕ್ ಸೊಲ್ಯೂಷನ್ಸ್ ಲಿಮಿಟೆಡ್ ಷೇರು ವಿಭಜನೆ : ಕೆಲ್ಟನ್ ಟೆಕ್ ಸೊಲ್ಯೂಷನ್ಸ್ ಲಿಮಿಟೆಡ್, ಒಂದು ಜಾಗತಿಕ ಐಟಿ ಸೇವೆಗಳ ಕಂಪನಿ, ಜೂನ್ 14, 2025ರಂದು 1:5  ಪ್ರಮಾಣದಲ್ಲಿ ಷೇರು ವಿಭಜನೆ  ಘೋಷಿಸಿತು, ಇದರಿಂದ ಈಕ್ವಿಟಿ ಷೇರುಗಳ ಮುಖಬೆಲೆಯನ್ನು ₹5 ರಿಂದ ₹1 ಕ್ಕೆ ಇಳಿಸಲಾಗುತ್ತದೆ. ಈ ನಡೆಯು ಷೇರುಗಳ ದ್ರವ್ಯತೆಯನ್ನು ಹೆಚ್ಚಿಸಲು ಮತ್ತು ಚಿಲ್ಲರೆ ಹೂಡಿಕೆದಾರರಿಗೆ ಷೇರುಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಉದ್ದೇಶಿಸಿದೆ. ಕಂಪನಿಯ ನಿರ್ದೇಶಕರ ಮಂಡಳಿಯು ₹126 ಬೆಲೆಯಲ್ಲಿ 55 ಲಕ್ಷ ವಾರಂಟ್‌ಗಳನ್ನು ಮಂಜೂರು ಮಾಡಿ, ₹69.3 ಕೋಟಿ ಸಂಗ್ರಹಿಸಲು ಅನುಮೋದನೆ ನೀಡಿದೆ. ಷೇರು ವಿಭಜನೆ   ಪ್ರಸ್ತಾವನೆಗೆ ಜುಲೈ 11, 2025 ರಂದು ನಡೆಯಲಿರುವ ವಿಶೇಷ ಸಾಮಾನ್ಯ ಸಭೆಯಲ್ಲಿ (EGM) ಷೇರ್‌ಹೋಲ್ಡರ್‌ಗಳ ಅನುಮೋದನೆ ಕಾಯ್ದಿರಿಸಲಾಗಿದೆ. FY25 ರಲ್ಲಿ ಕೆಲ್ಟನ್ ₹1,100 ಕೋಟಿ ಆದಾಯವನ್ನು ವರದಿಮಾಡಿದೆ, ಇದು 11.7% ಬೆಳವಣಿಗೆಯನ್ನು ತೋರಿಸುತ್ತದೆ, ಜೊತೆಗೆ ₹79.72 ಕೋಟಿ ನಿವ್ವಳ ಲಾಭವನ್ನು 24.54% ಏರಿಕೆಯೊಂದಿಗೆ ಗಳಿಸಿದೆ. Q4 FY2...
 ವಿಪ್ರೋ ಷೇರು ನಿಮ್ಮ ಬಾಳು ಬದಲಾಯಿಸಬಹುದು!.  ಷೇರು ಬೆಳೆಯ ಏರಿಳಿತ ಏನೇ ಇರಲಿ, ಷೇರು ಮಾರುಕಟ್ಟೆಯಲ್ಲಿ ಗೌರವಾನ್ವಿತ ಸ್ಥಾನ ಹೊಂದಿರುವ ಷೇರುಗಳೆಂದರೆ ಇನ್ಫೋಸಿಸ್ ಹಾಗು ವಿಪ್ರೋ. ಸದ್ಯ 260 ರೂಪಾಯಿ ಆಸುಪಾಸು ದೊರೆಯುತ್ತಿರುವ   ವಿಪ್ರೋ ಷೇರು 316 ರುಪಾಯಿಗೆ ಏರಿಕೆ ಕಾಣಬಹುದು ಅನ್ನುವ ಶಿಫಾರಸು ತಜ್ಞರದ್ದು.  ವಿಪ್ರೋ ಸಂಸ್ಥೆ ಷೇರು ಮರು ಖರೀದಿಗೆ ನಿರ್ಧರಿಸಿದೆ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿ, ಷೇರು ಬೆಲೆ ದೊಡ್ಡ ಮಟ್ಟದಲ್ಲಿ ಏರಿಕೆ ಕಾಣಬಹುದು ಅನ್ನುವ ಲೆಕ್ಕಾಚಾರ ತಜ್ಞರದ್ದು.  ವಿಪ್ರೋ ಸಂಸ್ಥೆಯು ತನ್ನ ಷೇರುಗಳನ್ನು ಮರುಖರೀದಿಸುವ ನಿರ್ಧಾರ ಕೈಗೊಂಡಿರುವುದಾಗಿ ವರದಿಯಾಗಿದೆ. ಈ ಕಾರಣದಿಂದ ಷೇರು ಬೆಲೆಯಲ್ಲಿ ಗಮನಾರ್ಹ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಲೆಕ್ಕಾಚಾರ ಮಾಡಿದ್ದಾರೆ. ಷೇರು ಮರುಖರೀದಿ ಕಾರ್ಯಕ್ರಮವು ಕಂಪನಿಯ ಮೇಲಿನ ವಿಶ್ವಾಸವನ್ನು ತೋರಿಸುತ್ತದೆ ಮತ್ತು ಇದು ಹೂಡಿಕೆದಾರರಿಗೆ ಧನಾತ್ಮಕ ಸಂಕೇತವಾಗಿದೆ. ವಿಪ್ರೋದ ದೃಢವಾದ ಆರ್ಥಿಕ ಸಾಮರ್ಥ್ಯ, ಜಾಗತಿಕ ಮಟ್ಟದಲ್ಲಿ ಅದರ ಸ್ಥಾನಮಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿನ ನಾವೀನ್ಯತೆಯು ಷೇರು ಮಾರುಕಟ್ಟೆಯಲ್ಲಿ ಇದರ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿದೆ. ಹೂಡಿಕೆದಾರರಿಗೆ ವಿಪ್ರೋ ಷೇರು ಒಂದು ಆಕರ್ಷಕ ಅವಕಾಶವಾಗಿದೆ. ಆದರೆ, ಷೇರು ಮಾರುಕಟ್ಟೆಯ ಸ್ವಾಭಾವಿಕ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು, ತಜ್ಞರ ಸಲಹೆಯನ್ನು...
 ಮ್ಯೂಚುವಲ್ ಫಂಡ್‌ಗಳ ಆಯ್ಕೆ: ಏಪ್ರಿಲ್-ಮೇ ತಿಂಗಳಿನಲ್ಲಿ ಭಾರೀ ಖರೀದಿಯಾದ ಷೇರುಗಳು ಹೂಡಿಕೆದಾರರಿಗೆ ಷೇರು ಮಾರುಕಟ್ಟೆಯು ಯಾವಾಗಲೂ ಆಕರ್ಷಣೀಯ ಕ್ಷೇತ್ರವಾಗಿದೆ. ವಿಶೇಷವಾಗಿ ಮ್ಯೂಚುವಲ್ ಫಂಡ್‌ಗಳು (ಎಂಎಫ್‌ಗಳು) ತಮ್ಮ ಖರೀದಿಗಳ ಮೂಲಕ ಕೆಲವು ಕಂಪನಿಗಳ ಷೇರುಗಳಲ್ಲಿ ಗಮನಾರ್ಹ ಆಸಕ್ತಿಯನ್ನು ತೋರಿಸಿವೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ, ಕೆಲವು ಎಂಎಫ್‌ಗಳು ದೊಡ್ಡ ಪ್ರಮಾಣದಲ್ಲಿ ಕೆಲವು ಷೇರುಗಳನ್ನು ಖರೀದಿಸಿದ್ದು, ಇದು ಹೂಡಿಕೆದಾರರ ಗಮನವನ್ನು ಸೆಳೆದಿದೆ. ಈ ಷೇರುಗಳೆಂದರೆ: ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ಸ್ ( ರೂ 280.30)   ಸಾಗಿಲಿಟಿ ಇಂಡಿಯಾ(ರೂ 41.86) ಪಾರಸ್ ಡಿಫೆನ್ಸ್ ಅಂಡ್ ಸ್ಪೇಸ್ ಟೆಕ್ನಾಲಜೀಸ್ (ರೂ . 1632.30) ಇ2ಇ ನೆಟ್‌ವರ್ಕ್ಸ್ (ರೂ  2,595.10) ಕೆಫಿನ್ ಟೆಕ್ನಾಲಜೀಸ್ (ರೂ 1222.85) ಖರೀದಿಗೆ ಯೋಚಿಸಬಹುದೇ? ಈ ಷೇರುಗಳು ಎಂಎಫ್‌ಗಳಿಂದ ಗಮನಾರ್ಹ ಖರೀದಿಯನ್ನು ಕಂಡಿರುವುದರಿಂದ, ಹೂಡಿಕೆದಾರರು ಇವುಗಳನ್ನು ಖರೀದಿಸುವ ಬಗ್ಗೆ ಯೋಚಿಸಬಹುದು. ಆದರೆ, ಷೇರು ಮಾರುಕಟ್ಟೆಯು ಅಪಾಯಗಳಿಗೆ ಒಳಪಟ್ಟಿರುವುದರಿಂದ, ಖರೀದಿಯ ಮೊದಲು ಕೆಲವು ಅಂಶಗಳನ್ನು ಪರಿಗಣಿಸುವುದು ಮುಖ್ಯ: ಕಂಪನಿಯ ಆರ್ಥಿಕ ಸ್ಥಿತಿ: ಕಂಪನಿಯ ಆದಾಯ, ಲಾಭ, ಮತ್ತು ಭವಿಷ್ಯದ ಬೆಳವಣಿಗೆಯ ಯೋಜನೆಗಳನ್ನು ವಿಶ್ಲೇಷಿಸಿ. ಮಾರುಕಟ್ಟೆ ಪರಿಸ್ಥಿತಿ: ಒಟ್ಟಾರೆ ಷೇರು ಮಾರುಕಟ್ಟೆಯ ಚಲನೆಯನ್ನು ಗಮನಿಸಿ. ವೈಯಕ್ತಿಕ ಆರ್ಥಿಕ ಗುರಿಗಳು...