ರಕ್ಷಣಾ ಕ್ಷೇತ್ರದ ಷೇರುಗಳ ಖರೀದಿಗೆ ಇದು ಸುಸಮಯ bhatsurabhi311@gmail.com ಎಚ್ ಎ ಎಲ್ (ರೂ 4652.55 ), ಬಿ ಇ ಎಲ್ ( ರೂ 394.70), ಅಪೋಲೋ ಮೈಕ್ರೋ ಸಿಸ್ಟಮ್ಸ್ ( ರೂ177.20 ), ಪರಸ್ (ರೂ 795.65 ), ಬಿ ಇ ಎಂ ಎಲ್ (ರೂ 4,401.00), ಐಡಿಯಾ ಫೋರ್ಜ್ (ರೂ 542.10) ಷೇರುಗಳು ಶುಕ್ರವಾರ ದೊಡ್ಡ ಮಟ್ಟದ ಕುಸಿತ ಕಂಡವು. ಸತತ ಮೂರನೇ ದಿನದ ಕುಸಿತ ಇದಾಗಿದೆ. ತಜ್ಞರ ಪ್ರಕಾರ ಈ ಕುಸಿತ ಈ ಷೇರುಗಳ ಖರೀದಿಗೆ ಸುವರ್ಣ ಅವಕಾಶವನ್ನು ತೆರೆದಿಟ್ಟಿದೆ. ನಿಫ್ಟಿ ಡಿಫೆನ್ಸ್ ಸೂಚ್ಯಂಕ, ಎರಡು ತಿಂಗಳ ಹಿಂದಿನ ಮಟ್ಟಕ್ಕೆ ಕುಸಿದಿದ್ದು, ತಜ್ಞರ ಪ್ರಕಾರ ಇದಕ್ಕೆ ಕಾರಣ ಪ್ರಾಫಿಟ್ ಬುಕ್ಕಿಂಗ್. ಈ ವಾರ ಸೂಚ್ಯಂಕ ಎರಡು ಪ್ರತಿಶತ ಕುಸಿದಿದ್ದರೆ, ಅದರ ಹಿಂದಿನ ವಾರ ಅದು ಐದು ಪ್ರತಿಶತ ಕುಸಿದಿತ್ತು. ತಜ್ಞರ ಪ್ರಕಾರ, ಈ ಕ್ಷೇತ್ರದ ಉತ್ತಮ ಷೇರುಗಳ ಖರೀದಿಗೆ ಹೂಡಿಕೆದಾರರಿಗೆ ಈ ಕುಸಿತ ದಿಡ್ಡಿ ಬಾಗಿಲು ತೆರೆದಿದೆ. ಅಂದರೆ, ಸದ್ಯಕ್ಕೆ ನಿಮಗೆ ಲಾಭದ ಅಪೇಕ್ಷೆ ಇಲ್ಲವಾದರೆ, ನೀವು ದೀರ್ಘಾವಧಿ ಹೂಡಿಕೆದಾರರಾಗಿದ್ದರೆ , ಖಂಡಿತ ಈ ಷೇರುಗಳು ನಿಮ್ಮ ಪಾಲಿಗೆ ಬಂಗಾರದ ಮೊಟ್ಟೆ ಇಡುವ ಕೋಳಿಗಳಾಗಬಹುದು. ಆದರೆ ಕೆಟ್ಟ ಸ್ಟಾಕ್ ಖರೀದಿಸಿ ಕೈಸುಟ್ಟುಕೊಳ್ಳಬೇಡಿ. Catch a falling star and put it in your pocket, never let it fade away. Catch a...
Posts
Showing posts from July, 2025