200 ರೂಪಾಯಿ ಏರಿಕೆ ಕಾಣಲಿದೆಯೇ ಸ್ವೀಗ್ಗಿ ಷೇರು? ಸಂಖ್ಯಾಶಾಸ್ತ್ರ ಏನು ಹೇಳುತ್ತದೆ? bhatsurabhi311@gmail.com ಸದ್ಯಕ್ಕೆ 323 ರೂಪಾಯಿ ಆಸುಪಾಸಿನಲ್ಲಿ ದೊರೆಯುತ್ತಿರುವ ಸ್ವೀಗ್ಗಿ ಷೇರು 500 ರುಪಾಯಿಗೆ ಏರಲಿದೆಯೇ? ಹಾಗದೆಂದು ಜೆ ಎಂ ಫೈನಾನ್ಸಿಯಲ್ ಸಂಸ್ಥೆ ವರದಿ ನೀಡಿದೆ. ಜೆಎಂ ಫೈನಾನ್ಷಿಯಲ್ ಸ್ವಿಗ್ಗಿ ಷೇರುಗಳಿಗೆ "ಬೈ" ರೇಟಿಂಗ್ ನೀಡಿದೆ. ಸ್ವಿಗ್ಗಿಯನ್ನು ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಗ್ರಾಹಕ ಕಂಪನಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ, ವಿಶೇಷವಾಗಿ ಇದರ ತ್ವರಿತ ವಾಣಿಜ್ಯ ವಿಭಾಗವಾದ ಇನ್‌ಸ್ಟಾಮಾರ್ಟ್‌ಗೆ ಒತ್ತು ನೀಡಲಾಗಿದೆ. ಆದರೆ, ಲಾಭದಾಯಕತೆಗೆ ತಲುಪಲು ಇನ್ನೂ ಸಮಯ ಬೇಕಾಗಬಹುದು. ಮೇ 12, 2025ರಂದು ಸ್ವಿಗ್ಗಿಯ ಪ್ರಿ-ಐಪಿಒ ಹೂಡಿಕೆದಾರರ ಲಾಕ್-ಇನ್ ಅವಧಿ ಮುಕ್ತಾಯಗೊಳ್ಳಲಿದ್ದು, ಒಟ್ಟು ಷೇರುಗಳಲ್ಲಿ ಸುಮಾರು 83% (₹660 ಬಿಲಿಯನ್ ಮೌಲ್ಯ) ಮಾರುಕಟ್ಟೆಗೆ ಲಭ್ಯವಾಗಲಿದೆ. ಇದರಿಂದ ಸ್ವಲ್ಪಕಾಲಿಕ ಏರಿಳಿತ ಸಂಭವಿಸಬಹುದು, ಆದರೆ ದೀರ್ಘಾವಧಿಯ ಹೂಡಿಕೆದಾರರಿಗೆ ಇದು ಖರೀದಿಯ ಅವಕಾಶವಾಗಿರಬಹುದು ಜೆಎಂ ಫೈನಾನ್ಷಿಯಲ್ ಪ್ರಕಾರ, ಇನ್‌ಸ್ಟಾಮಾರ್ಟ್‌ನ ಗ್ರಾಸ್ ಆರ್ಡರ್ ವೇಲ್ಯೂ (GOV) Q4 2025ರಲ್ಲಿ 25% ತ್ರೈಮಾಸಿಕ ಬೆಳವಣಿಗೆ ದಾಖಲಿಸುವ ನಿರೀಕ್ಷೆಯಿದೆ. ಇದು ಸ್ವಿಗ್ಗಿಯ ಒಟ್ಟಾರೆ ಮೌಲ್ಯವನ್ನು ಹೆಚ್ಚಿಸಬಹುದು. ಜೆಎಂ ಫೈನಾನ್ಷಿಯಲ್ ದೀರ್ಘಾವಧಿಯ...
Posts
Showing posts from April, 2025