ಈ ಎರಡು ಬ್ಯಾಂಕ್ ಸ್ಟಾಕ್ ಗಳ ಮೇಲೆ ನಿಮ್ಮ ಗಮನವಿರಲಿ! ಅಚಲವಾದ ಆಶಾವಾದಿಗಳೆಂದರೆ ಅದು ಯಸ್ ಬ್ಯಾಂಕ್ ಷೇರು ಖರೀದಿದಾರರು. ಕಳೆದ ಎರಡು ವರ್ಷಗಳಿಂದ ಅವರು ಈ ಷೇರು ಆಗಸದೆತ್ತರಕ್ಕೆ ಏರಬಹುದು ಎಂಬ ಕನಸಿನೊಂದಿಗೆ ಈ ಹೂಡಿಕೆದಾರರಿದ್ದಾರೆ. ಇನ್ನೊಂದು ಎಲ್ಲರ ನಿರೀಕ್ಷೆಯ ಷೇರು ಸೌತ್ ಇಂಡಿಯನ್ ಬ್ಯಾಂಕ್. ಈ ಬ್ಯಾಂಕ್ ಸ್ಟಾಕ್ ಕೂಡಾ ಆರಕ್ಕೇರದೆ ಮೂರಕ್ಕಿಳಿಯದೆ ೨೦-೩೦ ರೂಪಾಯಿ ಮಧ್ಯದಲ್ಲಿ ತೇಲಾಡುತ್ತಿದೆ. ರೈಟ್ಸ್ ಇಶ್ಯೂ ಬಳಿಕ ಕೂಡಾ ಈ ಷೇರು ಬೆಲೆ ಭಾರಿ ಏರಿಕೆಯನ್ನೇನು ಕಂಡಿಲ್ಲ. ಆದರೆ ಈ ಹೊಸ ವರ್ಷ ಈ ಎರಡು ಷೇರುಗಳು ಕಡಿಮೆ ಬೆಲೆ- ಕಡಿಮೆ ರಿಸ್ಕ್ -ಮಧ್ಯಮ ರಿವಾರ್ಡ್ ಬಯಸುವ ಹೂಡಿಕೆದಾರರಿಗೆ ದಿ ಬೆಸ್ಟ್ ಸ್ಟಾಕ್ ಗಳು ಎನ್ನುತ್ತಾರೆ ತಜ್ಞರು. ಈ ವರ್ಷ ಈ ಬ್ಯಾಂಕ್ ಗಳ ಷೇರುಗಳು ದೊಡ್ಡ ಮಟ್ಟದಲ್ಲಿ ಏರಿಕೆಯಾಗಲು ಹಲವು ಕಾರಣಗಳಿವೆ. ಅದರಲ್ಲೂ ಮುಖ್ಯವಾಗಿ ಯಸ್ ಬ್ಯಾಂಕ್ ಹೊಸ ಹೂಡಿಕೆದಾರರಿಗೆ ಮಾರಾಟವಾಗುವ ಸಾಧ್ಯತೆ ಇದ್ದರೆ, ಸೌತ್ ಇಂಡಿಯನ್ ಬ್ಯಾಂಕ್ ಸಾಧನೆ ಮುಗಿಲು ಮುಟ್ಟುತ್ತಿದೆ. (ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.)
Posts
Showing posts from January, 2025